ಬೆಂಗಳೂರು: ಬಿಎಂಟಿಸಿಯ ಡಿಪೋ ಮ್ಯಾನೇಜರ್ ಒಬ್ಬರು ಡ್ರೈವರ್ ಕಂ ಕಂಡಕ್ಟರ್ ಗೆ ( BMTC Driver ) ಕಿರುಕುಳ ನೀಡಿದ್ದ ಕಾರಣ, ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಂಬಂಧ ಡಿಪೋ ಮ್ಯಾನೇಜ್ ಅನ್ನು ಬಿಎಂಟಿಸಿ ಅಮಾನತುಗೊಳಿಸಿ ಆದೇಶಿಸಿದೆ.
ಕಳೆದ ಎರಡು ದಿನಗಳ ಹಿಂದೆ ಆರ್ ಆರ್ ನಗರ ಡಿಪೋದ ಬಿಎಂಟಿಸಿಯ ಡ್ರೈವರ್ ಕಂ ಕಂಡಕ್ಟರ್ ಹೊಳೆಬಸಪ್ಪ ಎಂಬುವರು, ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನಯ್ಯ ಅವರು ಕಿರುಕುಳ ನೀಡುತ್ತಿದ್ದಾರೆ. ನನ್ನ ಸಾವಿಗೆ ಅವರೇ ಕಾರಣ ಎಂಬುದಾಗಿ ಡೆತ್ ನೋಟ್ ಬರೆದಿತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣ ಸಂಬಂಧ ಮೃತನ ಪತ್ನಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
Job Alert: ‘ಉದ್ಯೋಗಾಕಾಂಕ್ಷಿ’ಗಳ ಗಮನಕ್ಕೆ: ‘ಆರೋಗ್ಯ ಇಲಾಖೆ’ಯಿಂದ ‘558 ಹುದ್ದೆ’ಗಳ ಭರ್ತಿಗೆ ಅರ್ಜಿ ಆಹ್ವಾನ
ಈ ಪ್ರಕರಣ ಸಂಬಂಧ ಬಿಎಂಟಿಸಿಯ ಜಾಗೃತ ಮತ್ತು ಭದ್ರತಾ ದಳದಿಂದ ಸಂಸ್ಥೆಗೆ ಡ್ರೈವರ್ ಕಂ ಕಂಡಕ್ಟರ್ ಹೊಳೆಬಸಪ್ಪ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿ, ವರದಿಯನ್ನು ನೀಡಿತ್ತು. ಈ ವರದಿಯನ್ನು ಆಧರಿಸಿ, ಇಂದು ರಾಜರಾಜೇಶ್ವರಿ ನಗರದ ಡಿಪೋ 21ರ ಮ್ಯಾನೇಜರ್ ಮಲ್ಲಿಕಾರ್ಜುನಯ್ಯ ಅವರನ್ನು ಅಮಾನತುಗೊಳಿಸಿ ಆದೇಶಿಸಿದೆ.
BIG NEWS : ಮುರುಘಾ ಶ್ರೀಗಳಿಗೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಪುರುಷತ್ವ ಪರೀಕ್ಷೆ