ಬೆಂಗಳೂರು: ಬಿಎಂಟಿಸಿಯು ( BMTC ) ರಜತ ಮಹೋತ್ಸವ ದಿನಾಚರಣೆಯ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರಿಗೆ ಬಿಎಂಟಿಸಿ ಬಸ್ ನಲ್ಲಿ ( BMTC Bus ) ಉಚಿತ ಪ್ರಯಾಣಕ್ಕೆ ಅವಕಾಶವನ್ನು ಕಲ್ಪಿಸಲಾಗುತ್ತಿದೆ ಎಂಬುದಾಗಿ ರಾಜ್ಯ ಸರ್ಕಾರ ( Karnataka Government ) ಘೋಷಿಸಿದೆ.
ಈ ಕುರಿತಂತೆ ಸಾರಿಗೆ ಇಲಾಖೆಯ ( Transport Department ) ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಬಿಎಂಟಿಸಿಯ ರಜತ ಮಹೋತ್ಸವ ದಿನಾಚರಣೆಯ ನಿಟ್ಟಿನಲ್ಲಿ ಆಗಸ್ಟ್ 15, 2022ರಂದು ಒಂದು ದಿನ ಸಂಸ್ಥೆಯ ಸಾಮಾನ್ಯ ಸಾರಿಗೆಗಳಲ್ಲಿ ಪ್ರಯಾಣಿಸುವ ಸಾರ್ವಜನಿಕ ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸುವ ಸಲುವಾಗಿ ಸರ್ಕಾರದ ಅನುಮೋದನೆ ನೀಡುವಂತೆ ಕೋರಲಾಗಿದೆ ಎಂದಿದ್ದಾರೆ.
ಪ್ರಸ್ತಾವನೆಯನ್ನು ಪರಿಶೀಲಿಸಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಹಿನ್ನಲೆಯಲ್ಲಿ, ಸಂಸ್ಥೆಯು ರಜತ ಮಹೋತ್ಸವವನ್ನು ಆಚರಿಸಲು ಆಗಸ್ಚ್ 15, 2022ರ ಸ್ವಾತಂತ್ರೋತ್ಸವ ದಿನದಂದು ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.
BIGG NEWS : ಸಾರ್ವಜನಿಕರ ಗಮನಕ್ಕೆ : `ಶಾಂತಿಸಾಗರ’ ಸುತ್ತಮುತ್ತಾ ಜನರ ಓಡಾಟಕ್ಕೆ ನಿಷೇಧ