ಬೆಂಗಳೂರು : ಪಹಲ್ಗಾಮ್ ಉಗ್ರರ ದಾಳಿಯ ಪ್ರತಿಕಾರವಾಗಿ ಇದೀಗ ಪಾಕಿಸ್ತಾನ್ ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನೆ ಕ್ಷಿಪಣಿ ದಾಳಿ ನಡೆಸಿದೆ. ಇದರ ಬೆನ್ನಲ್ಲೆ ಇದೀಗ ಬೆಂಗಳೂರಿನಲ್ಲಿ ಮಾಕ್ ಡ್ರಿಲ್ ಪ್ರಯುಕ್ತ ಎರಡು ನಿಮಿಷಗಳ ಕಾಲ ಸುಧೀರ್ಘವಾಗಿ ಯುದ್ಧದ ಸೈರನ್ ಮೊಳಗಿದೆ.
ಹೌದು ಮಧ್ಯಾಹ್ನ 3:58 ರಿಂದ ಸಂಜೆ 4ರ ವರೆಗೆ ಸೈರನ್ ಮೊಳಗಿತು. ಸುಮಾರು ಎರಡು ನಿಮಿಷಗಳ ಕಾಲ ಸೈರನ್ ಮೊಳಗಿದೆ. ಬೆಂಗಳೂರಿನ ಸುಮಾರು 35 ಸ್ಥಳಗಳಲ್ಲಿ ಎರಡು ನಿಮಿಷಗಳ ಕಾಲ ಸೈರನ್ ಮೊಳಗಿತು. ಇನ್ನು ಹಲಸೂರಿನಲ್ಲಿರುವ ಅಗ್ನಿಶಾಮಕ ಇಲಾಖೆಯ ಡಿಜಿಪಿ ಕಚೇರಿಯಲ್ಲಿ ಕೂಡ ಮಾಕ್ ಡ್ರಿಲ್ ಪ್ರಯುಕ್ತ ಸೈರನ್ ಮೊಳಗಿದೆ. ಈ ವೇಳೆ ಸಾರ್ವಜನಿಕರು ಸಹ ಸೈರನ್ ಮೊಳಗುವುದನ್ನು ಅಗ್ನಿಶಾಮಕ ಇಲಾಖೆಯ ಮುಂದೆ ನಿಂತು ಕುತೂಹಲದಿಂದ ವೀಕ್ಷಿಸಿದರು.
ವೈಯಾಲಿಕಾವಲ್, ಉಪ್ಪಾರಪೇಟೆ ಪೊಲೀಸ್ ಠಾಣೆ, ಕಮರ್ಷಿಯಲ್ ಸ್ಟ್ರೀಟ್, ರಾಜಾಜಿನಗರ ಅಗ್ನಿಶಾಮಕ ಠಾಣೆ, ಹಲಸೂರು ಗೇಟ್ ಕೆರೆ, ಚಾಮರಾಜಪೇಟೆ ಅಗ್ನಿಶಾಮಕ ಠಾಣೆ, ಹಲಸೂರು ಗೇಟ್ ಅಗ್ನಿಶಾಮಕ ಠಾಣೆ ಸೇರಿದಂತೆ 35 ಸ್ಥಳಗಳಲ್ಲಿ ಸೈರನ್ ಮೊಳಗಿತು. ಆಪರೇಷನ್ ಅಭ್ಯಾಸ್ ಹೆಸರಿನಲ್ಲಿ ಮಾಕ್ ಡ್ರಿಲ್ ಪ್ರಯುಕ್ತವಾಗಿ ಇದೀಗ 35 ಸ್ಥಳಗಳಲ್ಲಿ ಸೈರನ್ ಮೊಳಗಿದೆ.