ರಾಯಚೂರು : ರಾಯಚೂರಿನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು ಶಾರ್ಟ್ ನ ಸರ್ಕ್ಯೂಟ್ ನಿಂದ ಚಾರ್ಜಿಂಗ್ ಬೈಕ್ ಅಂಗಡಿಯ ಒಂದು ಸಂಪೂರ್ಣವಾಗಿ ಹೊತ್ತಿ ಉರಿದಿರುವ ಘಟನೆ ರಾಯಚೂರು ನಗರದ ಮಹಾವೀರ ಚೌಕ್ ನಲ್ಲಿ ನಡೆದಿದೆ.
ರೈಚೂರ್ ನಲ್ಲಿ ಚಾರ್ಜಿಂಗ್ ಬೈಕ್ ಅಂಗಡಿಗೆ ಬೆಂಕಿ ಹೊತ್ತಿಕೊಂಡಿದ್ದು, ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಒಂದು ಅಗ್ನಿ ಅವಘಡ ಸಂಭವಿಸಿದೆ. ಘಟನೆಯು ರಾಯಚೂರಿನ ಮಹಾವೀರ ಚೌಕ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಆರ್ ಕೆ ಭಂಡಾರಿ ಅವರ ಅಂಗಡಿ ಬೆಂಕಿಗೆ ಆಹುತಿಯಾಗಿದೆ.
ಬೆಂಕಿ ಅನಾಹುತದಿಂದ ಮೂರು ಅಂತರ್ಸಿನ ಕಟ್ಟಡ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಇದೀಗ ಹರಸಾಹಸ ಪಡುತ್ತಿದ್ದಾರೆ. ಅದೃಷ್ಟವಶಾತ ಘಟನೆಯಲ್ಲಿ ಯಾವುದೇ ಸಾವು ನೋವುಗಳ ಕುರಿತಂತೆ ವರದಿಯಾಗಿಲ್ಲ.ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಲ್ಲದೆ ಕಳೆದ ಎರಡು ದಿನಗಳ ಹಿಂದೆ ಬೀದರ್ ನಗರದ ಜೆಸ್ಕಾಂ ಕಚೇರಿಯಲ್ಲಿ ಭಾರಿ ಅಗ್ನಿ ದುರಂತ ಸಂಭವಿಸಿತ್ತು. ಬೀದರ್ ನ ಜ್ಯೋತಿ ನಗರದಲ್ಲಿರುವ ಜೆಸ್ಕಾಂ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಕಚೇರಿಯ ಪೀಟೋಪಕರಣ ಹಾಗೂ ಟಿಸಿಗಳು ಸುಟ್ಟುಭಸ್ಮವಾಗಿವೆ.