Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಸಾರ್ವಜನಿಕರೇ ಎಚ್ಚರ : ಈ 10 ವಹಿವಾಟುಗಳನ್ನು ಮಾಡಿದ್ರೆ ನಿಮ್ಮ ಮನೆಗೆ ಬರುತ್ತೆ ‘IT’ ನೋಟಿಸ್.!

06/02/2026 5:10 AM

‘ನಮ್ಮ ಮೆಟ್ರೋ’ ಟಿಕೆಟ್ ಬೆಲೆ ಏರಿಕೆ ಮಾಡಿ ‘BMRCL’ ಅಧಿಕೃತ ಆದೇಶ : ಸೋಮವಾರದಿಂದ ಪರಿಷ್ಕೃತ ದರ ಜಾರಿ.!

06/02/2026 5:00 AM

ಶೂನ್ಯ ಬೋಧನಾ ಶುಲ್ಕ, ತಿಂಗಳಿಗೆ ಲಕ್ಷಗಳಲ್ಲಿ ಸ್ಟೈಫಂಡ್ ; ‘MEXT ವಿದ್ಯಾರ್ಥಿವೇತನ’ಕ್ಕೆ ಅರ್ಜಿ ಸಲ್ಲಿಸಿ!

05/02/2026 9:58 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ನಮ್ಮ ಮೆಟ್ರೋ’ ಟಿಕೆಟ್ ಬೆಲೆ ಏರಿಕೆ ಮಾಡಿ ‘BMRCL’ ಅಧಿಕೃತ ಆದೇಶ : ಸೋಮವಾರದಿಂದ ಪರಿಷ್ಕೃತ ದರ ಜಾರಿ.!
KARNATAKA

‘ನಮ್ಮ ಮೆಟ್ರೋ’ ಟಿಕೆಟ್ ಬೆಲೆ ಏರಿಕೆ ಮಾಡಿ ‘BMRCL’ ಅಧಿಕೃತ ಆದೇಶ : ಸೋಮವಾರದಿಂದ ಪರಿಷ್ಕೃತ ದರ ಜಾರಿ.!

By kannadanewsnow5706/02/2026 5:00 AM

ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಟಿಕೆಟ್ ಬೆಲೆ ಏರಿಕೆ ಮಾಡಿ BMRCL ಅಧಿಕೃತ ಆದೇಶ ಹೊರಡಿಸಿದೆ. 

ಬೆಂಗಳೂರಿನ ‘ನಮ್ಮ ಮೆಟ್ರೋ’ ಪ್ರಯಾಣ ದರವನ್ನು ಶೇ. 5ರಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಫೆ.9, ಸೋಮವಾರದಿಂದ ಹೊಸ ದರಗಳು ಜಾರಿಗೆ ಬರಲಿದ್ದು, ನಿರ್ವಹಣಾ ವೆಚ್ಚದ ಹೆಚ್ಚಳವಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ದರ ಏರಿಕೆಗೆ ಮೆಟ್ರೋ ಪ್ರಯಾಣಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ವಾರ್ಷಿಕ ದರ ಪರಿಷ್ಕರಣೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮೆಟ್ರೋ ರೈಲ್ವೇಸ್ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002ರ ಅಡಿಯಲ್ಲಿ ರಚಿತವಾದ ಮೊದಲ ದರ ನಿಗದಿ ಸಮಿತಿ (FFC) ಪ್ರಕಾರ ವಾರ್ಷಿಕ ದರ ಪರಿಷ್ಕರಣೆ ಪ್ರಕಟಿಸಿದೆ.

ದರ ನಿಗದಿ ಸಮಿತಿ (FFC) ಪ್ರಕಾರ BMRCLಗೆ 7.5 ವರ್ಷಗಳ ನಂತರ ಪರಿಷ್ಕೃತ ದರ ರಚನೆಯನ್ನು ಮತ್ತು 29 ರಿಂದ 10 ರವರೆಗಿನ ದರದ ವಲಯಗಳನ್ನು ಶಿಫಾರಸು ಮಾಡುವಾಗ ದರ ಪರಿಷ್ಕರಣೆ ಸರಾಸರಿ ಶೇ 51.55 ರಷ್ಟು ಹೆಚ್ಚಳಕ್ಕೆ ಕಾರಣವಾಯಿತು. ಭವಿಷ್ಯದಲ್ಲಿ ಇಂತಹ ದರ ಹೆಚ್ಚಳದ ಪರಿಸ್ಥಿತಿಯನ್ನು ತಪ್ಪಿಸುವ ದೃಷ್ಟಿಯೊಂದಿಗೆ, ಸಮಿತಿಯು ತನ್ನ ವರದಿಯಲ್ಲಿ ಪಾರದರ್ಶಕ ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆ ಸೂತ್ರವನ್ನು, ವಾರ್ಷಿಕ ಕಾರ್ಯಾಚರಣೆ ಮತ್ತು ನಿರ್ವಹಣೆಯ ಶೇಕಡಾವಾರು ವೆಚ್ಚ ಅಥವಾ ವಾರ್ಷಿಕ ಶೇ 5 ಯಾವುದು ಕಡಿಮೆಯೋ ಮತ್ತು ಮುಂದಿನ ಒಂದು ರೂಪಾಯಿಗೆ ಪೂರ್ಣಾಂಕಗೊಳಿಸಿ ದರವನ್ನು ಪರಿಷ್ಕರಿಸಲು ಶಿಫಾರಸು ಮಾಡಿದೆ. ಈ ಕಾರ್ಯವಿಧಾನವು, ವಾರ್ಷಿಕವಾಗಿ ಅಲ್ಪ ದರ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ.

