ಬೆಳಗಾವಿ : ದೀಪಾವಳಿ ಹಬ್ಬಕ್ಕೆ ಬಟ್ಟೆ ಖರೀದಿಸಲೆಂದು ಹೋದ ಬಾಲಕ ಮಾಂಜಾ ದಾರಕ್ಕೆ ಬಲಿಯಾದ ಘಟನೆ ಇಲ್ಲಿನ ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ನಡೆದಿದೆ.
ಹಬ್ಬಕ್ಕೆ ಬಟ್ಟೆ ಖರೀದಿಸಿ ಊರಿಗೆ ಬೈಕ್ ನಲ್ಲಿ ಮನೆಗೆ ಹೊರಟಿದ್ದಾಗ ಮಾಂಜಾ ದಾರ ಕುತ್ತಿಗೆಗೆ ಬಿಗಿದು ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಯಮಕನಮರಡಿ ಸಮೀಪ ದಅನಂತಪುರ ಗ್ರಾಮದ ವರ್ಧನ ಈರಣ್ಣ ಬೇಲಿ (5) ಎಂಬ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಬೈಕ್ ನಲ್ಲಿ ತಂದೆ ಈರಣ್ಣ ಜೊತೆ ಬಾಲಕ ಖುಷಿ ಖುಷಿಯಿಂದಲೇ ಹಬ್ಬಕ್ಕೆ ಬಟ್ಟೆ ಖರೀದಿಸಿ ಮನೆಗೆ ಹೊರಟಿದ್ದನು. ಬೈಕ್ ನ ಮುಂಬಾಗ ಬಾಲಕ ಕುಳಿತುಕೊಂಡಿದ್ದನು. ಈ ವೇಲೆ ಕಣ್ಣಿಗೆ ಕಾಣಿಸದ ಮಾಂಜಾ ದಾರ ನೇರವಾಗಿ ವರ್ಧನನ ಕುತ್ತಿಗೆ ಬಿಗಿದಿದೆ. ಸ್ಥಳದಲ್ಲೇ ಬಾಲಕ ಮೃತಪಟ್ಟಿದ್ದಾನೆ. ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಮಾಂಜಾ ದಾರ ಸಂಪೂರ್ಣ ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದು ಬಾಲಕನ ಸಂಬಂಧಿಕರು ಆಗ್ರಹಿಸಿದ್ದಾರೆ.
BREAKING NEWS ; ಅಯೋಧ್ಯ ಐತಿಹಾಸಿಕ ‘ದೀಪೋತ್ಸವ’ಕ್ಕೆ ಪ್ರಧಾನಿ ಮೋದಿ ಚಾಲನೆ
Watch Video ; ಪಾಕ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಬಳಿಕ ‘ಕೊಹ್ಲಿ’ ಭಾವುಕ, ಕಣ್ಣೀರಿಟ್ಟ ಕಿಂಗ್