ಬೆಂಗಳೂರು : ಇತ್ತೀಚಿಗೆ ಕೆಪಿಎಸ್‌ಸಿ ನಡೆಸಿರುವ PDO ನೇಮಕಾತಿ ಪರೀಕ್ಷೆಯಲ್ಲಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನವೆಂಬರ್ 17ರಂದು ಪರೀಕ್ಷೆ ನಡೆದಿತ್ತು. ಈ ಒಂದು ನೇಮಕಾತಿ ಪರೀಕ್ಷೆಯ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವ ಕುರಿತು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಅಭ್ಯರ್ಥಿಗಳು ಭಾರಿ ಪ್ರತಿಭಟನೆ ಮತ್ತು ಹೋರಾಟ ನಡೆಸಿದ್ದರು. ಇದೀಗ ಮೇಲ್ವಿಚಾರಕರಿಗೆ ಪ್ರಶ್ನೆ ಪತ್ರಿಕೆ ತಡವಾಗಿ ತಲುಪಿದ ಹಿನ್ನೆಲೆಯ ಕುರಿತಂತೆ ಮತ್ತೊಂದು ವಿಡಿಯೋ ಇದೀಗ ವೈರಲಾಗಿದೆ.
ತುಮಕೂರಿನ ಕೇಂದ್ರದಲ್ಲಿ ಬ್ಲ್ಯೂಟೂತ್ ಬಳಸಿ ಎಕ್ಸಾಂ ಬರೆಯುತ್ತಿದ್ದ ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ಬೆನ್ನಲ್ಲೇ ಪಿಡಿಒ ನೇಮಕಾತಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂಬ ಆರೋಪಗಳು ಸಹ ಕೇಳಿ ಬಂದಿದ್ದವು. ಈ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದರು. ಕೆಲ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಬೇರೆ ವಿದ್ಯಾರ್ಥಿಗಳನ್ನು ಪ್ರಚೋದಿಸಿದ, ಪ್ರತಿಭಟನೆ ಮಾಡಿದ 12 ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪ್ರಶ್ನೆ ಪತ್ರಿಕೆ ನೀಡುವಲ್ಲಿ ವಿಳಂಬ ಸಹ ಆಗಿಲ್ಲ. ಉಪಸಮಿತಿ ಸಲ್ಲಿಸಲಿರುವ ವರದಿಯಲ್ಲಿ ಯಾರಿಗಾದರೂ ಅನ್ಯಾಯವಾಗಿದ್ದಲ್ಲಿ ಅವರಿಗೆ ನ್ಯಾಯ ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದರು
ಹೌದು PDO ನೇಮಕಾತಿ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ಮತ್ತು ಹೋರಾಟ ನಡೆದಿತ್ತು ಈ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ತನಿಖೆಗೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಘಟನೆಗೆ ಕಾರಣವಾದ ವಿಡಿಯೋ ಕೂಡ ವೈರಲ್ ಆಗಿದೆ. ಮೇಲ್ವಿಚಾರಕರಿಗೆ ತಡವಾಗಿ ಪ್ರಶ್ನೆ ಪತ್ರಿಕೆ ಬಂದಿದ್ದು ಬಹಿರಂಗವಾಗಿದೆ ಬೆಳಿಗ್ಗೆ 9:30ಕ್ಕೆ ಪ್ರಶ್ನೆ ಪತ್ರಿಕೆ ಮೇಲ್ವಿಚಾರಕರಿಗೆ ನೀಡದೆ ವಿಳಂಬ ಮಾಡಲಾಗಿದೆ ಎಂದು ವಿಡಿಯೋದಲ್ಲಿ ಅಭ್ಯರ್ಥಿಗಳು ಕೂಡ ಆರೋಪಿಸಿದ್ದಾರೆ.
PDO ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಎಂಬ ಮಾನ್ಯ ಮುಖ್ಯಮಂತ್ರಿಗಳ ಸುಳ್ಳು ಉತ್ತರಕ್ಕೆ ಅಭ್ಯರ್ಥಿಗಳು ಸೆರೆ ಹಿಡಿದಿರುವ ಸಾಕ್ಷಿ ನಿಜ ಕಣ್ಣು ಮುಂದೆ ಇದ್ದರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಸುಳ್ಳುಗಳ ಸರಮಾಲೆಯನ್ನು ಹೆಣೆದಿರುವ KPSC😡 PDO ಮರು ಪರೀಕ್ಷೆ ಆಗಲೇ ಬೇಕು ಹಾಗೂ 12 ವಿದ್ಯಾರ್ಥಿಗಳ ಮೇಲೆ ಹಾಕಿರುವ FIR ಹಿಂಪಡೆಯಬೇಕು… pic.twitter.com/qnprxwritN
— Kanthakumar R / ಕಾಂತಕುಮಾರ್ ಆರ್ (@kanthakumarr) December 14, 2024
		







