ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಹಣಕ್ಕಾಗಿ ಬೆದರಿಕೆ, ವಂಚನೆ, ಕಳ್ಳತನ, ರಾಬರಿ ಹೀಗೆ ಬೇರೆ ಬೇರೆ ಕೃತ್ಯಗಳನ್ನು ಎಸಗುತ್ತಿರೋದು ಹೆಚ್ಚಾಗಿದೆ. ಇದೀಗ ಮಹಿಳೆಯ ನಗ್ನ ಫೋಟೊ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಬೆಂಗಳೂರು ಈಶಾನ್ಯ ಸಿಇಎನ್ ಪೊಲೀಸರಿಂದ ಅರೆಸ್ಟ್ ಮಾಡಲಾಗಿದೆ.
ಮಹಾಂತೇಶ್ ಎಂಬ ವ್ಯಕ್ತಿಯೊಬ್ಬ ಯುವತಿಯ ನಗ್ನ ಫೋಟೋ, ವಿಡಿಯೋ ಇಟ್ಟುಕೊಂಡು 30ಲಕ್ಷ ಕೊಡುವಂತೆ ಮಹಿಳೆಗೆ ಬೆದರಿಕೆ ಹಾಕುತ್ತಿದ್ದನು. ಹಣ ನೀಡದಿದ್ದರೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಬೆದರಿಕೆಯನ್ನು ಮಾಡುತ್ತಿದ್ದನು. ಈ ಕಾರಣಕ್ಕಾಗಿ ಈಶಾನ್ಯ ಸಿಇಎನ್ ಪೊಲೀಸರಿಗೆ ಮಹಿಳೆ ದೂರು ನೀಡಿದಳು. ದೂರು ನೀಡಿದ ಬೆನ್ನಲ್ಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