BMRCL ಮೇಲೆ ಬದ್ಧವಾಗಿರುವ FFC ಯ ಶಿಫಾರಸುಗಳನ್ನು ಗಮನದಲ್ಲಿಟ್ಟುಕೊಂಡು, BMRCL ನಿಂದ FFC ಶಿಫಾರಸು ಮಾಡಲಾದ ದರಗಳನ್ನು ಜಾರಿಗೆ ತಂದ ದಿನಾಂಕದಿಂದ 1 ವರ್ಷ (9 ಫೆಬ್ರವರಿ 2025) ಮುಕ್ತಾಯಗೊಂಡ ನಂತರ, ಫೆಬ್ರವರಿ 9, 2026 ರಿಂದ ಜಾರಿಗೆ ಬರುವಂತೆ ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆಯನ್ನು ಜಾರಿಗೆ ತರಲಾಗುವುದು ಎಂದು ಈ ಮೂಲಕ ತಿಳಿಸಲಾಗಿದೆ. 96.10 ಕಿಮೀಗಳ ಸಂಪೂರ್ಣ ಜಾಲದಲ್ಲಿರುವ 10 ದರ ವಲಯಗಳಲ್ಲಿ ಕನಿಷ್ಠ ರೂ.1 ಮತ್ತು ಗರಿಷ್ಠ ರೂ.5 ರಷ್ಟು ಅಲ್ಪ ಹೆಚ್ಚಳವಾಗಿದೆ.

2024-25 (31 ಮಾರ್ಚ್ 2025) ಹಣಕಾಸು ವರ್ಷದ ಅಂಕಿ ಅಂಶಗಳನ್ನು, ಹಣಕಾಸು ವರ್ಷ 2023-24 (31 ಮಾರ್ಚ್ 2024) ರ ಅಂಕಿ ಅಂಶಗಳಿಗೆ ಹೋಲಿಸಿದರೆ, ಸೂತ್ರ-ಆಧಾರಿತ ದರ ಪರಿಷ್ಕರಣೆ ಶೇ 10.20ರಷ್ಟು ವೆಚ್ಚ ಹೆಚ್ಚಳವನ್ನು ಸೂಚಿಸುತ್ತದೆ. ಆದಾಗ್ಯೂ, FFC ನಿಬಂಧನೆಗೆ ಅನುಗುಣವಾಗಿ ದರ ಪರಿಷ್ಕರಣೆಯನ್ನು ಕೇವಲ ಶೇ 5% ಕ್ಕೆ ಸೀಮಿತಗೊಳಿಸಲಾಗಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ವಾರ್ಷಿಕ ದರ ಪರಿಷ್ಕರಣೆ. ಹೆಚ್ಚಿನ ವಿವರಿಗಳಿಗಾಗಿ ಮಾಧ್ಯಮ ಪ್ರಕಟಣೆಯನ್ನು ವೀಕ್ಷಿಸಿ. pic.twitter.com/hBxKlU2khs

— ನಮ್ಮ ಮೆಟ್ರೋ (@OfficialBMRCL) February 5, 2026

ದಿನಾಂಕ 09.02.2026 ರಿಂದ ಅನ್ವಯವಾಗುವ ವಲಯವಾರು ಅಸ್ತಿತ್ವದಲ್ಲಿರುವ ಮತ್ತು ಪರಿಷ್ಕೃತ ದರಗಳು ಈ ಕೆಳಕಂಡಂತಿವೆ:

'BMRCL' official order to increase 'Namma Metro' ticket prices: Revised rates to be implemented from Monday!
Share. Facebook Twitter LinkedIn WhatsApp Email

Related Posts

ALERT : ಸಾರ್ವಜನಿಕರೇ ಎಚ್ಚರ : ಈ 10 ವಹಿವಾಟುಗಳನ್ನು ಮಾಡಿದ್ರೆ ನಿಮ್ಮ ಮನೆಗೆ ಬರುತ್ತೆ ‘IT’ ನೋಟಿಸ್.!

