Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಬಕ್ರೀದ್ ಹಿನ್ನೆಲೆ ; ರಾಜ್ಯಾದ್ಯಂತ ಅನಧಿಕೃತ ಗೋವು ಮತ್ತು ಒಂಟೆಗಳ ಸಾಗಾಣಿಕೆ ಹಾಗೂ ವಧೆ ನಿಷೇಧ

ALERT : ಕ್ರೆಡಿಟ್ ಕಾರ್ಡ್ ಬಳಕೆದಾರರೇ ಎಚ್ಚರ : `ATM’ ನಿಂದ ಹಣ ಡ್ರಾ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ.!

BREAKING : ವೋಟರ್ ಲಿಸ್ಟ್ ನಿಂದ ಹೆಸರು ಡಿಲೀಟ್ ಆದ್ರೆ ಪೌರತ್ವ ರದ್ದಾಗುವುದಿಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು | Supreme Court

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೇರೆ ಚಿತ್ರದ ನಿರ್ಮಾಪಕರ ದುಡ್ಡು, ದುಡ್ಡಲ್ವಾ? ನಟ ಶ್ರೀನಗರ ಕಿಟ್ಟಿ, ನಿರ್ದೇಶಕರ ವಿರುದ್ಧ ರಚಿತಾ ರಾಮ್ ಆಕ್ರೋಶ!
KARNATAKA

BREAKING : ಬೇರೆ ಚಿತ್ರದ ನಿರ್ಮಾಪಕರ ದುಡ್ಡು, ದುಡ್ಡಲ್ವಾ? ನಟ ಶ್ರೀನಗರ ಕಿಟ್ಟಿ, ನಿರ್ದೇಶಕರ ವಿರುದ್ಧ ರಚಿತಾ ರಾಮ್ ಆಕ್ರೋಶ!

By ಸುರೇಶ್‌

ಬೆಂಗಳೂರು : ಚಿತ್ರದ ಪ್ರಚಾರಕ್ಕೆ ರಚಿತಾ ರಾಮ್ ಬರುತ್ತಿಲ್ಲ ಎಂಬ ಆರೋಪ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಟಿ ರಚಿತರಾಮ್ ಪೋಸ್ಟ್ ಹಂಚಿಕೊಂಡಿದ್ದಾರೆ. ನಿರ್ಮಾಪಕ ನಿರ್ದೇಶಕ ಮತ್ತು ನಟರ ಹೇಳಿಕೆಯಿಂದ ಬೇಜಾರಾಗಿದೆ. ಅವರು ನನ್ನ ಬಗ್ಗೆ ಹೇಳಿದ ಮಾತುಗಳಿಂದ ನನಗೆ ಬಹಳ ಬೇಜಾರಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನಟಿ ರಚಿತಾ ರಾಮ್ ಪೋಸ್ಟ್ ಹಂಚಿಕೊಂಡಿದ್ದಾರೆ.

ಸಂಜು ವೆಡ್ಸ್ ಗೀತಾ-2 ಪ್ರಚಾರಕ್ಕೆ ನಟಿ ರಚಿತಾ ರಾಮ್ ಪ್ರಚಾರಕ್ಕೆ ಬರುತ್ತಿಲ್ಲ ಎಂದು ಇತ್ತೀಚಿಗೆ ಆರೋಪಿಸಲಾಗಿತು. ನಟಿ ರಚಿತ ವಿರುದ್ಧ ನಟ ಶ್ರೀನಗರ ಕಿಟ್ಟಿ ನಿರ್ದೇಶಕ ನಾಗಶೇಖರ್ ಆರೋಪಿಸಿದ್ದರು. ಅಲ್ಲದೆ ರಚಿತರಾಮ್ ವಿರುದ್ಧ ಫಿಲಂ ಚೇಂಬರ್ಗು, ದೂರು ನೀಡಲಾಗಿತ್ತು. ಇದೀಗ ಈ ವಿಚಾರವಾಗಿ ನಟಿ ರಚಿತಾ ರಾಮ್ ಅವರು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುಧೀರ್ಘವಾಗಿ ಮಾತನಾಡಿದ್ದು, ನಟ ಶ್ರೀನಗರ ಕಿಟ್ಟಿ ನಿರ್ದೇಶಕ ನಾಗಶೇಖರ್ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ರಚಿತಾ ರಾಮ್ ಹೇಳಿದ್ದೇನು?

