ಬೆಂಗಳೂರು : ಸಿನಿಮಾ ಮಾಡುವುದಾಗಿ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನಟ, ನಿರ್ದೇಶಕ, ನಿರ್ಮಾಪಕ ಹೇಮಂತ್ ರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ರಾಜಾಜಿನಗರ ಪೊಲೀಸರು ನಟ, ನಿರ್ದೇಶಕ ಮತ್ತು ನಿರ್ಮಾಪಕ ಹೇಮಂತ್ ನನ್ನು ಬಂಧಿಸಿದ್ದಾರೆ. 2022 ರಲ್ಲಿ ನಟಿಗೆ ಪರಿಚಯವಾಗಿದ್ದ ನಟ ಹೇಮಂತ್. ರಿಚ್ಚಿ ಎಂಬ ಚಿತ್ರದಲ್ಲಿ ನಟಿಗೆ ಅವಕಾಶ ನೀಡಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
2 ಲಕ್ಷ ರೂ. ಸಂಭಾವನೆ ನೀಡೋದಾಗಿ ಅಗ್ರಿಮೆಂಟ್ ಮಾಡಿದ್ದರು. ಮುಂಗಡವಾಗಿ 60 ಸಾವಿರ ರೂ. ಹಣ ನೀಡಿದ್ದ ಹೇಮಂತ್, ಅಶ್ಲೀಲ ಬಟ್ಟೆ ತೊಟ್ಟು ನಟಿಸಬೇಕು ಎಂದು ಕಿರುಕುಳ ನೀಡಲಾಗಿದೆ. ಮುಂಬೈಗೆ ಶೂಟಿಂಗ್ ಗೆ ಹೋಗಿದ್ದಾಗ ಅಸಭ್ಯ ವರ್ತನೆ, ನಿರಾಕರಿಸಿದ್ದಕ್ಕೆ ರೌಡಿಗಳನ್ನು ಬಿಟ್ಟು ಬೆದರಿಕೆ ಹಾಕಲಾಗಿದೆ ಎಂದು ನಟಿ ಆರೋಪಿಸಿದ್ದಾರೆ.
ಚಿತ್ರೀಕರಣದ ಬಳಿಕ ನೀಡಿದ್ದ ಚೆಕ್ ಬೌನ್ಸ್ ಆರೋಪ, ಸೆನ್ಸಾರ್ ಆಗದ ದೃಶ್ಯಗಳನ್ನು ವೈರಲ್ ಮಾಡಿದ್ದ ಎಂದು ನಟಿ ಆರೋಪಿಸಿದ್ದು, ಸದ್ಯ ಪೊಲೀಸರು ನಟ ಹೇಮಂತ್ ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.