ಬೆಂಗಳೂರು : ಪಾರಿವಾಳ ಹಿಡಿಯಲು ಹೋಗಿ ಬೆಂಗಳೂರಿನಲ್ಲಿ ಹೈಟೆನ್ಷನ್ ವಿದ್ಯುತ್ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ಬಾಲಕ ಚಂದ್ರು ಇದೀಗ ಮೃತಪಟ್ಟಿದ್ದಾನೆ.
3 ದಿನಗಳ ಹಿಂದೆ ಪಾರಿವಾಳ ಹಿಡಿಯಲು ಹೋಗಿ ಬೆಂಗಳೂರಿನಲ್ಲಿ ಹೈಟೆನ್ಷನ್ ವಿದ್ಯುತ್ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಸುಪ್ರೀತ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದನು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮತ್ತೋರ್ವ ಬಾಲಕ ಚಂದ್ರು ಕೂಡ ಇಂದು ಮೃತಪಟ್ಟಿದ್ದಾನೆ.
ಬೆಂಗಳೂರಿನ ನಂದಿನಿಲೇಔಟ್ ನಲ್ಲಿ ಪಾರಿವಾಳ ಹಿಡಿಯೋ ಭರದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಇಬ್ಬರು ಬಾಲಕರು ಗಂಭೀರವಾಗಿ ಗಾಯಗೊಂಡಿದ್ದರು. ಕಳೆದ ಗುರುವಾರ ಸಂಜೆ 6.30 ರ ಸುಮಾರಿಗೆ ಅವಘಡ ಸಂಭವಿಸಿದ್ದು, ಚಂದ್ರು (10), ಸುಪ್ರೀತ್ (12) ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡಿದ್ದ ಚಂದ್ರು ಹಾಗೂ ಸುಪ್ರೀತ್ ನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು,
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕ ಸುಪ್ರೀತ್ ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದನು . ಇದಾದ ಬಳಿಕ ಚಂದ್ರು ಇಂದು ಮೃತಪಟ್ಟಿದ್ದಾನೆ.
BREAKING NEWS : ವಿಜಯಪುರಕ್ಕೂ ಕಾಲಿಟ್ಟ ‘ಧರ್ಮ ದಂಗಲ್’ : ‘ಮುಸ್ಲಿಂ ವ್ಯಾಪಾರಿ’ಗಳಿಗೆ ನಿಷೇಧ ಹೇರುವಂತೆ ಮನವಿ