ಲಂಡನ್: ಮಾಜಿ ಪ್ರಧಾನಿ ರಿಷಿ ಸುನಕ್ ಅವರ ರಾಜೀನಾಮೆಯ ನಂತರ ಎರಡು ದಿನಗಳ ಹಿಂದಷ್ಟೇ ನೇಮಕಗೊಂಡಿದ್ದ ಬ್ರಿಟನ್ನ ನೂತನ ಹಣಕಾಸು ಸಚಿವ ನಾಧಿಮ್ ಜಹಾವಿ ಅವರು ಗುರುವಾರ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು “ಸರಿಯಾದ ಕೆಲಸವನ್ನು ಮಾಡಿ ಈಗಲೇ ಹೋಗಿ” ಎಂದು ಒತ್ತಾಯಿಸಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬುದಾಗಿ ಯುಕೆ ಮೀಡಿಯಾ ವರದಿಗಳು ತಿಳಿಸಿವೆ.
“ಪ್ರಧಾನ ಮಂತ್ರಿಗಳೇ, ನಿಮ್ಮ ಹೃದಯದಲ್ಲಿ ಮಾಡಬೇಕಾದ ಸರಿಯಾದ ಕೆಲಸವೆಂದರೆ ಏನು ಎಂದು ನಿಮಗೆ ತಿಳಿದಿದೆ, ಮತ್ತು ಈಗಲೇ ಹೋಗಿ” ಎಂದು ಅವರು ಟ್ವೀಟ್ ಮಾಡಿದ್ದಾರೆ.
A number of us have an obligation to keep this country safe,no matter who is PM. The Party has a mechanism to change leaders and that is the mechanism which I advise colleagues to use. In the meantime,the public would not forgive us if we left these Offices of State empty.
— Rt. Hon Ben Wallace MP (@BWallaceMP) July 7, 2022
ಇದೇ ಸಂದರ್ಭದಲ್ಲಿ ಬ್ರಿಟನ್ ಶಿಕ್ಷಣ ಸಚಿವ ಮಿಶೆಲ್ ಡೊನೆಲಾನ್ ಅವರು ಎರಡು ದಿನಗಳ ಹಿಂದಷ್ಟೇ ಸರ್ಕಾರದ ನಿರ್ಗಮನದ ನಡುವೆಯೇ ಈ ಹುದ್ದೆಗೆ ಬಡ್ತಿ ಪಡೆದಿದ್ದು, ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಮ್ಮನ್ನು ಅಸಾಧ್ಯವಾದ ಪರಿಸ್ಥಿತಿಗೆ ಸಿಲುಕಿಸಿದ್ದಾರೆ ಎಂದು ಗುರುವಾರ ರಾಜೀನಾಮೆ ನೀಡಿದ್ದಾರೆ.
UK Prime Minister Boris Johnson will likely resign as Prime Minister today: UK Media pic.twitter.com/eDcKg48gFj
— ANI (@ANI) July 7, 2022