Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾರ್ವಜನಿಕರೇ ಗಮನಿಸಿ : ನಿಮ್ಮ ಮೊಬೈಲ್ ನಲ್ಲಿ ಇರಲೇಬೇಕು ಈ 12 ಸರ್ಕಾರಿ ಆ್ಯಪ್‌ ಗಳು | Government Apps

BIG NEWS : ಆರ್‌ಸಿಬಿ ವಿಜಯೋತ್ಸವ ವೇಳೆ ಹುಚ್ಚಾಟ : ಒಂದೇ ರಾತ್ರಿ 260 ಡ್ರಿಂಕ್ & ಡ್ರೈವ್‌ ಕೇಸ್ ದಾಖಲು!

BIG NEWS : ಅಪ್ರಾಪ್ತ ಮಕ್ಕಳನ್ನು `ಸೆಕ್ಸ್ ಟ್ರಾಫಿಕಿಂಗ್’ ದಂಧೆಗೆ ತಳ್ಳುವ ಆರೋಪಿಗಳ ವಿರುದ್ಧ `ಪೋಕ್ಸೋ ಕೇಸ್’ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BBMPಯಿಂದ ಗಣೇಶ ವಿಸರ್ಜನೆಗೆ 41 ಕೆರೆ, 489 ತಾತ್ಕಾಲಿಕ ಸಂಚಾರಿ ಕಲ್ಯಾಣಿ ವ್ಯವಸ್ಥೆ
KARNATAKA

BBMPಯಿಂದ ಗಣೇಶ ವಿಸರ್ಜನೆಗೆ 41 ಕೆರೆ, 489 ತಾತ್ಕಾಲಿಕ ಸಂಚಾರಿ ಕಲ್ಯಾಣಿ ವ್ಯವಸ್ಥೆ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬಿಬಿಎಂಪಿ ವತಿಯಿಂದ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 41 ಕೆರೆ ಅಂಗಳದ ಶಾಶ್ವತ/ತಾತ್ಕಾಲಿಕ ಕಲ್ಯಾಣಿಗಳು ಹಾಗೂ 489 ತಾತ್ಕಾಲಿಕ ಸಂಚಾರಿ ವಾಹನಗಳ ವ್ಯವಸ್ಥೆಯನ್ನು ಎಲ್ಲಾ ವಾರ್ಡ್ ಗಳಲ್ಲಿ ಮಾಡಿಕೊಳ್ಳಲಾಗಿದೆ ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.

ಗಣೇಶ ವಿಸರ್ಜನೆಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿಗಳನ್ನು ಸಹ ನಿಯೋಜಿಸಲಾಗಿದೆ. ಅದರ ಸಂಪೂರ್ಣ ವಿವರಗಳಿಗಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ ಬಿಬಿಎಂಪಿ ವೆಬ್ ಸೈಟ್ ಲಿಂಕ್ https://apps.bbmpgov.in/ganesh2025/ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ಪ್ರಮುಖ ಕಲ್ಯಾಣಿಗಳಲ್ಲಿ ಅಗತ್ಯ ವ್ಯವಸ್ಥೆ:

ಪ್ರತಿ ವರ್ಷದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಕೆರೆಗಳಾದ ಸ್ಯಾಂಕಿಕೆರೆ, ಹಲಸೂರು ಕರೆ, ಯಡಿಯೂರು ಕೆರೆ ಹಾಗೂ ಹೆಬ್ಬಾಳ ಕೆರೆ ಹಾಗೂ ಇತರೆ ಕೆರೆಗಳ ಅಂಗಳದಲ್ಲಿರುವ ಕಲ್ಯಾಣಿಗಳಲ್ಲಿ ಗಣೇಶ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಲ್ಯಾಣಿಗಳ ಆವರಣದಲ್ಲಿ ವ್ಯವಸ್ಥಿತವಾಗಿ ಬ್ಯಾರಿಕೇಡಿಂಗ್‌ಗಳ ಅಳವಡಿಕೆ, ನುರಿತ ಈಜುಗಾರರ/ಜೀವ ರಕ್ಷಕರ ನಿಯೋಜನೆ, ಸಿಸಿಟಿವಿ ಅಳವಡಿಕೆ, ವಿದ್ಯುತ್ ದೀಪಗಳ ಸೌಲಭ್ಯ ಹಾಗೂ ಪೆಂಡಾಲ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಇನ್ನು ಕಲ್ಯಾಣಿಗಳಲ್ಲಿ ಗಣೇಶ ವಿಸರ್ಜನೆ ಮಾಡಿದ ವೇಳೆ ಸಂಗ್ರಹವಾಗುವ ತ್ಯಾಜ್ಯವನ್ನು ಆಟೋ ಟಿಪ್ಪರ್ ಗಳ ಮೂಲಕ ವಿಲೇವಾರಿ ಮಾಡಲಾಗುತ್ತದೆ.

