ನವದೆಹಲಿ: ಚೀನಾ, ಜಪಾನ್, ಯುಎಸ್ನಲ್ಲಿ ಪ್ರಕರಣಗಳ ಹೆಚ್ಚಳದ ನಡುವೆ ಕೋವಿಡ್-ಪಾಸಿಟಿವ್ ಮಾದರಿಗಳ ಜೀನೋಮ್ ಸೀಕ್ವೆನ್ಸಿಂಗ್ ಹೆಚ್ಚಿಸಲು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಈ ನಡುವೆ ಚೀನಾದಲ್ಲಿ ಕೋವಿಡ್ ನಿರ್ಬಂಧಗಳನದನು ಸಡಿಲಗೊಳಿಸದ ಬಳಿಕ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಆಸ್ಪತ್ರೆಗಳ ಮೇಲೆ ಹೊರೆಯಾಗುತ್ತಿದೆ.
ಇದರ ನಡುವೆ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಆರೋಗ್ಯ ಅರ್ಥಶಾಸ್ತ್ರಜ್ಞ ಎರಿಕ್ ಫೀಗಲ್-ಡಿಂಗ್, ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಮುಂದಿನ 90 ದಿನಗಳಲ್ಲಿ ಅಂದರೆ ಮೂರು ತಿಂಗಳಲ್ಲಿ ಚೀನಾದ ಜನಸಂಖ್ಯೆಯ 60 ಪ್ರತಿಶತಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ. ಲಕ್ಷಾಂತರ ಜನರು ಸಾವನ್ನಪ್ಪುವ ಸಾಧ್ಯತೆಯಿದೆ ಎಂದಿದ್ದಾರೆ.
⚠️THERMONUCLEAR BAD—Hospitals completely overwhelmed in China ever since restrictions dropped. Epidemiologist estimate >60% of 🇨🇳 & 10% of Earth’s population likely infected over next 90 days. Deaths likely in the millions—plural. This is just the start—🧵pic.twitter.com/VAEvF0ALg9
— Eric Feigl-Ding (@DrEricDing) December 19, 2022
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಒಮಿಕ್ರಾನ್ ರೂಪಾಂತರವು 16 ರ ಆರ್-ಮೌಲ್ಯವನ್ನು ಹೊಂದಿದೆ. ಅಂದರೆ ಸೋಂಕಿಗೆ ಇಳಗಾಗುವ ಒಬ್ಬ ವ್ಯಕ್ತಿಯು ಇನ್ನೂ 16 ಸೋಂಕಿಗೆ ಒಳಗಾಗಬಹುದು. ಟ್ವೀಟ್ ಮಾಡಿದ್ದಾರೆ.
ನಿಮ್ಮನ್ನು, ಕುಟುಂಬವನ್ನು ಮತ್ತು ನೆರೆಹೊರೆಯವರನ್ನು ರಕ್ಷಿಸಲು ಮಾಡಬಹುದಾದ ಉತ್ತಮ ಕೆಲಸವೆಂದರೆ ಬೈವೆಲೆಂಟ್ ಲಸಿಕೆಯನ್ನು ಪಡೆಯುವುದು ಎಂದು ಹೇಳಿದ್ದಾರೆ.