ಕಲಬುರ್ಗಿ : ಸಿಗರೇಟ್ ಪ್ಯಾಕೆಟ್ ಕಳ್ಳತನ ಮಾಡಿದ ಆರೋಪದಲ್ಲಿ ಖಾಸಗಿ ಬ್ಲಡ್ ಬ್ಯಾಂಕ್ ಮಾಲೀಕನೊಬ್ಬ ತನ್ನ ಬಳಿ ಕೆಲಸಕ್ಕಿದ್ದ ಯುವಕನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಎಂ.ಬಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ಸಂಜೆ ಈ ಒಂದು ಕೊಲೆ ನಡೆದಿದ್ದು, ಪ್ರಗತಿ ಕಾಲೋನಿಯ ಶಶಿಕಾಂತ್ ನಾಟಿಕಾರ್ (25) ಎಂದು ತಿಳಿದುಬಂದಿದೆ.
ಮೃತ ಶಶಿಕಾಂತ್, ಚಂದ್ರಶೇಖರ ಪಾಟೀಲ್ ಬಳಿ ಕೆಲಸ ಮಾಡುತ್ತಿದ್ದ ಬ್ಲಡ್ ಬ್ಯಾಂಕ್ ನಲ್ಲಿ 1.40 ಲಕ್ಷ ರೂ. ಮೌಲ್ಯದ ಸಿಗರೇಟ್ ಬಾಕ್ಸ್ ಕಳವಾಗಿತ್ತು. ತನ್ನ ಬಳಿ ಕೆಲಸಕ್ಕಿದ್ದ ಶಶಿಕಾಂತ್, ಆಕಾಶ್ ಸಿಗರೇಟ್ ಬಾಕ್ಸ್ ಕದ್ದಿದ್ದಾರೆ ಎಂದು ಆರೋಪಿಸಿ ಮಾಲಕ ಚಂದ್ರಶೇಖರ್ ಅಷ್ಟೂ ಹಣವನ್ನು ಕೊಡುವಂತೆ ಅವರನ್ನು ಕೂಡಿ ಹಾಕಿ ತನ್ನ ಸಹಚರರಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಶಶಿಕಾಂತ್ ಪೋಷಕರಿಗೆ ಕರೆಸಿ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಹಲ್ಲೆಗೆ ಒಳಗಾದಂತಹ ಶಶಿಕಾಂತ್ ಕೂಡಲೇ ಕುಸಿದು ಬಿದ್ದಿದ್ದು ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರೆಗೆ ವಯಸ್ಸಲ್ಲಿ ವೈದ್ಯರು ಶಶಿಕಾಂತ್ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಾದ ಯುವಕ ಶಶಿಕಾಂತ್ ಅವರ ತಂದೆ ಮಲ್ಲಿಕಾರ್ಜುನ್ ರಾಣಪ್ಪ ನಾಟೀಕರ್ ಅವರು ದೂರು ನೀಡಿದ ಬೆನ್ನಲ್ಲೇ ಬ್ಲಡ್ ಬ್ಯಾಂಕ್ ಮಾಲಕ ಚಂದ್ರಶೇಖರ ಮಲ್ಲಿನಾಥ ಪಾಟೀಲ್, ಆದಿತ್ಯ ಅಲಿಯಾಸ್ ಆದೇಶ ಮರಾಠಾ, ಓಂ ಪ್ರಕಾಶ್ ಘೋರವಾಡಿ, ರಾಹುಲ್ ಪಾಟೀಲ್ ಹಾಗೂ ಅಷ್ಪಾಕ್ ಎಂಬುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.