ಈ ಒಂದು ಚಿತ್ರದ ತಂಡದ ಜೊತೆ ಒಂದು ಮುಕ್ಕಾಲು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಕಳೆದ ಜೂನ್ 17ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತದೆ. ಚಿತ್ರದಲ್ಲಿ ನನ್ನ ನಟನೆಯ ಬಗ್ಗೆ ಇವರು ಹಲವಾರು ಪ್ರಶ್ನೆಗಳಲ್ಲಿ ವೇದಿಕೆಗಳಲ್ಲಿ ಕೊಂಡಾಡಿದ್ದಾರೆ. ಆದರೆ ಅದೇ ಚಿತ್ರತಂಡ ಇವತ್ತು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿಕೊಳ್ಳುತ್ತಿದ್ದಾರೆ.ನನಗೆ ಒಂದು ಗೊಂದಲವಿದೆ ನನ್ನ ಎದುರಲ್ಲಿ ನನ್ನನ್ನು ಕೊಂಡಾಡಿದ ಚಿತ್ರತಂಡ ಇದೇ ಮಾತನ್ನು ಮಾಧ್ಯಮಗಳ ಮುಂದೆ ಅಂದೆ ಹೇಳಬೇಕಿತ್ತು. ಯಾಕೆ ಹೇಳಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಯಾಕೆ ಅಂದು ಹೊಗಳಿ ಇಂದು ಕೆಟ್ಟದಾಗಿ ಮಾತನಾಡುತ್ತಿದ್ದಾರೆ? ನಾನು ಸುಳ್ಳು ಹೇಳುತ್ತೇನೆ ನಾಟಕ ಮಾಡುತ್ತೇನೆ ಅಂತ ಹೇಳುತ್ತಿದ್ದಾರೆ ಆದರೆ ನಿಜವಾಗಲೂ ಸುಳ್ಳು ಹೇಳ್ತಿರೋದು ಯಾರು? ನಾಟಕ ಮಾಡುತ್ತಿರುವವರು ಯಾರು? ನಾನು ಸಂಜು ವೆಡ್ಸ್-2 ಸಿನಿಮಾ ಮಾಡುವಾಗ ಇನ್ನೊಂದು ನನ್ನ ನಟನೆಯ ಸಿನಿಮಾ ರಿಲೀಸ್ ಆಗೋದಿತ್ತು. ಈ ವೇಳೆ ಒಂದು ದಿನ ನನಗೆ ಆ ಸಿನಿಮಾದ ಪ್ರಮೋಷನ್ ಗೆ ಸಮಯ ಕೊಡಲಿಲ್ಲ. ಶ್ರೀನಗರ ಕಿಟ್ಟಿ ನಾಗಶೇಖರ್ ಅವರು ಆ ಸಿನಿಮಾದ ಪ್ರಮೋಷನ್ ಗೆ ಒಂದು ದಿನ ಸಹ ನನಗೆ ಸಮಯ ಕೊಟ್ಟಿಲ್ಲ ಎಂದು ರಚಿತಾ ರಾಮ್ ಆರೋಪಿಸಿದರು.

ಯಾಕೆ ಅವರದು ಸಿನಿಮಾ ಅಲ್ವಾ ? ಆ ಚಿತ್ರದ ಪ್ರೊಡ್ಯೂಸರ್ದು ದುಡ್ಡಲ್ವಾ? ಅವರೊಬ್ಬರು ಮಹಿಳಾ ಪ್ರೊಡ್ಯೂಸರ್ ಆಗಿದ್ದು, ಅವರು ಸಿನಿಮಾದ ಮೇಲೆ ಹಾಕಿರುವ ದುಡ್ಡು ದುಡ್ಡಲ್ವಾ? ಆ ಸಿನಿಮಾ ಪ್ರಮೋಷನ್ ಗೆ ಒಂದು ದಿನ ನನ್ನನ್ನು ಕಳಿಸದೆ ಇವತ್ತು ಸಂಜು ವೆಡ್ಸ್ ಗೀತಾ-2 ಸಿನಿಮಾ ಪ್ರಮೋಷನ್ ಗೆ ಬರ್ಲಿಲ್ಲ ಅಂತ ಹೇಳುತ್ತಾರೆ. ಈ ಸಿನಿಮಾಗೋಸ್ಕರ ನಾನು ಏನು ಮಾಡಬೇಕು ಅನ್ಕೊಂಡಿದ್ದೆನೋ, ಸಿನಿಮಾಗೆ ಸಂಪೂರ್ಣವಾಗಿ ನನ್ನ ಎಫರ್ಟ್ ಹಾಕಿದ್ದೀನಿ. ಹಾಗಾದರೆ ಇದರಲ್ಲಿ ತಪ್ಪು ಯಾರದ್ದು ನೀವೇ ಹೇಳಿ ಎಂದು ರಚಿತಾ ರಾಮ್ ಹೇಳಿದ್ದಾರೆ.