ಯಡಿಯೂರು ಕೆರೆ ಕಲ್ಯಾಣಿಯಲ್ಲಿ ವಿಸರ್ಜನೆಗೆ ವ್ಯವಸ್ಥೆ:

ಯಡಿಯೂರು ಕೆರೆಯಲ್ಲಿ ಗಣೇಶ ವಿಸರ್ಜನೆಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಪೈಕಿ ದಿನಾಂಕ: 27-08-2025 ರಿಂದ 07-09-2025 ರವರೆಗೆ ಸಾರ್ವಜನಿಕರು ಪರಿಸರ ಸ್ನೇಹಿ ಅಥವಾ ಮಣ್ಣಿನಿಂದ ಮಾಡಿರುವ ಗಣೇಶ ಮೂರ್ತಿಗಳನ್ನು ಯಡಿಯೂರು ಕೆರೆಯಲ್ಲಿ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಹಲಸೂರು ಕೆರೆ ಅಂಗಳದ ಕಲ್ಯಾಣಿ:

ಹಲಸೂರು ಕೆರೆಯ ಕಲ್ಯಾಣಿಯಲ್ಲಿ 27-08-2025 ರಿಂದ 30-09-2025 ರವರೆಗೆ ಪರಿಸರ ಸ್ನೇಹಿ ಮೂರ್ತಿಗಳನ್ನು ಮಾತ್ರ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ. ಹಲಸೂರು ಕೆರೆಯ ಕಲ್ಯಾಣಿಯಲ್ಲಿ ಹೂಳೆತ್ತುವ ಕಾರ್ಯವನ್ನು 01-09-2025, 02-09-2025, 08-09-2025 ಹಾಗೂ 09-09-2025 ರಂದು ನಿರ್ವಹಿಸುವ ಕಾರಣ ಯಾವುದೇ ರೀತಿಯ ಮೂರ್ತಿ ವಿಸರ್ಜನೆಗೆ ಅವಕಾಶ ಇರುವುದಿಲ್ಲ.

ಹೆಬ್ಬಾಳ‌ ಕೆರೆ ಅಂಗಳದ ಕಲ್ಯಾಣಿ:

ಹೆಬ್ಬಾಳ‌ ಕೆರೆ ಅಂಗಳದ ಕಲ್ಯಾಣಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ 10-09-2025 ರವರೆಗೆ ಪರಿಸರ ಸ್ನೇಹಿ ಮೂರ್ತಿಗಳನ್ನು ಮಾತ್ರ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ.

ಸ್ಯಾಂಕಿ ಕೆರೆ ಅಂಗಳದ ಕಲ್ಯಾಣಿ:

ಸ್ಯಾಂಕಿ ಕೆರೆ ಅಂಗಳದ ಕಲ್ಯಾಣಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 04-09-2025 ರವರೆಗೆ ಪರಿಸರ ಸ್ನೇಹಿ ಮೂರ್ತಿಗಳನ್ನು ಮಾತ್ರ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ.

ಸದನದಲ್ಲಿ ಡಿಸಿಎಂ ಡಿಕೆಶಿ RSS ಗೀತೆ ಹೇಳಬಾರದಿತ್ತು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಸೆ.1ರಿಂದ ಪಹಣಿ ತಿದ್ದುಪಡಿ ವಿಶೇಷ ಅಭಿಯಾನ

Share. Facebook Twitter LinkedIn WhatsApp Email

Related Posts

ಸಾರ್ವಜನಿಕರೇ ಗಮನಿಸಿ : ನಿಮ್ಮ ಮೊಬೈಲ್ ನಲ್ಲಿ ಇರಲೇಬೇಕು ಈ 12 ಸರ್ಕಾರಿ ಆ್ಯಪ್‌ ಗಳು | Government Apps

3 Mins Read

BIG NEWS : ಆರ್‌ಸಿಬಿ ವಿಜಯೋತ್ಸವ ವೇಳೆ ಹುಚ್ಚಾಟ : ಒಂದೇ ರಾತ್ರಿ 260 ಡ್ರಿಂಕ್ & ಡ್ರೈವ್‌ ಕೇಸ್ ದಾಖಲು!

