ನವದೆಹಲಿ : ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡುತ್ತಿದ್ದು, ಬಜೆಟ್ ಆರಂಭಕ್ಕೂ ಮುನ್ನ ತೆಲುಗು ಕವಿ ಗುರುಜಾಡು ಅಪ್ಪಾರಾವ್ ಅವರನ್ನು ಸ್ಮರಿಸಿ ಪ್ರಧಾನಿ ಮೋದಿ ಅವರಿಗೆ ನಮಿಸಿ ಬಜೆಟ್ ಮಂಡನೆ ಆರಂಭಿಸಿದರು.
ಈ ವೇಳೆ ಬಜೆಟ್ ಮಂಡನೆ ಆರಂಭದಲ್ಲಿ ವಿಪಕ್ಷಗಳು ಗದ್ದಲ ಆರಂಭಿಸಿದವು. ಮುಂದಿನ ಐದು ವರ್ಷ ಸುಖ ಭಾರತಕ್ಕಾಗಿ ಬಜೆಟ್ ಮಂಡನೆ ಮಾಡಲಾಗುತ್ತಿದ್ದು ದೇಶ ಕೇವಲ ಮಣ್ಣಿಗೆ ಮಾತ್ರವಲ್ಲ ಜನರಿಗಾಗಿ ದೇಶ. ಭಾರತದ ಅರ್ಥವ್ಯವಸ್ಥೆ ವೇಗದ ಗತಿಯಲ್ಲಿ ಬೆಳೆಯುತ್ತಿದೆ. ಯುವಕರು ರೈತರು ಮಧ್ಯಮ ವರ್ಗಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ ವಿಕಸಿತ ಭಾರತವೇ ನಮ್ಮ ಸರ್ಕಾರದ ಮೊದಲ ಗುರಿಯಾಗಿದೆ ಎಂದು ತಿಳಿಸಿದರು.
2047ಕ್ಕೆ ಬಡತನ ಮುಕ್ತ ಭಾರತ ಕಟ್ಟುವ ಸಂಕಲ್ಪ ಒಂದಾಗಿದ್ದು ಯುವಕರು ಬಡವ ಮಹಿಳೆ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ವಿಕಾಸಿತ್ ಭಾರತ ಗುರಿಯತ್ತ ಭಾರತ ಮುಂದುವರೆದಿದೆ. ಭಾರತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ದೇಶವಾಗಿದೆ. ಸಣ್ಣ ಮತ್ತು ಅತಿ ಸಣ್ಣ ವಲಯಗಳನ್ನು ಕೇಂದ್ರೀಕರಿಸಿದೆ. ರಫ್ತು ಪ್ರೋತ್ಸಾಹ ಹೂಡಿಕೆ ಮೇಲೆ ಗಮನ ಹರಿಸಿದೆ ಎಂದು ತಿಳಿಸಿದರು. ಸತತವಾಗಿ 8ನೇ ಬಾರಿಗೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂದಿಸಿದರು.