ಬೆಂಗಳೂರು : ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡು ಆರೋಪಿಯೊಬ್ಬ ಕಳ್ಳತನಕ್ಕೆ ಇಳಿದಿದ್ದವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಾಫ್ಟ್ವೇರ್ ಇಂಜಿನಿಯರ್ ಕೆ.ಎ ಮೂರ್ತಿ ಎಂಬ ಆರೋಪಿಯನ್ನು ಬೆಂಗಳೂರಿನ ಮಾಗಡಿ ರೋಡ್ ಠಾಣೆ ಪೋಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಟ್ಟಿಂಗ್ ಚಿಟಕ್ಕೆ ಅಂಟಿಕೊಂಡು ಇಂಜಿನಿಯರ್ ಆಗಿದ್ದ ಕೆ.ಎ ಮೂರ್ತಿ ಅಪಾರ ದುಡ್ಡು ಕಳೆದುಕೊಂಡಿದ್ದ. ಬೆಟ್ಟಿಂಗ್ ಆಡಲು ತಂದೆಯ ಹೆಸರಿನಲ್ಲಿದ್ದ ಆಸ್ತಿಯನ್ನು ಕೂಡ ಮಾರಾಟ ಮಾಡಿದ್ದ. ದುಡಿದು ತಿನ್ನೋಣ ಅಂತ ಕುಟುಂಬಸ್ಥರು ಬೆಂಗಳೂರಿಗೆ ಬಂದಿದ್ದಾರೆ. ವಿಪರೀತ ಬೆಟ್ಟಿಂಗ್ ಚಟ ಮೈಗಂಟಿಸಿಕೊಂಡಿದ್ದ ಮೂರ್ತಿ ಸಾಲಗಾರನಾಗಿದ್ದ. ಇನ್ನು ಪುತ್ರನ ಸಾಲ ತೀರಿಸಲು ತಂದೆ ಅಣ್ಣಪ್ಪ ಆಸ್ತಿ ಮಾರಾಟ ಮಾಡಿದ್ದಾರೆ.
ಸಾಫ್ಟ್ವೇರ್ ಇಂಜಿನಿಯರ್ ಆಗಿ ಆರೋಪಿ ಮೂರ್ತಿ ಕೆಲಸ ಮಾಡುತ್ತಿದ್ದ. ಬೆಟ್ಟಿಂಗ್ ಆಡಲು ಮನೆಗಳ್ಳತನ ಮಾಡುತ್ತಿದ್ದ. ಅಂಗಳ ಪರಮೇಶ್ವರಿ ದೇವಸ್ಥಾನಕ್ಕೆ ಬಂದಿದ್ದ ಮಹಿಳೆಯ ಸರ ಕಿತ್ತಿದ್ದ. ಆರೋಪಿ ಬಂಧಿಸಿ ಕರೆತಂದಾಗ ಹಲವು ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಕೋಣನಕುಂಟೆ, ಸದ್ದುಗುಂಟೆಪಾಳ್ಯ ಹಾಗು ಅವಲಹಳ್ಳಿ ವ್ಯಕ್ತಿಯಲ್ಲಿ ಕಳ್ಳತನ ಎಸಗಿದ್ದ ಬಂಧಿತನಿಂದ ಒಟ್ಟು 17 ಲಕ್ಷ ರೂಪಾಯಿ ಮೌಲ್ಯದ 245 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.