ಮಂಡ್ಯ : ಸಿಎಲ್ 7 ಬಾರ್ ತೆರೆಯಲು ಲೈಸೆನ್ಸ್ ನೀಡಲು ಸುಂದರ್ ಎಂಬುವರಿಂದ 60 ಲಕ್ಷ ಬೇಡಿಕೆ ಆರೋಪದ ಹಿನ್ನೆಲೆಯಲ್ಲಿ ಆಡಿಯೋ ಸಹಿತ ಸುಂದರ್ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಸೋಮನಹಳ್ಳಿ ಗ್ರಾಮದಲ್ಲಿ ಹೊಸದಾಗಿ ಸಿಎಲ್ 7 ಬಾರ್ ತೆರೆಯಲು ಲೈಸೆನ್ಸ್ ನೀಡಲು ಅರ್ಜಿ ಸಲ್ಲಿಸಿದ್ದ ಸುಂದರ್.
ಮಂಡ್ಯದ ಕೆ.ಆರ್.ಪೇಟೆಯ ಸೋಮನಹಳ್ಳಿಯ ಸುಂದರ್ ಗೆ ಲೈಸೆನ್ಸ್ ನೀಡದೇ ಪದೇ ಪದೇ ಅರ್ಜಿ ವಜಾ ಮಾಡುತ್ತಿದ್ದ ಅಬಕಾರಿ ಅಧಿಕಾರಿಗಳು. ಸಣ್ಣ ಪುಟ್ಟ ನೆಪ ಹೇಳಿಕೊಂಡು ಅರ್ಜಿ ವಜಾ ಮಾಡುತ್ತಿದ್ದರು. ನ್ಯಾಯಾಲಯ ಆದೇಶ ನೀಡಿದ್ದರೂ ಲೈಸೆನ್ಸ್ ನೀಡಿರಲಿಲ್ಲ.
ಲೈಸೆನ್ಸ್ ನೀಡಲು 60 ಲಕ್ಷ ಲಂಚಕ್ಕೆ ನಾಗಶಯನ ಬೇಡಿಕೆ
ಆಡಿಯೋ ಸಹಿತ ದೂರು ನೀಡಿ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸಿದ್ದು, ಕಳೆದ ಒಂದು ವರ್ಷದಿಂದಲೂ ಹೋರಾಟ ಮಾಡುತ್ತಿದ್ದ ಸುಂದರ್. ಇದೇ ವಿಚಾರ ಸದನದಲ್ಲೂ ಚರ್ಚೆಯಾಗಿತ್ತು. ಕೊನೆಗೂ ಎಚ್ಚೆತ್ತುಕೊಂಡು ನಾಗಶಯನರ ಇದೀಗ ಅಮಾನತುಗೊಂಡಿದ್ದಾನೆ ಸರ್ಕಾರ ಅಮಾನತ್ತು ಆದೇಶ ಪ್ರಕಟಿಸಿದೆ.