ಇನ್ನು ಉಪ್ಪಿ ರುಪ್ಪಿ ಸಿನಿಮಾದ ಅಡ್ವಾನ್ಸ್ ಹಣ ಪಡೆದು ಕೊಟ್ಟಿಲ್ಲ ಅಂತ ಮತ್ತೊಂದು ದೂರಿನ ಕುರಿತು ಮಾತನಾಡಿದ ಅವರು, ಈ ವಿಚಾರವಾಗಿ ಸಾರಾ ಗೋವಿಂದವರು ಜವಾಬ್ದಾರಿ ವಹಿಸಿದ್ದು ಈಗಾಗಲೇ ಫಿಲಂ ಚೇಂಬರ್ ನಲ್ಲೂ ಈ ಕುರಿತು ಚರ್ಚೆಯಾಗುತ್ತಿದೆ. ಹಾಗಾಗಿ ಈ ವಿಚಾರವಾಗಿ ಎಲ್ಲೂ ಮಾತನಾಡಬಾರದು ಎಂದು ನನಗೆ ಹೇಳಿದ್ದಾರೆ ಹಾಗಾಗಿ ಈ ವಿಚಾರವನ್ನು ನಾನು ಮಾತನಾಡುವುದಿಲ್ಲ. ನನ್ನಿಂದ ಅಭಿಮಾನಿಗಳಿಗೆ ಏನಾದರೂ ಬೇಜಾರಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟಿ ರಚಿತರಾಮ್ ಅವರು ಮನವಿ ಮಾಡಿಕೊಂಡಿದ್ದಾರೆ.

https://www.instagram.com/reel/DLH7YKLPon1/?igsh=dWUwMHlzcnZheTc0

Share. Facebook Twitter LinkedIn WhatsApp Email

Related Posts

BIG NEWS : ಬಕ್ರೀದ್ ಹಿನ್ನೆಲೆ ; ರಾಜ್ಯಾದ್ಯಂತ ಅನಧಿಕೃತ ಗೋವು ಮತ್ತು ಒಂಟೆಗಳ ಸಾಗಾಣಿಕೆ ಹಾಗೂ ವಧೆ ನಿಷೇಧ

1 Min Read

ALERT : ಕ್ರೆಡಿಟ್ ಕಾರ್ಡ್ ಬಳಕೆದಾರರೇ ಎಚ್ಚರ : `ATM’ ನಿಂದ ಹಣ ಡ್ರಾ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ.!

2 Mins Read

ಡಿಕೆ ಶಿವಕುಮಾರ್ ಪದಗ್ರಹಣಕ್ಕೂ ಮೊದಲೇ, ಕಾರ್ಯಕರ್ತರಿಂದ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ

1 Min Read
Recent News

BIG NEWS : ಬಕ್ರೀದ್ ಹಿನ್ನೆಲೆ ; ರಾಜ್ಯಾದ್ಯಂತ ಅನಧಿಕೃತ ಗೋವು ಮತ್ತು ಒಂಟೆಗಳ ಸಾಗಾಣಿಕೆ ಹಾಗೂ ವಧೆ ನಿಷೇಧ

ALERT : ಕ್ರೆಡಿಟ್ ಕಾರ್ಡ್ ಬಳಕೆದಾರರೇ ಎಚ್ಚರ : `ATM’ ನಿಂದ ಹಣ ಡ್ರಾ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ.!

BREAKING : ವೋಟರ್ ಲಿಸ್ಟ್ ನಿಂದ ಹೆಸರು ಡಿಲೀಟ್ ಆದ್ರೆ ಪೌರತ್ವ ರದ್ದಾಗುವುದಿಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು | Supreme Court

ಡಿಕೆ ಶಿವಕುಮಾರ್ ಪದಗ್ರಹಣಕ್ಕೂ ಮೊದಲೇ, ಕಾರ್ಯಕರ್ತರಿಂದ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ

State News
KARNATAKA

BIG NEWS : ಬಕ್ರೀದ್ ಹಿನ್ನೆಲೆ ; ರಾಜ್ಯಾದ್ಯಂತ ಅನಧಿಕೃತ ಗೋವು ಮತ್ತು ಒಂಟೆಗಳ ಸಾಗಾಣಿಕೆ ಹಾಗೂ ವಧೆ ನಿಷೇಧ

By kannadanewsnow57 KARNATAKA 1 Min Read

ಸರ್ವೋಚ್ಛ ನ್ಯಾಯಾಲಯದ ಆದೇಶದನ್ವಯ ದೇಶಾದ್ಯಂತ ಅನಧಿಕೃತ ಗೋವು ಮತ್ತು ಒಂಟೆಗಳ ಸಾಗಾಣಿಕೆ ಹಾಗೂ ವಧೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಬಕ್ರೀದ್ ಹಬ್ಬದ…

ALERT : ಕ್ರೆಡಿಟ್ ಕಾರ್ಡ್ ಬಳಕೆದಾರರೇ ಎಚ್ಚರ : `ATM’ ನಿಂದ ಹಣ ಡ್ರಾ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ.!

ಡಿಕೆ ಶಿವಕುಮಾರ್ ಪದಗ್ರಹಣಕ್ಕೂ ಮೊದಲೇ, ಕಾರ್ಯಕರ್ತರಿಂದ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ

BREAKING : ಡಿಸಿಎಂ ಡಿಕೆಶಿಗೆ `CM’ ಪಟ್ಟ ಗ್ಯಾರಂಟಿ : ತವರಿನಲ್ಲಿ ಸಂಭಮೋತ್ಸವ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.