ಉತ್ತರಕನ್ನಡ : ಉತ್ತರ ಕನ್ನಡದಲ್ಲಿ ಭಾರಿ ಅಪಘಾತವನ್ನು ಸಂಭವಿಸಿದ್ದು, ಚಲಿಸುತ್ತಿದ್ದ ಸರ್ಕಾರಿ ಬಸ್ ವೀಲ್ ಬೋಲೆಂಡ್ ತುಂಡಾಗಿ ಭೀಕರ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಬಸ್ ನಲ್ಲಿ ಇದ್ದಂತಹ 49 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಮಿರ್ಜಾಂ ಸಮೀಪ ಖಂಡಗಾರ ಕ್ರಾಸ್ ನಲ್ಲಿ ಸರ್ಕಾರಿ ಬಸ್ ಅಪಘಾತಕ್ಕೆ ಈಡಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು ವ್ಯಾಪ್ತಿಯ ಖಂಡಕರ ಕ್ರಾಸ್ ಬಳಿ ಈ ಒಂದು ಅಪಘಾತ ಸಂಭವಿಸಿದೆ. ಹೊನ್ನಾವರದಿಂದ ಕೆಎಸ್ಆರ್ಟಿಸಿ ಬಸ್ ದಾಂಡೇಲಿಗೆ ತೆರಳುತ್ತಿತ್ತು. ವೇಗವಾಗಿ ಚಲಿಸುತ್ತಿದ್ದ ಸರ್ಕಾರಿ ಬಸ್ಸಿನ ವ್ಹಿಲ್ ಬೋಲೆಂಡ್ ಕಟ್ಟಾಗಿದೆ. ರಸ್ತೆಯ ಎಡಬದಿಯಿಂದ ಡಿವೈಡರ್ ದಾಟಿ ಬಲಬದಿಯ ಗುಡ್ಡಕ್ಕೆ ಬಸ್ ಡಿಕ್ಕಿ ಹೊಡೆದಿದೆ. ಬಸ್ ಗುಡ್ಡಕ್ಕೆ ಡಿಕ್ಕಿ ಹೊಡೆದ ರಬ್ಬಸಕ್ಕೆ ಕೆಲವು ಪ್ರಯಾಣಿಕರಿಗೆ ಗಾಯಗಳಾಗಿವೆ.
ಗಾಯಗೊಂಡ ಪ್ರಯಾಣಿಕರಿಗೆ ತಕ್ಷಣ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. KA 25 3411 ಸಂಖ್ಯೆಯ ಬಸ್ಸಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸುಸ್ಥಿತಿಯಲ್ಲಿ ಇಲ್ಲದಂತಹ ಬಸ್ ಇರುವುದರ ಕಾರಣ ಅಪಘಾತಕ್ಕೆ ಈಡಾಗಿದೆ. ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.