ಬೆಂಗಳೂರು: 3064 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಈ ಹಿಂದೆ ದಿನಾಂಕ 18.03.2024, 19.03.2024 & 20.03.2024 ರಂದು ಪರೀಕ್ಷೆಯನ್ನು ನಡೆಸಲು ದಿನಾಂಕವನ್ನು ನಿಗದಿಪಡಿಸಲಾಗಿತ್ತು.
ಈಗ 2022-23ನೇ ಸಾಲಿನ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್/ಡಿಎಆರ್) (ಪುರುಷ ಮತ್ತು ತೃತೀಯಲಿಂಗ ಪುರುಷ) ಮಿಕ್ಕುಳದ ವೃಂದ-3064 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ Physical Standard Test & Physical Endurance Test ಪರೀಕ್ಷೆಗಳನ್ನು ನಡೆಸಲು ದಿನಾಂಕ: 18.03.2024, 19.03.2024 & 20.03.2024 ರಂದು ನಿಗದಿಪಡಿಸಲಾಗಿರುತ್ತದೆ. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಸದರಿ ದಿನಾಂಕಗಳಂದು ನಡೆಯಬೇಕಾಗಿದ್ದ ವಿ.ಎಸ್.ಟಿ ಮತ್ತು ಪಿ.ಇ.ಟಿ ಪರೀಕ್ಷೆಯನ್ನು ಮುಂದೂಡಲಾಗಿರುತ್ತದೆ. ಪಿ.ಎಸ್.ಐ ಮತ್ತು ಪಿ.ಇ.ಟಿ ಪರೀಕ್ಷೆಯ ಮುಂದಿನ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು ಅಂತ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ಡಾ. ಏಮಲ್ ಕುಮಾರ್, ಐಪಿಎಸ್. ಮಾಹಿತಿ ನೀಡಿದ್ದಾರೆ.