ಬೆಂಗಳೂರು : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಭಾವನಿಂದ ಭಾಮೈದನ ಹತ್ಯೆಗೆ ಈಡಗಿರುವ ಘಟನೆ ಬೆಂಗಳೂರಿನ ವೆಂಕಟೇಶಪುರದಲ್ಲಿ ನಡೆದಿದೆ.ಹೌದು ಕಿರಣ್ ಕುಮಾರ್ (32) ಹತ್ಯೆಗೆ ಈಡಾದ ವ್ಯಕ್ತಿಯಾಗಿದ್ದಾನೆ.
ಚಾಕುವಿನಿಂದ ಇರಿದು ಭಾಮೈದನನ್ನು ಭಾವ ಲಕ್ಷ್ಮಣ ಎನ್ನುವವರು ಭೀಕರವಾಗಿ ಹತ್ಯೆಗೈದಿದ್ದಾರೆ. ಆರೋಪಿ ಲಕ್ಷ್ಮಣ ಮತ್ತು ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ. ಇದೇ ವಿಚಾರಕ್ಕೆ ಇಂದು ಭಾವ ಹಾಗೂ ಬಾಮೈದನ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಕಿರಣ್ ಕುಮಾರ್ ಬೆನ್ನಿಗೆ ಲಕ್ಷ್ಮಣ ಚಾಕು ಇರಿದಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ಕಿರಣ್ ನನ್ನು ಸ್ಥಳೀಯ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕಿರಣ್ ಕುಮಾರ್ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಕೆ.ಜಿ ಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.