06/02/2026 5:10 AM3 Mins Read

BREAKING: ಗೀತರಚನಕಾರ, ಸಂಗೀತ ನಿರ್ದೇಶಕ ಹಂಸಲೇಖಗೆ ‘ಜೀವಮಾನ ಸಾಧನೆ’ ಪ್ರಶಸ್ತಿ

05/02/2026 9:10 PM1 Min Read

BREAKING : ರಾಜ್ಯದಲ್ಲಿ ಬ್ಯಾಲೆಟ್ ಪೇಪರ್ ನಲ್ಲೇ `ಗ್ರಾಮ ಪಂಚಾಯಿತಿ ಚುನಾವಣೆ’ : ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

05/02/2026 9:01 PM1 Min Read
Recent News

ALERT : ಸಾರ್ವಜನಿಕರೇ ಎಚ್ಚರ : ಈ 10 ವಹಿವಾಟುಗಳನ್ನು ಮಾಡಿದ್ರೆ ನಿಮ್ಮ ಮನೆಗೆ ಬರುತ್ತೆ ‘IT’ ನೋಟಿಸ್.!

06/02/2026 5:10 AM

‘ನಮ್ಮ ಮೆಟ್ರೋ’ ಟಿಕೆಟ್ ಬೆಲೆ ಏರಿಕೆ ಮಾಡಿ ‘BMRCL’ ಅಧಿಕೃತ ಆದೇಶ : ಸೋಮವಾರದಿಂದ ಪರಿಷ್ಕೃತ ದರ ಜಾರಿ.!

06/02/2026 5:00 AM

ಶೂನ್ಯ ಬೋಧನಾ ಶುಲ್ಕ, ತಿಂಗಳಿಗೆ ಲಕ್ಷಗಳಲ್ಲಿ ಸ್ಟೈಫಂಡ್ ; ‘MEXT ವಿದ್ಯಾರ್ಥಿವೇತನ’ಕ್ಕೆ ಅರ್ಜಿ ಸಲ್ಲಿಸಿ!

05/02/2026 9:58 PM

‘ಪಾಸ್ಪೋರ್ಟ್’ ರೂಲ್ಸ್ ಚೇಂಜ್ ; ಈ ತಿಂಗಳ 15ರಿಂದ ಹೊಸ ನಿಯಮ ಜಾರಿ, ತಿಳಿಯಬೇಕಾದ ವಿಷಯಗಳಿವು!

05/02/2026 9:42 PM
State News
KARNATAKA

ALERT : ಸಾರ್ವಜನಿಕರೇ ಎಚ್ಚರ : ಈ 10 ವಹಿವಾಟುಗಳನ್ನು ಮಾಡಿದ್ರೆ ನಿಮ್ಮ ಮನೆಗೆ ಬರುತ್ತೆ ‘IT’ ನೋಟಿಸ್.!

By kannadanewsnow5706/02/2026 5:10 AM KARNATAKA 3 Mins Read

ಉಳಿತಾಯ ಖಾತೆಗಳು ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ನಾವು ಅವುಗಳನ್ನು ಹಣವನ್ನು ವರ್ಗಾಯಿಸಲು, ಬಿಲ್‌ಗಳನ್ನು ಪಾವತಿಸಲು, ಠೇವಣಿ ಮಾಡಲು…

‘ನಮ್ಮ ಮೆಟ್ರೋ’ ಟಿಕೆಟ್ ಬೆಲೆ ಏರಿಕೆ ಮಾಡಿ ‘BMRCL’ ಅಧಿಕೃತ ಆದೇಶ : ಸೋಮವಾರದಿಂದ ಪರಿಷ್ಕೃತ ದರ ಜಾರಿ.!

06/02/2026 5:00 AM

BREAKING: ಗೀತರಚನಕಾರ, ಸಂಗೀತ ನಿರ್ದೇಶಕ ಹಂಸಲೇಖಗೆ ‘ಜೀವಮಾನ ಸಾಧನೆ’ ಪ್ರಶಸ್ತಿ

05/02/2026 9:10 PM

BREAKING : ರಾಜ್ಯದಲ್ಲಿ ಬ್ಯಾಲೆಟ್ ಪೇಪರ್ ನಲ್ಲೇ `ಗ್ರಾಮ ಪಂಚಾಯಿತಿ ಚುನಾವಣೆ’ : ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

05/02/2026 9:01 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.