ಬೆಂಗಳೂರು: ಐಎಎಸ್ನಂತಹ ಉನ್ನತ ಮಟ್ಟದ ಅಧಿಕಾರಿಗಳು ಬಾಗಿಯಾಗಿರುವಂತಹ ಚಿಲುಮೆ ಪ್ರಕರಣಕ್ಕೆ ಪೊಲೀಸ್ ತನಿಖೆ ಮಾತ್ರ ಸಾಕೇ ಬಸವರಾಜ ಬೊಮ್ಮಾಯಿ ಅವರೇ? ನ್ಯಾಯಾಂಗ ತನಿಖೆಗೆ ವಹಿಸಲು ಹಿಂದೇಟು ಹಾಕುತ್ತಿರುವುದೇಕೆ? ಚಿಲುಮೆ ಸಂಸ್ಥೆಯ ಹಣದ ಮೂಲ ಹುಡುಕಲು ಐಟಿ, ಇಡಿಗಳಿಗೆ ಇಷ್ಟವಿಲ್ಲವೇಕೆ? ಸಚಿವರ ಲೆಟರ್ ಹೆಡ್, ಚೆಕ್ಗಳ ಬಗ್ಗೆ ಮಾತಾಡುತ್ತಿಲ್ಲವೇಕೆ? ಎಂದು ಸಿಎಂ ಅವರನ್ನು, ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಶ್ನಿಸಿದೆ.
ಐಎಎಸ್ನಂತಹ ಉನ್ನತ ಮಟ್ಟದ ಅಧಿಕಾರಿಗಳು ಬಾಗಿಯಾಗಿರುವಂತಹ ಚಿಲುಮೆ ಪ್ರಕರಣಕ್ಕೆ ಪೊಲೀಸ್ ತನಿಖೆ ಮಾತ್ರ ಸಾಕೇ @BSBommai ಅವರೇ?
ನ್ಯಾಯಾಂಗ ತನಿಖೆಗೆ ವಹಿಸಲು ಹಿಂದೇಟು ಹಾಕುತ್ತಿರುವುದೇಕೆ? ಚಿಲುಮೆ ಸಂಸ್ಥೆಯ ಹಣದ ಮೂಲ ಹುಡುಕಲು ಐಟಿ, ಇಡಿಗಳಿಗೆ ಇಷ್ಟವಿಲ್ಲವೇಕೆ?
ಸಚಿವರ ಲೆಟರ್ ಹೆಡ್, ಚೆಕ್ಗಳ ಬಗ್ಗೆ ಮಾತಾಡುತ್ತಿಲ್ಲವೇಕೆ?#saycm
— Karnataka Congress (@INCKarnataka) November 26, 2022
ಇಂದು ಸರಣಿ ಟ್ವಿಟ್ ಮಾಡಿರುವಂತ ಕಾಂಗ್ರೆಸ್, ಮುಖ್ಯಮಂತ್ರಿ ಕಚೇರಿಯಿಂದ ಮಹತ್ವದ ಕಡತ ಒಂದು ಕಾಣೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಸಿಎಂ ಆಪ್ತ ಕಾರ್ಯದರ್ಶಿಯ ಹನಿಟ್ರಾಪ್ ವಿಚಾರಕ್ಕೂ, ಕಡತ ಕಾಣೆಯಾಗಿರುವುದಕ್ಕೂ ಸಂಬಂಧವಿದೆಯೇ? ಸಿಎಂ ಕಚೇರಿ ಬಸವರಾಜ ಬೊಮ್ಮಾಯಿ ಅವರ ಹಿಡಿತದಲ್ಲಿ ಇಲ್ಲವೇ? ಬಿಬಿಎಂಪಿಗೆ ಸಂಬಂಧಿಸಿದ ಮಹತ್ವದ ಕಡತವನ್ನೇ ರಕ್ಷಿಸಲಾಗದವರು ರಾಜ್ಯ ರಕ್ಷಿಸಲು ಸಾಧ್ಯವೇ? ಎಂದು ಕೇಳಿದೆ.
ಮುಖ್ಯಮಂತ್ರಿ ಕಚೇರಿಯಿಂದ ಮಹತ್ವದ ಕಡತ ಒಂದು ಕಾಣೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ.
ಸಿಎಂ ಆಪ್ತ ಕಾರ್ಯದರ್ಶಿಯ ಹನಿಟ್ರಾಪ್ ವಿಚಾರಕ್ಕೂ, ಕಡತ ಕಾಣೆಯಾಗಿರುವುದಕ್ಕೂ ಸಂಬಂಧವಿದೆಯೇ?
ಸಿಎಂ ಕಚೇರಿ @BSBommai ಅವರ ಹಿಡಿತದಲ್ಲಿ ಇಲ್ಲವೇ?
ಬಿಬಿಎಂಪಿಗೆ ಸಂಬಂಧಿಸಿದ ಮಹತ್ವದ ಕಡತವನ್ನೇ ರಕ್ಷಿಸಲಾಗದವರು ರಾಜ್ಯ ರಕ್ಷಿಸಲು ಸಾಧ್ಯವೇ?#saycm
— Karnataka Congress (@INCKarnataka) November 26, 2022
‘ಬಿಜೆಪಿ ಪಕ್ಷದ ( BJP Party ) ಪ್ರಮುಖ ಕಳ್ಳತನಗಳು. ಶಾಸಕರ ಕಳ್ಳತನ, ಕಮಿಷನ್ ಕಳ್ಳತನ, ಸರ್ಕಾರಿ ಹುದ್ದೆಗಳ ಕಳ್ಳತನ, ಮತದಾರರ ಮಾಹಿತಿ ಕಳ್ಳತನ. ಬಿಜೆಪಿ ಒಮ್ಮೆಯೂ ಜನದೇಶದ ಮೂಲಕ ಅಧಿಕಾರಕ್ಕೆ ಬಂದಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಳ್ಳ ಮಾರ್ಗದಲ್ಲಿ ಹೈಜಾಕ್ ಮಾಡಿ ಅಧಿಕಾರ ಹಿಡಿಯುವ ಬಿಜೆಪಿ ಬಗ್ಗೆ ಜನತೆ ಜಾಗ್ರತೆ ವಹಿಸಬೇಕು ಎಂದಿದೆ.
'@BJP4Karnataka ಪಕ್ಷದ ಪ್ರಮುಖ ಕಳ್ಳತನಗಳು.
◆ಶಾಸಕರ ಕಳ್ಳತನ
◆ಕಮಿಷನ್ ಕಳ್ಳತನ
◆ಸರ್ಕಾರಿ ಹುದ್ದೆಗಳ ಕಳ್ಳತನ
◆ಮತದಾರರ ಮಾಹಿತಿ ಕಳ್ಳತನಬಿಜೆಪಿ ಒಮ್ಮೆಯೂ ಜನದೇಶದ ಮೂಲಕ ಅಧಿಕಾರಕ್ಕೆ ಬಂದಿಲ್ಲ,
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಳ್ಳ ಮಾರ್ಗದಲ್ಲಿ ಹೈಜಾಕ್ ಮಾಡಿ ಅಧಿಕಾರ ಹಿಡಿಯುವ ಬಿಜೆಪಿ ಬಗ್ಗೆ ಜನತೆ ಜಾಗ್ರತೆ ವಹಿಸಬೇಕು.— Karnataka Congress (@INCKarnataka) November 26, 2022