ಬೆಂಗಳೂರು : ನಿನ್ನೆ ಬೆಂಗಳೂರಿನಲ್ಲಿ ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆದಿತ್ತು. ರಾಜ್ಯ ಬಿಜೆಪಿ ಕೋರ್ ಕಮಿಟಿಯಲ್ಲಿ ಶ್ರೀರಾಮುಲು ಪಕ್ಷದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದು, ಪಕ್ಷ ತೊರೆಯುವ ಬಗ್ಗೆ ಶ್ರೀರಾಮಲು ಈಗ ಹೇಳಿಕೆ ನೀಡಿದ್ದಾರೆ. ನಿನ್ನೆ ನಡೆದಂತಹ ಕೋರ್ ಕಮಿಟಿ ಸಭೆಯ ಜಟಾಪಟಿ ಇದೀಗ ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು, ಕೋರ್ ಕಮಿಟಿಯಲ್ಲಿನ ಬೆಳವಣಿಗೆ ಕುರಿತು ಶ್ರೀರಾಮುಲು ಇದೀಗ ದೂರು ನೀಡಿದ್ದಾರೆ.
ಹೌದು ನಿನ್ನೆ ಬೆಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿನ ಜಟಾಪಟಿ ಬೆಳವಣಿಗೆ ಬಗ್ಗೆ ಶ್ರೀರಾಮುಲು ಇದೀಗ ದೂರು ನೀಡಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಸಂಘ ಪರಿವಾರದ ಇಬ್ಬರು ಮುಖಂಡರಿಗೆ ಶ್ರೀರಾಮುಲು ಇದೀಗ ದೂರು ನೀಡಿದ್ದಾರೆ.
ಕೋರ್ ಕಮಿಟಿಯಲ್ಲಿ ಅವಮಾನವಾಗುವ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆ. ದೂರವಾಣಿ ಮೂಲಕ ಶ್ರೀರಾಮುಲು ಇದೀಗ ಹೈಕಮಾಂಡ್ ನಾಯಕರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಸಂಡೂರು ಉಪಚುನಾವಣೆಯ ಬಗ್ಗೆ ಕೋರ್ ಕಮಿಟಿಯಲ್ಲಿ ಚರ್ಚೆ ನಡೆದಿತ್ತು. ಈ ವೇಳೆ ಶ್ರೀರಾಮುಲು ಕೆಲಸ ಮಾಡಿಲ್ಲ ಎಂಬ ರೀತಿ ಅಗರ್ವಾಲ್ ಹೇಳಿದ್ದಾರೆ. ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಈ ರೀತಿ ಹೇಳಿಕೆ ನೀಡಿದ್ದಾರೆ.
ಈ ವೇಳೆ ಶ್ರೀ ರಾಮಲು ಅಗರ್ವಾಲ್ ಮಾತಿಗೆ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.ಇನ್ನೂ ಕೂಡ ಉಪಚುನಾವಣೆ ಸೋಲಿನ ಕುರಿತ ವರದಿಯನ್ನೇ ಕೊಟ್ಟಿಲ್ಲ. ಸದಾನಂದ ಗೌಡ ಸಮಿತಿ ಉಪಚುನಾವಣೆ ಕುರಿತಂತೆ ಇನ್ನು ರಿಪೋರ್ಟ್ ಕೊಟ್ಟಿಲ್ಲ ನೀವು ಹೇಗೆ ಕೆಲಸ ಮಾಡಿಲ್ಲ ಎನ್ನುತ್ತೀರಿ? ಎಂದು ಶ್ರೀರಾಮುಲು ಅಗರವಾಲ್ ಅವರಿಗೆ ಪ್ರಶ್ನಿಸಿದ್ದಾರೆ. ಈ ವೇಳೆ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೂ ಶ್ರೀರಾಮುಲು ಪ್ರಶ್ನೆಸಿದ್ದಾರೆ.
ರಾಧಾಮೋಹನ್ ದಾಸ್ ಅಗರ್ವಾಲ್ ಏನೋ ಉತ್ತರ ಪ್ರದೇಶದವರು ರಾಜ್ಯಾಧ್ಯಕ್ಷರಾಗಿ ನೀವಾದರೂ ಹೇಳಿ ನಮ್ಮ ರಕ್ಷಣೆಗೆ ಬರಬೇಕಲ್ಲವೇ? ಎಂದು ಪ್ರಶ್ನಿಸಿದರು. ಇಲ್ಲ ನನ್ನ ಬಗ್ಗೆಯೂ ಹೀಗೆ ಹೇಳಿದ್ದಾರೆ ಎಂದು ಇದೇ ವೇಳೆ ವಿಜಯೇಂದ್ರ ಉತ್ತರಿಸಿದ್ದಾರೆ. ನಿಮಗೆ ಇಷ್ಟ ಇಲ್ಲ ಅಂತಾದರೆ ಬೇಕಾದರೆ ನಾನು ಪಕ್ಷ ಬಿಡುತ್ತೇನೆ ಆದರೆ ಪಕ್ಷ ಬಿಡುವ ಮುನ್ನ ಏನು ಆಗಿದೆ ಎಂದು ಹೇಳಿ ಪಕ್ಷ ತೊರೆಯುತ್ತೇನೆ.ಪ್ರಧಾನಿ ಮೋದಿ ಅಮಿತ್ ಶಾ ಹೈಕಮಾಂಡ್ ಎಲ್ಲರಿಗೂ ಏನು ಆಗಿದೆ ಎಂದು ಹೇಳುತ್ತೇನೆ. ನಾನು ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಇಲ್ಲಿ ಸುಮ್ಮನಿದ್ದರೆ ಕೆಲಸ ಮಾಡಿದವರಿಗೆ ಬೆಲೆ ಇಲ್ಲ ಎಂದು ಕೋರ್ ಕಮಿಟಿ ಸಭೆಯಲ್ಲಿ ಶ್ರೀರಾಮುಲು ಆಕ್ರೋಶ ಹೊರಹಾಕಿದ್ದಾರೆ.