Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಜನಸಾಮಾನ್ಯರಿಗೆ ಹಕ್ಕುಗಳ ರಕ್ಷಣೆ ಬಗ್ಗೆ ಅರಿವು ಮೂಡಿಸಬೇಕು’: KSLU ಕುಲಪತಿ ಪ್ರೊ.ಡಾ.ಸಿ.ಬಸವರಾಜು.

20/04/2026 2:23 PM

ರಣಬಿಸಲಿಗೆ ತತ್ತರಿಸಿದ ರಾಜ್ಯದ ಜನತೆ : ಕಲ್ಬುರ್ಗಿಯಲ್ಲಿ ಪೊಲೀಸ್ ಶ್ವಾನಗಳಿಗೆ ಏರ್ ಕೂಲರ್ ವ್ಯವಸ್ಥೆ ಸಿಬ್ಬಂದಿ!

20/04/2026 2:16 PM

ಬೆಂಗಳೂರು ಗುಲಾಬಿ ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸುವಂತೆ ಕೇಂದ್ರಕ್ಕೆ ಸಂಸದ ಡಾ.ಕೆ.ಸುಧಾಕರ್ ಮನವಿ

20/04/2026 2:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್ : `ಮುಟೇಶನ್ ಸಮಸ್ಯೆ’ ಸರಳೀಕೃತಗೊಳಿಸಲು `ಇ-ಪೌತಿ’ ಆಂದೋಲನ
KARNATAKA

ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್ : `ಮುಟೇಶನ್ ಸಮಸ್ಯೆ’ ಸರಳೀಕೃತಗೊಳಿಸಲು `ಇ-ಪೌತಿ’ ಆಂದೋಲನ

By kannadanewsnow5709/07/2025 6:38 AM

ಕೊಪ್ಪಳ : ರೈತಾಪಿ ವರ್ಗದವರ ಸಮಸ್ಯೆಗಳನ್ನು ಪರಿಹರಿಸಿ ಪೌತಿ/ವಾರಸಾ ಸ್ವರೂಪದ ಮುಟೇಶನ್ ಪ್ರಕ್ರಿಯೆಯನ್ನು ಸರಳೀಕೃತಗೊಳಿಸಲು ಕಂದಾಯ ಇಲಾಖೆಯಿಂದ ಇ-ಪೌತಿ/ವಾರಸಾ ಖಾತೆ ಆಂದೋಲನವನ್ನು ನಡೆಸಲಾಗುತ್ತಿದ್ದು, ಜಿಲ್ಲೆಯ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಅವರು ತಿಳಿಸಿದರು.

ಸೋಮವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಇ-ಪೌತಿ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಪೌತಿ/ವಾರಸಾ ರೀತ್ಯಾ ಮಾಲೀಕತ್ವವು ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾವಣೆಯಾಗದಿದ್ದಲ್ಲಿ ಅಂತಹ ಜಮೀನುಗಳ ಸ್ವಾಧೀನವನ್ನು ಹೊಂದಿದ್ದರೂ ಸಹ ಕುಟುಂಬಸ್ಥರಿಗೆ ಜಮೀನು ಅಭಿವೃದ್ಧಿಪಡಿಸಲು ಸಾಲ ಸೌಕರ್ಯಗಳು ದೊರೆಯುವುದಿಲ್ಲ. ಪ್ರಕೃತಿ ವಿಕೋಪದಂತಹ ಅಚಾತುರ್ಯಗಳಿಂದಾಗಿ ಫಸಲು ನಾಶವಾದಾಗ ಸರಕಾರದಿಂದ ನೀಡಲಾಗುವ ವಿಮೆ/ಪರಿಹಾರದ ಮೊಬಲಗನ್ನು ಪಡೆಯುವುದು ದುಸ್ತರವಾಗುತ್ತದೆ. ಅಲ್ಲದೇ ಇಂತಹ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕೆ ಭೂಸ್ವಾಧೀನ ಕಾಯ್ದೆಯಂತೆ ಸ್ವಾಧೀನ ಪಡಿಸಿಕೊಂಡಾಗಲೂ ಸಹ ಪರಿಹಾರದ ಹಣವನ್ನು ಪಡೆಯಲು ವಿವಿಧ ಕಛೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಇರುವುದನ್ನು ಗಮನಿಸಲಾಗಿದೆ. ಈ ರೀತಿಯ ಅಸಂಗತಗಳನ್ನು ತೊಡೆದುಹಾಕಿ, ರೈತಾಪಿ ವರ್ಗದವರ ಸಮಸ್ಯೆಗಳನ್ನು ಪರಿಹರಿಸಿ ಪೌತಿ/ವಾರಸಾ ಸ್ವರೂಪದ ಮುಟೇಶನ್ ಪ್ರಕ್ರಿಯೆಯನ್ನು ಸರಳೀಕೃತಗೊಳಿಸಲು ಇ-ಪೌತಿ/ವಾರಸಾ ಖಾತೆ ಆಂದೋಲನವನ್ನು ನಡೆಸಲು ಕಂದಾಯ ಇಲಾಖೆ ನಿರ್ಧರಿಸಿದೆ ಎಂದು ಮಾಹಿತಿ ನೀಡಿದರು.

