ನವದೆಹಲಿ : ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಆವರಿಸಿರುವ ಹಿನ್ನೆಲೆಯಲ್ಲಿ ಇದೀಗ ಇದರ ಪರಿಣಾಮ ಐಪಿಎಲ್ ಟೂರ್ನಿಯ ಮೇಲು ಬಿದ್ದಿದ್ದು ಬಹುತೇಕ ಐಪಿಎಲ್ ಟೂರ್ನಿಯ ಮುಂದಿನ ಎಲ್ಲಾ ಪಂದ್ಯಗಳು ರದ್ದಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹೌದು ಐಪಿಎಲ್ ಟೂರ್ನಿ ಮುಂದಿನ ಪಂದ್ಯಗಳು ರದ್ದಾಗುವ ಸಾಧ್ಯತೆ ಇದೆ. ಐಪಿಎಲ್ ಟೂರ್ನಿಗಳ ಪಂದ್ಯಗಳು ರದ್ದತಿಯ ಬಗ್ಗೆ ಶೀಘ್ರವೇ ಬಿಸಿಸಿಐ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮೇ 25 ರವರೆಗೆ ನಡೆಯಬೇಕಿರುವ ಐಪಿಎಲ್ ಟೂರ್ನಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿ ಉದ್ವಿಗ್ನವಾಗಿರುವ ಹಿನ್ನೆಲೆಯಲ್ಲಿ ರದ್ದಾಗುವ ಸಾಧ್ಯತೆ ಇದೆ.
ನಿನ್ನೆ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂದ್ಯ ಅರ್ಧಕ್ಕೆ ಸ್ಥಗಿತವಾಗಿದ್ದು. ಪಂಜಾಬ್ ದೆಹಲಿ ನಡುವಿನ ಪಂದ್ಯ ಅರ್ಧಕ್ಕೆ ಸ್ಥಗಿತ ಆಗಿತ್ತು. ಪಂದ್ಯ ಆರಂಭಕ್ಕೂ ಮುನ್ನ ಕೆಲವು ನಿಮಿಷಗಳ ಕಾಲ ಮಳೆ ಸುರಿದಿತ್ತು. ಬಳಿಕ ಪಂದ್ಯ ಆರಂಭವಾದ ನಂತರ ಏಕಾಏಕಿ ಮೈದಾನದಿಂದ ಕ್ರಿಕೆಟ್ ಪ್ರೇಮಿಗಳನ್ನು ಹೊರಗಡೆ ಕಳುಹಿಸಲಾಯಿತು. ಪಂದ್ಯ ಕೂಡ ಸ್ಥಗಿತಗೊಳಿಸಲಾಗಿತ್ತು. ಇದೀಗ ಬಿಸಿಸಿಐ ಶೀಘ್ರವೇ ಐಪಿಎಲ್ ಟೂರ್ನಿ ರದ್ದಾಗುವ ಕುರಿತಂತೆ ಪ್ರಕಟಣೆ ಹೊರಡಿಸಲಿದೆ.