ಬೆಂಗಳೂರು : . 1 ರಂದು ರಾಜ್ಯಾದ್ಯಂತ ಕನ್ನಡ ದಿನಾಚರಣೆ ಆಚರಿಸಲಾಗುತ್ತಿದ್ದು, ಕನ್ನಡಿಗರಲ್ಲಿ ಸಂಭ್ರಮ ಮನೆ ಮಾಡಿದೆ. ಮನೆ ಮನೆಗಳಲ್ಲಿ ಕನ್ನಡ ಧ್ವಜ ಹಾರಿಸಲು ಕನ್ನಡ ಕರೆ ನೀಡಲಾಗಿದೆ.
ಈ ಸಂಭ್ರಮದ ನಡುವೆ ನಾಡದ್ರೋಹಿ ಎಂಇಎಸ್ ಮತ್ತೆ ಗಡಿ ಖ್ಯಾತೆ ತೆಗೆದಿದ್ದು, ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಎಂಇಎಸ್ ಮುಖಂಡರು ಕರಾಳ ದಿನಾಚರಣೆಗೆ ಸಿದ್ಧತೆ ನಡೆಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಾಡದ್ರೋಹಿಗಳು ಕರಾಳ ದಿನ ಆಚರಿಸುವ ಕುರಿತಾಗಿ ಪೋಸ್ಟ್ ಹಾಕಿದ್ದಾರೆ.
ನವೆಂಬರ್ 1ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಅದರಲ್ಲೂ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ, ರಾಜ್ಯದ ಮೂಲೆಮೂಲೆಗಳಿಂದ ಕನ್ನಡ ರಾಜ್ಯೋತ್ಸವ ನೋಡಲು ಜನರು ಬೆಳಗಾವಿಗೆ ಆಗಮಿಸುತ್ತಾರೆ. ಆದ್ರೆ, ನಾಡದ್ರೋಹಿ ಎಂಇಎಸ್ ಎಂಇಎಸ್ ಮುಖಂಡರು ಕರಾಳ ದಿನಾಚರಣೆಗೆ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನಾಡದ್ರೋಹಿಗಳು ಕರಾಳ ದಿನದ ಬಗ್ಗೆ ಪೋಸ್ಟ್ ಹಾಕುತ್ತಿದ್ದಾರೆ. ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ಫೇಸ್ಬುಕ್ ಪೇಜ್ನಲ್ಲಿ ನಾಡದ್ರೋಹಿಗಳಿಂದ ಪೋಸ್ಟ್ ಮಾಡಲಾಗಿದ್ದು, ಪೋಸ್ಟ್ ವೈರಲ್ ಆಗಿದೆ.
SBI ನಿಂದ ಕಾರು, ಚಿನ್ನ, ವೈಯಕ್ತಿಕ ಸಾಲಕೊಳ್ಳುವವರಿಗೆ ಸಿಹಿ ಸುದ್ದಿ: ಪ್ರತಿ ಲಕ್ಷಕ್ಕೆ EMI 1,500 ರೂ ಗೆ ಲಭ್ಯ
ಶಾಕಿಂಗ್ ನ್ಯೂಸ್: ಹೃದಯಾಘಾತದಿಂದ ಕುಸಿದು ಬಿದ್ದು 3ನೇ ತರಗತಿ ವಿದ್ಯಾರ್ಥಿ ಶಾಲೆಯಲ್ಲೇ ಸಾವು