ಬೆಂಗಳೂರು: ಬಿಜೆಪಿಯಲ್ಲಿ BSY ಚಲಾವಣೆಯಲ್ಲಿಲ್ಲದ ನಾಣ್ಯದಂತಾಗಿರುವಾಗ ಸಿಎಂ ಬಸವರಾಜ ಬೊಮ್ಮಾಯಿ ಅವರೂ ಈಗ ಸಂತೋಷ ಕೂಟಕ್ಕೆ ಹೈಜಂಪ್ ಮಾಡಿದರೆ? ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ಬಿಎಸ್ ಯಡಿಯೂರಪ್ಪ ಅವರ ಫೋಟೋಗೆ ಜಾಗ ನೀಡದ ಬಿಜೆಪಿ ಅಸಲಿಗೆ ಮಾಡಲು ಹೊರಟಿರುವುದು #BSYmuktaBJP ಸಂಕಲ್ಪ! ಗುರುವಿಗೆ ಅವಮಾನಿಸುವ ನೇತೃತ್ವವನ್ನು ಸ್ವತಃ ಬೊಮ್ಮಾಯಿಯವರೇ ವಹಿಸಿರುವಂತಿದೆ ಎಂಬುದಾಗಿ ಬಿಜೆಪಿಯನ್ನು ಕರ್ನಾಟಕ ಕಾಂಗ್ರೆಸ್ ಕುಟುಕಿದೆ.
ಬಿಜೆಪಿಯಲ್ಲಿ BSY ಚಲಾವಣೆಯಲ್ಲಿಲ್ಲದ ನಾಣ್ಯದಂತಾಗಿರುವಾಗ ಸಿಎಂ @BSBommai ಅವರೂ ಈಗ ಸಂತೋಷ ಕೂಟಕ್ಕೆ ಹೈಜಂಪ್ ಮಾಡಿದರೆ?
ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ @BSYBJP ಅವರ ಫೋಟೋಗೆ ಜಾಗ ನೀಡದ ಬಿಜೆಪಿ ಅಸಲಿಗೆ ಮಾಡಲು ಹೊರಟಿರುವುದು #BSYmuktaBJP ಸಂಕಲ್ಪ!
ಗುರುವಿಗೆ ಅವಮಾನಿಸುವ ನೇತೃತ್ವವನ್ನು ಸ್ವತಃ ಬೊಮ್ಮಾಯಿಯವರೇ ವಹಿಸಿರುವಂತಿದೆ. pic.twitter.com/O1AkjTejQx
— Karnataka Congress (@INCKarnataka) December 14, 2022
ಈ ಕುರಿತಂತೆ ಟ್ವಿಟ್ ಮಾಡಿದ್ದು, ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ಅವರು ಸಾಕಿದ ಗಿಳಿಗಳೇ ಹದ್ದುಗಳಾಗಿ ಕುಕ್ಕುತ್ತಿವೆ! ಬಿಜೆಪಿ ಬೇರು ಬಿಡಲು BSY ಆಸರೆ ಬೇಕಿತ್ತು, ಬೇರು ಬಿಟ್ಟು ಮೊಳಕೆಯೊಡೆದ ಮೇಲೆ ಸಂತೋಷ ಕೂಟದ್ದೇ ಸರ್ವಾಧಿಕಾರವಾಗಿದೆ. #BSYmuktaBJP ಮಾಡುವ ಆಜ್ಞೆ ಯಾರದ್ದು ಬಿಜೆಪಿ ? ಕೇಶವ ಕೃಪದ್ದೇ? ಹೈಕಮಾಂಡಿನದ್ದೇ? ಸಂತೋಷ ಕೂಟದ್ದೇ? ಮೋದಿ – ಶಾ ಅವರದ್ದೇ? ಎಂದು ಪ್ರಶ್ನಿಸಿದೆ.
ಬಿಜೆಪಿಯಲ್ಲಿ @BSYBJP ಅವರು ಸಾಕಿದ ಗಿಳಿಗಳೇ ಹದ್ದುಗಳಾಗಿ ಕುಕ್ಕುತ್ತಿವೆ!
ಬಿಜೆಪಿ ಬೇರು ಬಿಡಲು BSY ಆಸರೆ ಬೇಕಿತ್ತು, ಬೇರು ಬಿಟ್ಟು ಮೊಳಕೆಯೊಡೆದ ಮೇಲೆ ಸಂತೋಷ ಕೂಟದ್ದೇ ಸರ್ವಾಧಿಕಾರವಾಗಿದೆ.#BSYmuktaBJP ಮಾಡುವ ಆಜ್ಞೆ ಯಾರದ್ದು @BJP4Karnataka?
ಕೇಶವ ಕೃಪದ್ದೇ?
ಹೈಕಮಾಂಡಿನದ್ದೇ?
ಸಂತೋಷ ಕೂಟದ್ದೇ?
ಮೋದಿ – ಶಾ ಅವರದ್ದೇ? pic.twitter.com/xu1EXcUPCW— Karnataka Congress (@INCKarnataka) December 14, 2022