2 Mins Read

BREAKING : ಶಿವಮೊಗ್ಗದಲ್ಲಿ ಘೋರ ದುರಂತ : ತಲೆನೋವು ತಾಳಲಾರದೆ ಗನ್‌ನಿಂದ ಶೂಟ್ ಮಾಡಿಕೊಂಡು ವೃದ್ಧ ಆತ್ಮಹತ್ಯೆ!

2 Mins Read
Recent News

ಸಾರ್ವಜನಿಕರೇ ಗಮನಿಸಿ : ನಿಮ್ಮ ಮೊಬೈಲ್ ನಲ್ಲಿ ಇರಲೇಬೇಕು ಈ 12 ಸರ್ಕಾರಿ ಆ್ಯಪ್‌ ಗಳು | Government Apps

BIG NEWS : ಆರ್‌ಸಿಬಿ ವಿಜಯೋತ್ಸವ ವೇಳೆ ಹುಚ್ಚಾಟ : ಒಂದೇ ರಾತ್ರಿ 260 ಡ್ರಿಂಕ್ & ಡ್ರೈವ್‌ ಕೇಸ್ ದಾಖಲು!

BIG NEWS : ಅಪ್ರಾಪ್ತ ಮಕ್ಕಳನ್ನು `ಸೆಕ್ಸ್ ಟ್ರಾಫಿಕಿಂಗ್’ ದಂಧೆಗೆ ತಳ್ಳುವ ಆರೋಪಿಗಳ ವಿರುದ್ಧ `ಪೋಕ್ಸೋ ಕೇಸ್’ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

BREAKING : ಕಂಪ್ಯೂಟರ್ ಆಧಾರಿತ `NEET UG’ ಪರೀಕ್ಷೆಗೆ ಕೋರಿದ್ದ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಣೆ

State News
KARNATAKA

ಸಾರ್ವಜನಿಕರೇ ಗಮನಿಸಿ : ನಿಮ್ಮ ಮೊಬೈಲ್ ನಲ್ಲಿ ಇರಲೇಬೇಕು ಈ 12 ಸರ್ಕಾರಿ ಆ್ಯಪ್‌ ಗಳು | Government Apps

By kannadanewsnow57 KARNATAKA 3 Mins Read

ಬೆಂಗಳೂರು: ದೇಶದ ನಾಗರಿಕರಿಗೆ ಸರ್ಕಾರದ ಸೇವೆಗಳನ್ನು ಇನ್ನಷ್ಟು ಸುಲಭವಾಗಿ ತಲುಪಿಸಲು ಮತ್ತು ಕಾಗದದ ಬಳಕೆಯನ್ನು ಕಡಿಮೆ ಮಾಡಲು ಭಾರತ ಸರ್ಕಾರವು…

BIG NEWS : ಆರ್‌ಸಿಬಿ ವಿಜಯೋತ್ಸವ ವೇಳೆ ಹುಚ್ಚಾಟ : ಒಂದೇ ರಾತ್ರಿ 260 ಡ್ರಿಂಕ್ & ಡ್ರೈವ್‌ ಕೇಸ್ ದಾಖಲು!

BREAKING : ಶಿವಮೊಗ್ಗದಲ್ಲಿ ಘೋರ ದುರಂತ : ತಲೆನೋವು ತಾಳಲಾರದೆ ಗನ್‌ನಿಂದ ಶೂಟ್ ಮಾಡಿಕೊಂಡು ವೃದ್ಧ ಆತ್ಮಹತ್ಯೆ!

ಶಾಸಕ ಗೋಪಾಲಕೃಷ್ಣ ಬೇಳೂರು ಸಚಿವರಾಗಲಿ; ಸಾಗರದಲ್ಲಿ ನಾಗರಾಜ್ ಗುಡ್ಡೇಮನೆ ನೇತೃತ್ವದಲ್ಲಿ ವಿಶೇಷ ಪೂಜೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.