ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಘೋರ ದುರಂತ ಒಂದು ನಡೆದಿದ್ದು, ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿ ಇರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಸ್ಫೋಟಗೊಂಡಿದೆ. ಆದರೆ ಅದೃಷ್ಟವಶಾತ್ ಕಾರ್ಖಾನೆಯಲ್ಲಿದ್ದ ಸಿಬ್ಬಂದಿಗಳೆಲ್ಲರೂ ಪ್ರಾಣ ಅಪಾಯದಿಂದ ಪಾರಾಗಿದ್ದಾರೆ.
ಹೌದು ಇಂದು ಕಾರ್ಖಾನೆಯ ಸುಮಾರು 15 ಜನರು ನಸುಕಿನ ಜಾವ ಚಹಾ ಕುಡಿಯಲು ಹೊರಗೆ ತೆರಳಿದ್ದ ವೇಳೆ ಬಾಯ್ಲರ್ ಬ್ಲಾಸ್ಟ್ ಆಗಿದೆ. ಅದೃಷ್ಟವ್ವಶಾತ್ ಕೂದಲೆಳೆ ಅಂತರದಲ್ಲಿ ಕಾರ್ಮಿಕರು ಪಾರಾಗಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಮುಂದಿನ ಅವಧಿಗೆ ಕಬ್ಬು ನುರಿಸಲು ಕಾರ್ಖಾನೆ ಸಿದ್ದ ಮಾಡುತ್ತಿರುವ ವೇಳೆ ಬಾಯ್ಲರ್ ಸ್ಫೋಟಗೊಂಡಿದೆ.
2023ರ ಮಾ.4ರಂದು ಇದೇ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟವಾಗಿತ್ತು. ಆಗ ಓರ್ವ ಕಾರ್ಮಿಕ ಮೃತಪಟ್ಟಿದ್ದು, ನಾಲ್ವರಿಗೆ ಸುಟ್ಟ ಗಾಯಗಳಾಗಿದ್ದವು. ಕಳಪೆ ಬಾಯ್ಲರ್ ನಿರ್ಮಾಣದಿಂದ ಅವಘಡ ಸಂಭವಿಸುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಯ್ಲರ್ ಬ್ಲಾಸ್ಟ್ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕೆಂದು ರೈತರ ಒತ್ತಾಯಿಸಿದ್ದಾರೆ.