ಮಾನ್ಯ ಮುಖ್ಯಮಂತ್ರಿಗಳು 2025-26ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ 418 ರಲ್ಲಿ ಘೋಷಿಸಿರುವಂತೆ ಪಹಣಿಗಳಿಗೆ ಆಧಾರ್ ಜೋಡಣೆ ಸಂದರ್ಭದಲ್ಲಿ ಪೌತಿ ಎಂದು ಗುರುತಿಸಲಾದ ಜಮೀನುಗಳ ಪಹಣಿಗಳನ್ನು ವಾರಸುದಾರರಿಗೆ ಖಾತೆ ಮಾಡುವ ಉದ್ದೇಶದಿಂದ ಇ-ಪೌತಿ ಆಂದೋಲನವನ್ನು ಕೊಪ್ಪಳ ಜಿಲ್ಲೆಯಲ್ಲಿ ಆರಂಭಿಸಲಾಗಿದೆ, ಕಂದಾಯ ಇಲಾಖೆಯು ಸಿದ್ಧಪಡಿಸಿದ ಇ-ಪೌತಿ ತಂತ್ರಾAಶದ ಮೂಲಕ ಇ-ಪೌತಿ ಆಂದೋಲನವನ್ನು ಕೊಪ್ಪಳ ಜಿಲ್ಲೆಯ ಎಲ್ಲಾ 7 ತಾಲೂಕಗಳಲ್ಲಿ ನಡೆಸಲಾಗುವುದು. ಆಧಾರ ಸೀಡಿಂಗ್ ಮೊಬೈಲ್ ಆ್ಯಪ್ ಮೂಲಕ ಈಗಾಗಲೇ ಪಹಣಿಗಳಲ್ಲಿನ ಮಾಲೀಕರ ಖಾತೆಗಳಿಗೆ ಆಧಾರ ಕಾರ್ಡ ಇ-ಕೆವೈಸಿ ಮಾಡಿಸಿ ಆಧಾರ್ ನಂಬರ್ ಅನ್ನು ಪಹಣಿಗೆ ಜೋಡಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಪಹಣಿದಾರರು ಮೃತರಾದ ಸಂದರ್ಭದಲ್ಲಿ ಆಧಾರ ಸೀಡಿಂಗ್ ಆ್ಯಪ್‌ನಲ್ಲಿ ಒಟ್ಟು 70,579 ಪ್ರಕರಣಗಳನ್ನು ಆಧಾರ ಸೀಡಿಂಗ್ ಮೊಬೈಲ್ ಆ್ಯಪ್‌ನಲ್ಲಿ ಮೃತರೆಂದು ಗುರುತಿಸಲಾಗಿದೆ. ಈ ಎಲ್ಲಾ 70,579 ಮೃತ ಪಹಣಿದಾರರ ಕುಟುಂಬಗಳಿಗೆ ಇ-ಪೌತಿ ವಾರಸಾ ಖಾತಾ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದರು.

ಗ್ರಾಮ ಆಡಳಿತಾಧಿಕಾರಿಗಳು ಮೃತ ಕುಟುಂಬದ ಸದಸ್ಯರಿಗೆ ತಿಳುವಳಿಕೆ ಚೀಟಿ ನೀಡುತ್ತಾರೆ. ಸಂಬಂಧಿಸಿದ ವಾರಸುದಾರರು/ಉತ್ತರಾಧಿಕಾರಿಗಳು ಮೃತರ ಮರಣ ಪ್ರಮಾಣ ಪತ್ರ, ಗಣಕೀಕೃತ ವಂಶವೃಕ್ಷ ಪ್ರಮಾಣ ಪತ್ರ, ಸ್ವಾಧೀನದಾರರ ಆಧಾರ ಕಾರ್ಡ ದಾಖಲಾತಿಗಳನ್ನು ಗ್ರಾಮ ಆಡಳಿತ ಅಧಿಕಾರಿಗಳಿಗೆ ಸಲ್ಲಿಸಬೇಕು. ಗ್ರಾಮ ಆಡಳಿತಾಧಿಕಾರಿಗಳು ನಂತರ ಕಾನೂನು ಬದ್ದ ವಾರಸಾದಾರರ ಆಧಾರ ಇ-ಕೆವೈಸಿ ಯನ್ನು ಮಾಡುತ್ತಾರೆ. ಮತ್ತು ಅವರ ಉತ್ತರಾಧಿಕಾರಿಗಳು ಲಭ್ಯವಿದ್ದಲ್ಲಿ ಫೋಟೋ ತೆಗೆದು ಆ್ಯಪ್‌ನಲ್ಲಿ ಅಪ್ಲೋಡ್ ಮಾಡುತ್ತಾರೆ. ಮೃತರ ಇನ್ನಿತರ ಯಾವುದೇ ಸರ್ವೆ ನಂಬರ್‌ಗಳು ಇದ್ದಲ್ಲಿ ಆ ಎಲ್ಲಾ ಸರ್ವೆ ನಂಬರಗಳನ್ನು ಸೇರ್ಪಡೆ ಮಾಡುತ್ತಾರೆ ಎಂದು ಅವರು ಹೇಳಿದರು.

