ಬೆಂಗಳೂರು : ಬೆಂಗಳೂರಿನಲ್ಲಿ ಬಿಬಿಎಂಪಿ ನಿರ್ಲಕ್ಷಕ್ಕೆ ಇದೀಗ ಮತ್ತೊಂದು ಅವಘಡ ಸಂಭವಿಸಿದ್ದು, ತಂದೆಯ ಜೊತೆಗೆ ಶಾಲೆಗೆ ತೆರಳುತ್ತಿದ್ದ ವೇಳೆ ಮರದ ಕೊಂಬೆ ಬಿದ್ದು ಬಾಲಕನಿಗೆ ತಲೆಗೆ ಪೆಟ್ಟಾಗಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ನಂದಿ ದುರ್ಗದ ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದೆ.
ಹೌದು ಬಿಬಿಎಂಪಿ ನಿರ್ಲಕ್ಷಕ್ಕೆ ಮರದ ಕೊಂಬೆ ಬಿದ್ದು ಜಾಡೆಂ ಲೂಕಸ್ (14) ವರ್ಷದ ಬಾಲಕ ಐಸಿಯುನಲ್ಲಿ ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಾನೆ. ಮರದ ಕೊಂಬೆ ಬಿದ್ದು ಆಸ್ಪತ್ರೆಯಲ್ಲಿ ಬಾಲಕ ಇದೀಗ ನರಳಾಟ ನಡೆಸುತ್ತಿದ್ದಾನೆ. ಬೆಳಿಗ್ಗೆ ನಂದಿ ದುರ್ಗದ ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದೆ. ತಂದೆ ಜೊತೆ ಸ್ಕೂಟರ್ ಜೊತೆಗೆ ತೆರಳುತ್ತಿದ್ದಾಗ ಮರದ ಕೋಂಬೆ ಮರ ಬಿದ್ದು ಜಾಡಂ ಲೂಕಸ್ ತಲೆಗೆ ಗಂಭೀರವಾದ ಗಾಯಗಳಾಗಿವೆ.
ಘಟನೆ ತಿಳಿದ ತಕ್ಷಣ ಆಸ್ಪತ್ರೆಗೆ ಬಿಬಿಎಂಪಿ ಅಧಿಕಾರಿ ಜಿ.ಎಲ್.ಜಿ ಸ್ವಾಮಿ ಭೇಟಿ ನೀಡಿ ಬಾಲಕನ ಆರೋಗ್ಯವನ್ನು ವಿಚಾರಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಕನ ತಂದೆ ಡೇವಿಡ್, ಎಂದಿನಂತೆ ನನ್ನ ಮಗನನ್ನು ಶಾಲೆಗೆ ಬಿಟ್ಟು ಬರಲು ಹೋಗುತ್ತಿದ್ದಾಗ ನಂದಿ ದುರ್ಗದ ರಸ್ತೆಯಲ್ಲಿ ಮರದ ಗೊಂಬೆ ಬಿದ್ದು ನನ್ನ ಮಗನ ತಲೆಗೆ ಪೆಟ್ಟಾಗಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನೆ ಬಳಿಕ ಅಧಿಕಾರಿಗಳು ಬಂದು ನನ್ನ ಮಗನನ್ನು ವಿಚಾರಿಸಿದ್ದಾರೆ ಎಂದು ಬಿಬಿಎಂಪಿ ನಿರ್ಲಕ್ಷಕ್ಕೆ ಆಕ್ರೋಶ ಹೊರಹಾಕಿದರು.