ಬೆಂಗಳೂರು : ಇತ್ತೀಚಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಗಳ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪರ್ವೆಜ್ ವಿಚಾರಣೆ ವೇಳೆ ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ.
ಹೌದು ಆರೋಪಿ ಪರ್ವೇಜ್ ಮೂಲತಃ ಉತ್ತರ ಪ್ರದೇಶದವನು ಎಂದು ಹೇಳಲಾಗುತ್ತಿದೆ. ಪರ್ವೇಜ್ ಪತ್ನಿ ಮೂಲ ಪಾಕಿಸ್ತಾನದವಳು ಆದರೂ ಕೂಡ ದೆಹಲಿಯಲ್ಲಿ ವಾಸವಿದ್ದರು. ಕೋರ್ಟ್ ಆದೇಶದಂತೆ ದೆಹಲಿಯಲ್ಲಿ ಪರ್ವೆಜ್ ಪತ್ನಿ ವಾಸವಾಗಿದ್ದರು. ಪ್ರತಿ ತಿಂಗಳು ಕೋರ್ಟ್ ನಲ್ಲಿ ಪರ್ವೆಜ್ ಪತ್ನಿ ಸಹಿ ಮಾಡುತ್ತಿದ್ದಾರೆ.
ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪರ್ವೇಶ್ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಪ್ರಮುಖ ಆರೋಪಿ ಪರ್ವೆಜ್ ಸಂಪರ್ಕದಲ್ಲಿ 50ಕ್ಕೂ ಹೆಚ್ಚು ಜನರು ಇದ್ದಾರೆ. ತರಬೇತಿ ಸಂಪರ್ಕದಲ್ಲಿ ಇರುವವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ಎರಡು ತನಿಖಾ ತಂಡಗಳು ಮುಂಬೈ ಮತ್ತು ಚೆನ್ನೈನಲ್ಲಿ ಬೀಡು ಬಿಟ್ಟಿವೆ. ಮೆಹಂದಿ ಫೌಂಡೇಶನ್ ಚಟುವಟಿಕೆಗಳ ಬಗ್ಗೆಯೂ ಪೊಲೀಸರು ನಿಗಾವಹಿಸಿದ್ದಾರೆ.