ನ್ಯೂಯಾರ್ಕ್ : ವಿದೇಶಿ ವಿದ್ಯಾರ್ಥಿಗಳಿಗೆ ಅಮೆರಿಕಾ ಸರ್ಕಾರ ಇದೀಗ ಬಿಗ್ ಶಾಕ್ ನೀಡಿದೆ. ಅಮೆರಿಕಾದಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ವೀಸಾ ನಿಷೇಧಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದಾರೆ. ಹೊಸದಾಗಿ ವೀಸಾ ಸಲ್ಲಿಸುವ ಪ್ರಕ್ರಿಯೆಗೆ ಡೊನಾಲ್ಡ್ ಟ್ರಂಪ್ ಇದೀಗ ತಡೆ ನೀಡಿದ್ದಾರೆ.
ವೀಸಾ ನಿಷೇಧದಿಂದ ಅಮೆರಿಕದ ಹಲವು ವಿಶ್ವವಿದ್ಯಾಲಯಗಳಿಗೆ ಸಂಕಷ್ಟ ಎದುರಾಗಿದೆ. ಹೌದು ಟ್ರಂಪ್ ಸರ್ಕಾರವು ಹೊಸದಾಗಿ ವೀಸಾಗೋಸ್ಕರ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ವೀಸಾ ನೀಡದಂತೆ ನಿಗದಿಪಡಿಸದಂತೆ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಪ್ರಪಂಚದಾದ್ಯಂತದ ಯುಎಸ್ ರಾಯಭಾರ ಕಚೇರಿಗಳಿಗೆ ಆದೇಶಿಸಿದ್ದಾರೆ.
ತಕ್ಷಣದಿಂದಲೇ ಜಾರಿಗೆ ಬರುವಂತೆ, ಅಗತ್ಯವಿರುವ ಸಾಮಾಜಿಕ ಮಾಧ್ಯಮ ತಪಾಸಣೆ ಮತ್ತು ಪರಿಶೀಲನೆಯ ವಿಸ್ತರಣೆಗೆ ಸಿದ್ಧತೆಯಾಗಿ, ಮುಂದಿನ ಮಾರ್ಗದರ್ಶನ ನೀಡುವವರೆಗೆ ಕಾನ್ಸುಲರ್ ವಿಭಾಗಗಳು ಯಾವುದೇ ಹೆಚ್ಚುವರಿ ವಿದ್ಯಾರ್ಥಿ ಅಥವಾ ವಿನಿಮಯ ಸಂದರ್ಶಕರ (ಎಫ್, ಎಂ ಮತ್ತು ಜೆ) ವೀಸಾ ನೇಮಕಾತಿ ಸಾಮರ್ಥ್ಯವನ್ನು ಸೇರಿಸಬಾರದು ರೂಬಿಯೊ ಸೂಚಿಸಿದ್ದಾರೆ.
ನೀವು ಶಾಲೆ ಬಿಟ್ಟರೆ, ತರಗತಿಗಳನ್ನು ಬಿಟ್ಟುಬಿಟ್ಟರೆ ಅಥವಾ ನಿಮ್ಮ ಶಾಲೆಗೆ ತಿಳಿಸದೆ ನಿಮ್ಮ ಅಧ್ಯಯನ ಕಾರ್ಯಕ್ರಮವನ್ನು ತೊರೆದರೆ, ನಿಮ್ಮ ವಿದ್ಯಾರ್ಥಿ ವೀಸಾ ರದ್ದಾಗಬಹುದು ಮತ್ತು ಭವಿಷ್ಯದಲ್ಲಿ ನೀವು ಯುಎಸ್ ವೀಸಾಗಳಿಗೆ ಅರ್ಹತೆಯನ್ನು ಕಳೆದುಕೊಳ್ಳಬಹುದು. ಯಾವುದೇ ಸಮಸ್ಯೆಗಳನ್ನು ತಪ್ಪಿಸಲು ಯಾವಾಗಲೂ ನಿಮ್ಮ ವೀಸಾದ ನಿಯಮಗಳನ್ನು ಪಾಲಿಸಿ ಮತ್ತು ನಿಮ್ಮ ವಿದ್ಯಾರ್ಥಿ ಸ್ಥಿತಿಯನ್ನು ಕಾಪಾಡಿಕೊಳ್ಳಿ ಎಂದು ಇಲ್ಲಿನ ಯುಎಸ್ ರಾಯಭಾರ ಕಚೇರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.