ಬೆಂಗಳೂರು : ಯುವತಿ ಒಬ್ಬಳಿಗೆ ಫುಡ್ ಡೆಲಿವರಿ ಬಾಯ್ ಒಬ್ಬ ಕಿರುಕುಳ ನೀಡಿ ದೌರ್ಜನ್ಯ ಎಸಗಿ ದುರ್ವರ್ತನೆ ತೋರಿರುವ ಘಟನೆ ಬೆಂಗಳೂರಿನ ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯುವತಿಗೆ ಫುಡ್ ಡೆಲಿವರಿ ಬಾಯ್ ಕಿರುಕುಳ ನೀಡಿದ್ದು, ಬೆಂಗಳೂರಿನಲ್ಲಿ ಮಾರ್ಚ್ 17ರಂದು ಈ ಘಟನೆ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ. ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಡೆಲೇವರಿ ಬಾಯ್ ಆಕಾಶ್ ಬಿ ಎಂಬುವವನಿಂದ ಈ ಕೃತ್ಯ ನಡೆದಿದ್ದು ಸಂಜೆ ಆರೋಪಿ ಫುಡ್ ಡೆಲಿವರಿ ನೀಡಲು ಬಂದಿದ್ದ ಎನ್ನಲಾಗುತ್ತಿದೆ.
ಈ ವೇಳೆ ಫುಡ್ ಡೆಲಿವರಿ ಮಾಡಿ ಆಕಾಶ್ ಕುಡಿಯಲು ನೀರು ಕೇಳಿದ್ದ ಈ ವೇಳೆ ಯುವತಿ ನೀರು ತರಲು ಹೋದಾಗ ಆಕಾಶ್ ದುರ್ವರ್ತನೆ ತೋರಿದ್ದಾನೆ ಎಂದು ಆರೋಪಿಸಲಾಗಿದ್ದು, ಯುವತಿಯನ್ನು ಹಿಂಬಾಲಿಸಿ ಕೈ ಹಿಡಿದು ಎಳೆದಾಡಿ ದೌರ್ಜನ್ಯ ಎಸಗಿದ್ದಾನೆ.ಈ ಕುರಿತಂತೆ ಎಚ್ ಎ ಎಲ್ ಪೊಲೀಸ್ ಠಾಣೆಗೆ ಯುವತಿ ಡೆಲಿವರಿ ಬಾಯ್ ವಿರುದ್ಧ ದೂರು ದಾಖಲಿಸಿದ್ದಾಳೆ. ಯುವತಿ ದೂರಿನ ಅನ್ವಯ ಇದೀಗ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ.