ಬಾಗಲಕೋಟೆ : ಮಂಡ್ಯ ಬಳಿಕ ಬಾಗಲಕೋಟೆ ಜಿಲ್ಲೆಯಲ್ಲೂ ಗರ್ಭಪಾತ ದಂಧೆ ನಡೆದಿದ್ದು, ಮಾಜಿ ಆಯಾಳ ಕೃತ್ಯಕ್ಕೆ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಕವಿತಾ ಎಂಬ ಮಹಾಲಿಂಗಪುರ ಆಸ್ಪತ್ರೆಯ ಮಾಜಿ ಆಯಾಳ ಕೃತ್ಯದಿಂದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಮೀರಜ್ ನಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ, ಮಹಿಳೆಯ ಗರ್ಭದಲ್ಲಿ ಹೆಣ್ಣು ಭ್ರೂಣ ಇರುವುದು ಪತ್ತೆಯಾಗಿದೆ. ಈಹಿನ್ನೆಲೆಯಲ್ಲಿ ಕವಿತಾ ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಸೋನಾಲಿಗೆ ಮಾಜಿ ಆಯಾ ಕವಿತಾ ಗರ್ಭಪಾತ ನಡೆಸಿದ್ದು, ಈ ವೇಳೆ ಸೋನಾಲಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.