ಕೊಡಗು : ಇತ್ತೀಚಿಗೆ ಪುಟ್ಟ ಮಕ್ಕಳ ಹಿಡಿದುಕೊಂಡು ವಯೋ ವೃದ್ಧರವರೆಗೂ ಹೃದಯಾಘಾತ ಪ್ರಕರಣಗಳು ಸಾಮಾನ್ಯವಾಗಿ ಬಿಟ್ಟಿವೆ.ಇದೀಗ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ 24 ವರ್ಷದ ಯುವತಿ ಹೃದಯಾಘಾತದಿಂದ ದಾರುಣವಾಗಿ ಸಾವನ್ನಪ್ಪಿದ್ದಾಳೆ.
ಹೌದು ಮಡಿಕೇರಿ ತಾಲೂಕಿನ ನೆಲಜಿ ಗ್ರಾಮದ ನಿಲಿಕ (24) ಎಂಬ ಯುವತಿ ಹೃದಯಘಾತದಿಂದ ಸಾವನ್ನಪ್ಪಿದ್ದಾಳೆ, ಮನೆಯಲ್ಲಿ ಹೃದಯಘಾತದಿಂದ ಕುಸಿದು ಬಿದ್ದು, ಹೃದಯಘಾತಕ್ಕೆ ಬಲಿಯಾಗಿದ್ದಾಳೆ. ಯುವತಿ ಮಡಿಕೇರಿ ತಾಲೂಕಿನಲ್ಲಿ ಕಚೇರಿ ಒಂದರಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಳು ಎಂದು ಕುಟುಂಬದ ಮೂಲಗಳು ತಿಳಿಸಿವೆ.