ನವದೆಹಲಿ : ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ICAI) ತನ್ನ ಪೀರ್ ರಿವ್ಯೂ ಮ್ಯಾಂಡೇಟ್’ನ IVನೇ ಹಂತದ ಅನುಷ್ಠಾನವನ್ನು ಅಧಿಕೃತವಾಗಿ ಒಂದು ವರ್ಷ ಮುಂದೂಡಿದೆ. ಈ ಹಿಂದೆ ಜನವರಿ 1, 2026 ರಿಂದ ಜಾರಿಗೆ ಬರಲು ನಿರ್ಧರಿಸಲಾಗಿದ್ದ ಈ ಹಂತವು ಡಿಸೆಂಬರ್ 31, 2026 ರಿಂದ ಅನ್ವಯವಾಗಲಿದೆ. ಡಿಸೆಂಬರ್ 31, 2025 ರಂದು ಪೀರ್ ರಿವ್ಯೂ ಬೋರ್ಡ್ ಹೊರಡಿಸಿದ ಅಧಿಕೃತ ಸೂಚನೆಯ ಮೂಲಕ ಈ ನಿರ್ಧಾರವನ್ನ ಘೋಷಿಸಲಾಗಿದೆ.
2026ರ ಆರಂಭದಲ್ಲಿ ಹೊಸ ಅವಶ್ಯಕತೆಗಳನ್ನು ಪೂರೈಸಲು ಸಜ್ಜಾಗುತ್ತಿದ್ದ ಹಲವಾರು ಚಾರ್ಟರ್ಡ್ ಅಕೌಂಟೆನ್ಸಿ ಸಂಸ್ಥೆಗಳಿಗೆ ಈ ವಿಸ್ತರಣೆಯು ತಾತ್ಕಾಲಿಕ ಪರಿಹಾರವನ್ನ ನೀಡುತ್ತದೆ. ಪೀರ್ ರಿವ್ಯೂ ಚೌಕಟ್ಟಿನೊಂದಿಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ಮತ್ತು ಹೊಂದಿಸಿಕೊಳ್ಳಲು ಸಂಸ್ಥೆಗಳು ಹೆಚ್ಚಿನ ಸಮಯವನ್ನು ನೀಡುವ ಐಸಿಎಐ ನಿರ್ಧಾರವನ್ನು ಇದು ಪ್ರತಿಬಿಂಬಿಸುತ್ತದೆ.
‘ಬಾಬಾ ವಂಗಾ’ರಿಂದ ‘ನಾಸ್ಟ್ರಾಡಾಮಸ್’ವರೆಗೆ : 2026ರ ಪ್ರಮುಖ10 ಭವಿಷ್ಯವಾಣಿಗಳು ಬಹಿರಂಗ!
ದೇಶಕ್ಕೆ ಮಾದರಿಯಾದ ‘BTM ವಿಧಾನಸಭಾ ಕ್ಷೇತ್ರ’: Solid Waste Management ಯಶಸ್ವಿಯಾಗಿ ಅನುಷ್ಠಾನ