ಇ-ಪೌತಿ ಆಂದೋಲನ ಸಂದರ್ಭದಲ್ಲಿ ಕೆಲವು ಪಹಣಿಗಳಿಗೆ ಸಂಬಂಧಿಸಿದಂತೆ ಮೃತರ ಉತ್ತರಾಧಿಕಾರಿಗಳು ತಕರಾರು ಇದೆ ಎಂದು ಪೌತಿ ಖಾತೆ ಮಾಡಲು ಅನುಮತಿ ನೀಡದೆ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ “ಉತ್ತರಾಧಿಕಾರಿಗಳ ತಕರಾರು ಇದ್ದು, ಪೌತಿ ಖಾತೆ ಮಾಡಲು ಒಪ್ಪಿರುವುದಿಲ್ಲ ಎಂದು ಪಹಣಿ ಕಾಲಂ 11ರಲ್ಲಿ” ನಮೂದಿಸಲಾಗುತ್ತದೆ. ಹೀಗಾಗಿ ಇ-ಪೌತಿ ಖಾತಾಗೆ ಬೇಕಾದ ವಂಶವೃಕ್ಷ, ಮರಣ ಪ್ರಮಾಣದಂತಹ ಇತರ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಆಂದೋಲನ ಯಶಸ್ವಿಗೆ ಜಿಲ್ಲೆಯ ಎಲ್ಲಾ ರೈತರು ಸಹಕರಿಸಬೇಕಾಗಿ ಕೋರಿಕೆ. ಈ ವಿಷಯ ಕುರಿತಂತೆ ಯಾವುದೇ ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸಂಪರ್ಕಿಸಬಹುದು ಎಂದು ಸಚಿವರು ತಿಳಿಸಿದರು.

ಇದೇ ಸಂದರ್ಭ ಕೃಷಿ ಇಲಾಖೆಯ ಮುಂಗಾರು ಭತ್ತದಲ್ಲಿ ಕಣೆ ಹುಳು ಬಾಧೆ ಮತ್ತು ಸಮಗ್ರ ನಿರ್ವಹಣೆ ಹಾಗೂ ಮೆಕ್ಕೆಜೋಳದಲ್ಲಿ ಸೈನಿಕ ಹುಳುವಿನ ನಿರ್ವಹಣೆ ಮತ್ತು ಯೂರಿಯಾ ಬಳಕೆಯಿಂದ ಮಾನವನ ಆರೋಗ್ಯ, ಮಣ್ಣು ಮತ್ತು ಪರಿಸರದ ಮೇಲೆ ಬೀರುವ ಹಾನಿಕಾರಕ ಪರಿಣಾಮಗಳ ಕುರಿತ ಕರಪತ್ರಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ಎಸ್. ತಂಗಡಗಿ ಅವರು ಬಿಡುಗಡೆಗೊಳಿಸಿದರು.

ಈ ಸಂದರ್ಭ ಕೊಪ್ಪಳ ಸಂಸದರಾದ ರಾಜಶೇಖರ ಹಿಟ್ನಾಳ್, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿಗಳಾದ ಸುರೇಶ ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್.ಅರಸಿದ್ದಿ, ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ, ಜಂಟಿ ಕೃಷಿ ನಿರ್ದೇಶಕರಾದ ಟಿ.ಎಸ್. ರುದ್ರೇಶಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಲಿಂಗರಾಜು ಟಿ., ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಉಪನಿರ್ದೇಶಕರು, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Good news for farmers from the state government: 'e-Pauti' movement to simplify the 'mutation problem'
Share. Facebook Twitter LinkedIn WhatsApp Email

Related Posts

‘ಜನಸಾಮಾನ್ಯರಿಗೆ ಹಕ್ಕುಗಳ ರಕ್ಷಣೆ ಬಗ್ಗೆ ಅರಿವು ಮೂಡಿಸಬೇಕು’: KSLU ಕುಲಪತಿ ಪ್ರೊ.ಡಾ.ಸಿ.ಬಸವರಾಜು.

