ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕಿಚ್ಚು ಮತ್ತಷ್ಟು ಹೆಚ್ಚಾಗಿದ್ದು ಕಳೆದ ವಾರವಷ್ಟೆ ದೆಹಲಿಗೆ ಕಾಂಗ್ರೆಸ್ಸಿನ 9 ಶಾಸಕರ ತಂಡ ಭೇಟಿ ನೀಡಿತ್ತು. ಇದೀಗ ಇಂದು ದೆಹಲಿಗೆ ತೆರಳಿದ ಕಾಂಗ್ರೆಸ್ನ 6 ಶಾಸಕರ ಮತ್ತೊಂದು ತಂಡ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಶಾಸಕರಾದ ಕದಲೂರು ಉದಯ್ ನೇತೃತ್ವದಲ್ಲಿ ಆರು ಜನ ಶಾಸಕರು ದೆಹಲಿಗೆ ತೆರಳಿದ್ದಾರೆ. ಹೈಕಮಾಂಡ್ ನಾಯಕರ ಭೇಟಿಗೆ ಈ ಒಂದು ಶಾಸಕರ ತಂಡ ಪಟ್ಟು ಹಿಡಿದಿದ್ದು, ಕಳೆದ ವಾರ ಅಷ್ಟೇ ಕಾಂಗ್ರೆಸ್ಸಿನ 9 ಶಾಸಕರು ದೆಹಲಿಗೆ ತೆರಳಿದ್ದರು ಮತ್ತೆ 6 ಶಾಸಕರ ತಂಡ ದೆಹಲಿಗೆ ತೆರಳಿದೆ. ಹಾಗಾಗಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.








