ತಿರುಪತಿ : ವೈಕುಂಠ ಏಕಾದಶಿ ಪ್ರಯುಕ್ತ ತಿರುಪತಿ ತಿರುಮಲದಲ್ಲಿ ಹೆಚ್ಚು ಜನರು ಸೇರಿದ್ದರಿಂದ ಟಿಕೆಟ್ ಕೌಂಟರ್ ಬಳಿಯಲ್ಲಿ ನೂಕು ನುಗ್ಗಲು ಉಂಟಾಗಿತ್ತು. ಹೀಗಾಗಿ ಕಾಲ್ತುಳಿತ ಉಂಟಾಗಿ 6 ಭಕ್ತರು ಸಾವನ್ನಪ್ಪಿದ್ದಾರೆ. ಈ ಹಿನ್ನಲೆಯಲ್ಲಿ ಟಿಕೆಟ್ ವಿತರಣೆ ರದ್ದುಗೊಳಿಸಲಾಗಿದೆ.
ವೈಕುಂಠ ದ್ವಾರದಲ್ಲಿ ಟಿಕೆಟ್ ಗಾಗಿ ಹೆಚ್ಚು ಜನರು ಸೇರಿದ್ದರ ಪರಿಣಾಮ ತಿರುಪತಿಯಲ್ಲಿ ಕಾಲ್ತುಳಿತ ಉಂಟಾಗಿದೆ. ಈ ಕಾಲ್ತುಳಿತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 6 ಭಕ್ತರು ಮೃತಪಟ್ಟಿದ್ದಾರೆ.
ವೈಕುಂಟ ಏಕಾದಶಿಯ ಟಿಕೆಟ್ ಗಾಗಿ ಕೌಂಟರ್ ಬಳಿಯಲ್ಲಿ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತದಿಂದ ಭಕ್ತರು ಸಾವನ್ನಪ್ಪಿದ ಕಾರಣ, ಟಿಕೆಟ್ ವಿತರಣೆ ರದ್ದುಗೊಳಿಸಲಾಗಿದೆ. ನಾಳೆಯವರೆಗೂ ಟಿಕೆಟ್ ವಿತರಣೆಯನ್ನು ಸ್ಥಗಿತಗೊಳಿಸಿರುವುದಾಗಿ ಟಿಟಿಡಿ ತಿಳಿಸಿದೆ.