ಬೆಂಗಳೂರು : ನಾನು ಮಾಜಿ ಸಂಸದ ಡಿಕೆ ಸುರೇಶ್ ಸಹೋದರಿ ಎಂದು ಹೇಳಿ ಐಶ್ವರ್ಯ ಗೌಡ ಚಿನ್ನಾಭರಣ ವಂಚನೆ ಎಸಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಂಸದ ಡಿಕೆ ಸುರೇಶ್ ಇಂದು ಬೆಂಗಳೂರಲ್ಲಿ ಶಾಂತಿ ನಗರದಲ್ಲಿರುವ ಜಾರಿ ನಿರ್ದೇಶನಾಲಯ (ED) ವಿಚಾರಣೆಗೆ ಹಾಜರಾಗಿದ್ದಾರೆ.
ಐಶ್ವರ್ಯ ಗೌಡ ಡಿಕೆ ಸುರೇಶ್ ಹೆಸರು ಹೇಳಿ ಕೋಟ್ಯಾಂತರ ರೂಪಾಯಿ ಚಿನ್ನಾಭರಣ ವಂಚನೆ ಎಸಗಿದ್ದರು. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರು ಇತ್ತೀಚಿಗೆ ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಯಾದರು. ಇದೀಗ ಇದೆ ಕೇಸ್ ಗೆ ಸಂಬಂಧಿಸಿದಂತೆ ಇಂದು ಮಾಜಿ ಸಂಸದ ಡಿಕೆ ಸುರೇಶ್ ಇಡಿ ವಿಚಾರಣೆಗೆ ಹಾಜರಾಗಿದ್ದಾರೆ. ಈ ಹಿಂದೆಯೂ ಒಮ್ಮೆ ಡಿಕೆ ಸುರೇಶ್ ವಿತರಣೆಗೆ ಹಾಜರಾಗಿದ್ದು ಇಂದು ಮತ್ತೊಮ್ಮೆ ಇಡಿ ವಿಚಾರಣೆಗೆ ಡಿಕೆ ಸುರೇಶ ಹಾಜರಾಗಿದ್ದಾರೆ.