ಬೆಂಗಳೂರು : ಮಗ ಕುಡಿತದ ಚಟಕ್ಕೆ ದಾಸನಾಗಿದ್ದ. ಈ ವೇಳೆ ತಂದೆ ಕುಡಿಯಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ತಂದೆ ಮಗನ ನಡುವೆ ಗಲಾಟೆ ನಡೆದು ಈ ವೇಳೆ ಮಗ ಕಬ್ಬಿಣದ ರಾಡ್ ನಿಂದ ತಂದೆಯ ತಲೆಗೆ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ.
ಹೌದು ತಂದೆಯನ್ನು ಮಗನೇ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ರಾಜಾಜಿನಗರದ 4ನೇ ಬ್ಲಾಕ್‌ನ 7 ಮುಖ್ಯರಸ್ತೆಯಲ್ಲಿ ನಡೆದಿದೆ. ಕುಡಿತದ ದಾಸನಾಗಿದ್ದ ಮಗ ರಘು (29) ಎಂಬಾತನಿಂದ ತಂದೆ ರಾಮಚಂದ್ರ (59) ಎಂಬಾತನ್ನು ಕೊಲೆ ಮಾಡಲಾಗಿದೆ. ಜನವರಿ 10 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಲಾರಿ ಡ್ರೈವರ್ ಆಗಿದ್ದ ರಘು ಕುಡಿತದ ಚಟದಿಂದ ದಾಸನಾಗಿದ್ದನು. ಕುಡಿತ ಬಿಡುವಂತೆ ತಂದೆ ಮಗನಿಗೆ ದಿನನಿತ್ಯ ಬುದ್ದಿವಾದ ಹೇಳುತ್ತಿದ್ದರು. ನಿತ್ಯ ಕುಡಿದು ಬಂದು ತಂದೆ-ತಾಯಿಗೆ ತೊಂದರೆ ಕೊಡ್ತಿದ್ದ ಆರೋಪಿ ರಘು. ಕೆಲಸಕ್ಕೆ ಹೋಗದೇ ತಂದೆ ಬಳಿ ಎಣ್ಣೆ ಕುಡಿಯಲು ಹಣ ಕೊಡುವಂತೆ ಗಲಾಟೆ ಮಾಡುತ್ತಿದ್ದನು.
ಜನವರಿ 10 ರ ರಾತ್ರಿ 8 ಗಂಟೆ ಸುಮಾರಿಗೆ ಕುಡಿದು ಬಂದು ರಘು ಗಲಾಟೆ ಮಾಡಿದ್ದಾನೆ. ಈ ವೇಳೆ ಬುದ್ದಿವಾದ ಹೇಳಿದ್ದಕ್ಕೆ ಸಿಟ್ಟಿನಿಂದ ಕಬ್ಬಿಣದ ರಾಡ್ ನಿಂದ ತಂದೆಯ ತಲೆಗೆ ಹೊಡೆದಿದ್ದಾನೆ. ನಂತರ ಆತನ ತಂದೆಯ ತಲೆಯಿಂದ ರಕ್ತ ಸುರಿದು ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪಾಪಿ ಮಗ ರಘುವನ್ನು ಇದೀಗ ರಾಜಾಜಿನಗರ ಪೊಲೀಸರು ರೆಸ್ಟ್ ಮಾಡಿದ್ದಾರೆ.