ಬೆಂಗಳೂರು: ಬಸವರಾಜ ಬೊಮ್ಮಾಯಿ ( Basavaraj Bommai ) ಅವರೇ, ಕರ್ನಾಟಕವನ್ನು ನೀವು ಆಳುತ್ತಿದ್ದೀರೋ ಅಥವಾ ಗೂಂಡಾಗಳು ಆಳುತ್ತಿದ್ದಾರೋ? ಅರಗ ಜ್ಞಾನೇಂದ್ರ ಅವರೇ, ಗೃಹ ಇಲಾಖೆಯ ಸಚಿವರಾಗಿ ನೀವೇ ಇದ್ದಿರೋ ಅಥವಾ ಕ್ರಿಮಿನಲ್ಗಳಿಗೆ ವಹಿಸಿಕೊಟ್ಟಿದ್ದೀರೋ? ಜನಪ್ರತಿನಿಧಿಗಳಿಗೇ ಜೀವ ಬೆದರಿಕೆ ಹಾಕುವವರನ್ನು ಸರ್ಕಾರ ಸಾಕಿಕೊಂಡಿದೆ ಎಂದರೆ ಜನಸಾಮಾನ್ಯರು ರಕ್ಷಣೆ ನಿರೀಕ್ಷಿಸಲು ಸಾಧ್ಯವೇ? ಎಂದು ಬಿಜೆಪಿಯನ್ನು ( BJP ) ಕರ್ನಾಟಕ ಕಾಂಗ್ರೆಸ್ ( Karnataka Congress ) ತರಾಟೆಗೆ ತೆಗೆದುಕೊಂಡಿದೆ.
'@BSBommai ಅವರೇ,
ಕರ್ನಾಟಕವನ್ನು ನೀವು ಆಳುತ್ತಿದ್ದೀರೋ ಅಥವಾ ಗೂಂಡಾಗಳು ಆಳುತ್ತಿದ್ದಾರೋ?@JnanendraAraga ಅವರೇ, ಗೃಹ ಇಲಾಖೆಯ ಸಚಿವರಾಗಿ ನೀವೇ ಇದ್ದಿರೋ ಅಥವಾ ಕ್ರಿಮಿನಲ್ಗಳಿಗೆ ವಹಿಸಿಕೊಟ್ಟಿದ್ದೀರೋ?ಜನಪ್ರತಿನಿಧಿಗಳಿಗೇ ಜೀವ ಬೆದರಿಕೆ ಹಾಕುವವರನ್ನು ಸರ್ಕಾರ ಸಾಕಿಕೊಂಡಿದೆ ಎಂದರೆ ಜನಸಾಮಾನ್ಯರು ರಕ್ಷಣೆ ನಿರೀಕ್ಷಿಸಲು ಸಾಧ್ಯವೇ?
— Karnataka Congress (@INCKarnataka) November 17, 2022
ಈ ಕುರಿತು ಟ್ವಿಟ್ ಮಾಡಿದ್ದು, ಮೊನ್ನೆ ಒಬ್ಬ ಬಿಜೆಪಿ ಗೂಂಡಾ ಪ್ರಿಯಾಂಕ್ ಖರ್ಗೆ ಅವರಿಗೆ ಗುಂಡು ಹೊಡೆಯುತ್ತೇನೆ ಎಂದಿದ್ದ, ಇಂದು ಮತ್ತೊಬ್ಬ ಶಾಸಕ ತನ್ವೀರ್ ಸೇಠ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾನೆ. ಜನಪ್ರತಿನಿಧಿಗಳಿಗೇ ಕೊಲೆ ಬೆದರಿಕೆ ಹಾಕಿ ರಾಜಾರೋಷವಾಗಿ ತಿರುಗಿಕೊಂಡಿರಲು ಸರ್ಕಾರ ಬಿಟ್ಟಿದೆ ಎಂದರೆ ಗೃಹ ಇಲಾಖೆ ಸತ್ತಿದೆ ಎಂದರ್ಥ ಅಲ್ಲವೇ ಅರಗ ಜ್ಞಾನೇಂದ್ರ ಅವರೇ? ಎಂದು ಪ್ರಶ್ನಿಸಿದೆ.
ಮೊನ್ನೆ ಒಬ್ಬ ಬಿಜೆಪಿ ಗೂಂಡಾ @PriyankKharge ಅವರಿಗೆ ಗುಂಡು ಹೊಡೆಯುತ್ತೇನೆ ಎಂದಿದ್ದ, ಇಂದು ಮತ್ತೊಬ್ಬ ಶಾಸಕ ತನ್ವೀರ್ ಸೇಠ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾನೆ.
ಜನಪ್ರತಿನಿಧಿಗಳಿಗೇ ಕೊಲೆ ಬೆದರಿಕೆ ಹಾಕಿ ರಾಜಾರೋಷವಾಗಿ ತಿರುಗಿಕೊಂಡಿರಲು ಸರ್ಕಾರ ಬಿಟ್ಟಿದೆ ಎಂದರೆ ಗೃಹ ಇಲಾಖೆ ಸತ್ತಿದೆ ಎಂದರ್ಥ ಅಲ್ಲವೇ @JnanendraAraga ಅವರೇ? pic.twitter.com/kufJBjI2XC
— Karnataka Congress (@INCKarnataka) November 17, 2022