ಚಿಕ್ಕಮಗಳೂರು : ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಇಂದು ಕಾಡಾನೆ ದಾಳಿಗೆ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಯಕ್ಕಡಬೈಲು ಎಂಬ ಗ್ರಾಮದಲ್ಲಿ ಒಂಟಿ ಸಲಗಕ್ಕೆ 60 ವರ್ಷದ ಎಲಿಯಸ್ ಎನ್ನುವ ವ್ಯಕ್ತಿ ಇದೀಗ ಸಾವನಪ್ಪಿದ್ದಾರೆ.
ಕಳೆದ 20 ದಿನದ ಅಂತರದಲ್ಲಿ ಇಬ್ಬರನ್ನು ಒಂಟಿ ಸಲಗ ಬಲಿ ಪಡೆದಿದೆ. ಯಕ್ಕಡಬೈಲು ಗ್ರಾಮದ ಬಳಿ 60 ವರ್ಷದ ಏಲಿಯಾಸ್ ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರ ತಾಲೂಕಿನ ಯಕ್ಕಡ ಬೈಲು ಗ್ರಾಮದ ಈ ವ್ಯಕ್ತಿ ಮನೆಯ ಹಿಂಭಾಗದ ಅರಣ್ಯ ಪ್ರದೇಶದಲ್ಲಿ ಕಾಡಾನೆ ದಾಳಿಗೆ ಇವರು ಬಲಿಯಾಗಿದ್ದಾರೆ.
ಮುತ್ತಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಕ್ಕಡಬೈಲು ಎಂಬಲ್ಲಿ ಒಂದು ಘಟನೆ ನಡೆದಿದೆ.ಕೊಪ್ಪ ವಲಯ ಅರಣ್ಯ ವ್ಯಾಪ್ತಿಯಲ್ಲಿ ಒಂಟಿ ಸಲಗ ದಾಳಿ ಮಾಡಿದೆ. ಕಳೆದ 20 ದಿನದ ಹಿಂದೆ ಸೀತೂರು ಬಳಿ ಉಮೇಶ್ ಎನ್ನುವ ವ್ಯಕ್ತಿಯನ್ನು ಇದೇ ಒಂಟಿ ಸಲಗ ಬಲಿಪಡೆದಿತ್ತು. ಇದೀಗ 2ನೇ ಬಲಿ ಪಡೆದುಕೊಂಡಿದೆ.