20/04/2026 2:23 PM1 Min Read

ರಣಬಿಸಲಿಗೆ ತತ್ತರಿಸಿದ ರಾಜ್ಯದ ಜನತೆ : ಕಲ್ಬುರ್ಗಿಯಲ್ಲಿ ಪೊಲೀಸ್ ಶ್ವಾನಗಳಿಗೆ ಏರ್ ಕೂಲರ್ ವ್ಯವಸ್ಥೆ ಸಿಬ್ಬಂದಿ!

20/04/2026 2:16 PM1 Min Read

ಬೆಂಗಳೂರು ಗುಲಾಬಿ ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸುವಂತೆ ಕೇಂದ್ರಕ್ಕೆ ಸಂಸದ ಡಾ.ಕೆ.ಸುಧಾಕರ್ ಮನವಿ

20/04/2026 2:14 PM2 Mins Read
Recent News

‘ಜನಸಾಮಾನ್ಯರಿಗೆ ಹಕ್ಕುಗಳ ರಕ್ಷಣೆ ಬಗ್ಗೆ ಅರಿವು ಮೂಡಿಸಬೇಕು’: KSLU ಕುಲಪತಿ ಪ್ರೊ.ಡಾ.ಸಿ.ಬಸವರಾಜು.

20/04/2026 2:23 PM

ರಣಬಿಸಲಿಗೆ ತತ್ತರಿಸಿದ ರಾಜ್ಯದ ಜನತೆ : ಕಲ್ಬುರ್ಗಿಯಲ್ಲಿ ಪೊಲೀಸ್ ಶ್ವಾನಗಳಿಗೆ ಏರ್ ಕೂಲರ್ ವ್ಯವಸ್ಥೆ ಸಿಬ್ಬಂದಿ!

20/04/2026 2:16 PM

ಬೆಂಗಳೂರು ಗುಲಾಬಿ ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸುವಂತೆ ಕೇಂದ್ರಕ್ಕೆ ಸಂಸದ ಡಾ.ಕೆ.ಸುಧಾಕರ್ ಮನವಿ

20/04/2026 2:14 PM

BIG NEWS : ಚಿಕ್ಕಮಗಳೂರಲ್ಲಿ ಸಾಕು ನಾಯಿಗಳಿಂದ ಡೆಡ್ಲಿ ಅಟ್ಯಾಕ್ : 7 ವರ್ಷದ ಬಾಲಕನ ಸ್ಥಿತಿ ಗಂಭೀರ!

20/04/2026 2:01 PM
State News
KARNATAKA

‘ಜನಸಾಮಾನ್ಯರಿಗೆ ಹಕ್ಕುಗಳ ರಕ್ಷಣೆ ಬಗ್ಗೆ ಅರಿವು ಮೂಡಿಸಬೇಕು’: KSLU ಕುಲಪತಿ ಪ್ರೊ.ಡಾ.ಸಿ.ಬಸವರಾಜು.

By kannadanewsnow0920/04/2026 2:23 PM KARNATAKA 1 Min Read

ಹುಬ್ಬಳ್ಳಿ: ಕಾನೂನು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರು—ಶಿಕ್ಷಕರು, ಶಿಕ್ಷಕೇತರರು, ನ್ಯಾಯವಾದಿಗಳು ಹಾಗೂ ವಿದ್ಯಾರ್ಥಿಗಳು—ಜನಸಾಮಾನ್ಯರಲ್ಲಿ ಅವರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಅರಿವು ಮೂಡಿಸುವ…

ರಣಬಿಸಲಿಗೆ ತತ್ತರಿಸಿದ ರಾಜ್ಯದ ಜನತೆ : ಕಲ್ಬುರ್ಗಿಯಲ್ಲಿ ಪೊಲೀಸ್ ಶ್ವಾನಗಳಿಗೆ ಏರ್ ಕೂಲರ್ ವ್ಯವಸ್ಥೆ ಸಿಬ್ಬಂದಿ!

20/04/2026 2:16 PM

ಬೆಂಗಳೂರು ಗುಲಾಬಿ ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸುವಂತೆ ಕೇಂದ್ರಕ್ಕೆ ಸಂಸದ ಡಾ.ಕೆ.ಸುಧಾಕರ್ ಮನವಿ

20/04/2026 2:14 PM

BIG NEWS : ಚಿಕ್ಕಮಗಳೂರಲ್ಲಿ ಸಾಕು ನಾಯಿಗಳಿಂದ ಡೆಡ್ಲಿ ಅಟ್ಯಾಕ್ : 7 ವರ್ಷದ ಬಾಲಕನ ಸ್ಥಿತಿ ಗಂಭೀರ!

20/04/2026 2:01 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.