ಬಳ್ಳಾರಿ : ರಾಜ್ಯದಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂದಿದ್ದು ಗಂಗಾವತಿ ಶಾಸಕ ಜನಾರ್ಧನರೆಡ್ಡಿ ಪುತ್ರನಿಗೂ ಇದೀಗ ಭೂ ಕಬಳಿಕೆ ಆರೋಪ ಕೇಳಿ ಬಂದಿದೆ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ವಿರುದ್ಧ ಈ ಒಂದು ಭೂ ಕಬಳಿಕೆ ಆರೋಪ ಕೇಳಿ ಬಂದಿದ್ದು100 ಕೋಟಿ ಮೌಲ್ಯದ ಸುಮಾರು 9 ಎಕರೆ ಭೂಮಿ ಕಬಳಿಸಿದ ಆರೋಪ ಕೇಳಿ ಬಂದಿದೆ.
ಹೌದು ಕಿರೀಟಿ ರೆಡ್ಡಿ ಹಾಗೂ ಸಹವರ್ತಿಗಳಿಂದ ಭೂಮಿ ಕಬಳಸಿರುವ ಆರೋಪ ಕೇಳಿ ಬಂದಿದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಕಬಳಿಸಿದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಧಾರವಾಡ ಹೈಕೋರ್ಟ್ ಪೀಠದಲ್ಲಿ ರಿಟ್ ಅರ್ಜಿ ಸಹ ಸಲ್ಲಿಕೆಯಾಗಿದ್ದು, ಬಳ್ಳಾರಿಯ ಗೋವರ್ಧನ ಎಂಬುವವರು ಧಾರವಾಡ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣವನ್ನು ಸಿಐಡಿ ಅಥವಾ ಎಸ್ಐಟಿ ತನಿಖೆಗೆ ವಹಿಸುವಂತೆ ಗೋವರ್ಧನ್ ಮನವಿ ಮಾಡಿದ್ದಾರೆ.
ಈ ಸಂಬಂಧ ಸರ್ಕಾರಕ್ಕೆ ಧಾರವಾಡ ಹೈಕೋರ್ಟ್ ಪೀಠ ನೋಟಿಸ್ ನೀಡಿದೆ. 2005ರಲ್ಲಿ ಕಿರಿಟಿ ಸಹವರ್ತಿಗಳಾದ ಮಂಜುನಾಥ್ ಹಾಗೂ ಬಿ ಸೀನ ಭೂಮಿ ಪಡೆದಿದ್ದಾರೆ. ಗೋವರ್ಧನ ಬಳಿ ಜಿಪಿಎಸ್ ಹಾಗೂ ಕರಾರು ಪತ್ರ ಮಾಡಿಸಿಕೊಂಡಿದ್ದ ಆರೋಪ ಕೇಳಿಬಂದಿದ್ದು ಕರಾರು ಪತ್ರ ಮಾಡಿಸಿಕೊಂಡು ತಿರುಚಿದ್ದಾರೆ ಎನ್ನಲಾಗಿದೆ.
2022 ರಲ್ಲಿ ಭೂಮಿಯನ್ನು ಉಡುಗೊರೆಯಾಗಿ ನೀಡಿದ್ದರು.ಈ ಸಂಬಂಧಪಟ್ಟ ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ FIR ಸಹ ದಾಖಲಾಗಿದೆ.ಆದರೆ ಯಾವುದೇ ಪ್ರಯೋಜನ ಆಗಿಲ್ಲ ಎಂದು ಆರೋಪಿಸಲಾಗಿದೆ. ಕಿರೀಟಿ ರೆಡ್ಡಿ ಪ್ರಭಾವಿಯಾಗಿದ್ದು ನನಗೆ ಜೀವ ಭಯ ಇದೆ ಹೀಗಾಗಿ ಕೋರ್ಟ್ ಗೆ ಅರ್ಜಿ ಹಾಕಿದ್ದೇನೆ ಎಂದು ಗೋವರ್ಧನ್ ಮಾಹಿತಿ ನೀಡಿದ್ದಾರೆ.








