ಗದಗ : ಕಾನೂನು ಸಚಿವ ಹೆಚ್ ಕೆ ಪಾಟೀಲ್ ಗೆ ಫೇಸ್ಬುಕ್ ನಲ್ಲಿ ವ್ಯಕ್ತಿ ಒಬ್ಬ AK-47 ಗನ್ ನಿಂದ ಗುಂಡಿನ ಮಳೆಗರೆಯಬೇಕು ಅಂತ ಪ್ರಚೋದನಾತ್ಮಕ ಪೋಸ್ಟ್ ಹಾಕಿದ್ದ ಘಟನೆಗೆ ಸಂಬಂಧಿಸಿದಂತೆ ಇದೀಗ ಆರೋಪಿ ವೀರಣ್ಣ ಬೀಳಗಿ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು ಸಚಿವ ಎಚ್ ಕೆ ಪಾಟೀಲ್ ಗೆ ಜೀವ ಬೆದರಿಕೆ ಹಾಕಿದ್ದ ಆರೋಪಿ ಅರೆಸ್ಟ್ ಆಗಿದ್ದಾನೆ. ಫೇಸ್ಬುಕ್ನಲ್ಲಿ ಜೀವ ಬೆದರಿಕೆ ಹಾಕಿದ್ದ ವೀರಣ್ಣ ಬೀಳಗಿಯನ್ನ ಇದೀಗ ಅರೆಸ್ಟ್ ಮಾಡಲಾಗಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಸೂಡಿ ಗ್ರಾಮದ ವೀರಣ್ಣ ಬೀಳಗಿ (47) ಎಂಬಾತ AK-47 ಗನ್ ನಿಂದ ಗುಂಡಿನ ಮಳೆಗರೆಯಬೇಕು ಅಂತ ಹೇಳಿದ್ದ.
ಡಿಸೆಂಬರ್ 14ರಂದು ವೀರಣ್ಣ ಬೀಳಗಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ ಪ್ರಚೋದಕ ಪೋಸ್ಟ್ ಹಾಕಿದ ಆರೋಪಿಯ ವಿರುದ್ಧ ದೂರು ನೀಡಲಾಗಿತ್ತು. ದೂರಿನ ಅನ್ವಯ ಇದೀಗ ಆರೋಪಿ ವೀರಣ್ಣ ಪೀಳಿಗೆಯನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.








