ಕಲಬುರ್ಗಿ: ಕಳೆದ ಎರಡು ದಿನಗಳ ಹಿಂದಷ್ಟೇ ನಡೆದ ಯುವಕನ ಕೊಲೆ ಸುದ್ದಿ ಮಾಸುವ ಮುನ್ನವೇ ಇದೀಗ ಮತ್ತೊಂದು ಕೊಲೆ ನಡೆದಿದೆ.
BIGG NEWS: ಭಾರತ್ ಜೋಡೋ ಯಾತ್ರೆ ವೇಳೆ ʼಅಮ್ಮನ ಶೂ ಲೇಸ್ʼ ಕಟ್ಟಿದ ರಾಹುಲ್ ಗಾಂಧಿ|Bharat Jodo Yatra
ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ನಿನ್ನೆ ತಡರಾತ್ರಿ ಉದನೂರ ರಸ್ತೆಯ ಬಸಂತ ನಗರದಲ್ಲಿ ನಡೆದಿದೆ.
ಸಂತೋಷ ಕಾಲೋನಿ ನಿವಾಸಿ ಲಕ್ಷ್ಮಿಪುತ್ರ (35) ಕೊಲೆಯಾದ ಯುವಕ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಿಕರೇ ಯುವಕನನ್ನು ಕೊಲೆಗೈದಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಅಶೋಕ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.