ಬೆಂಗಳೂರು: ಸಚಿವ ಉಮೇಶ್ ಕತ್ತಿ ನಿಧನದಿಂದಾಗಿ ದೊಡ್ಡಬಳ್ಳಾಪುರದಲ್ಲಿ ಇಂದು ನಡೆಯಬೇಕಿದ್ದಂತ ಭಿಜೆಪಿ ಜನೋತ್ಸವ ಕಾರ್ಯಕ್ರಮವನ್ನು ( BJP Janotsava Program ) ಮುಂದೂಡಿಕೆ ಮಾಡಲಾಗಿದೆ. ನಿನ್ನೆ ಭಾನುವಾರದಂದು ಜನೋತ್ಸವ ಕಾರ್ಯಕ್ರಮವನ್ನು ( BJP Janaspandana Program ) ನಡೆಯಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು. ಆದ್ರೇ ಭಾನುವಾರವಲ್ಲ, ಶನಿವಾರ ನಡೆಯಲಿದೆ ಎಂಬುದಾಗಿ ಸಚಿವ ಡಾ.ಕೆ ಸುಧಾಕರ್ ಸ್ಪಷ್ಟ ಪಡಿಸಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿ ‘ಸೆಂಟ್ರಲ್ ವಿಸ್ತಾ’, ‘ಕರ್ತವ್ಯ ಪಥ’ಕ್ಕೆ ಚಾಲನೆ | Central Vista
ಈ ಬಗ್ಗೆ ಟ್ವಿಟ್ ಮಾಡಿರುವಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ( Minister Dr K Sudhakar ), ಇಡೀ ರಾಜ್ಯ ಮುತ್ಸದ್ಧಿ ನಾಯಕರೊಬ್ಬರನ್ನು ಕಳೆದುಕೊಂಡ ಶೋಕದಲ್ಲಿರುವುದರಿಂದ ನಾಳಿನ ‘ಜನ ಸ್ಪಂದನ (ಜನೋತ್ಸವ) – ಸಾರ್ಥಕ ಸೇವೆ ಹಾಗು ಸಬಲೀಕರಣ’ ಕಾರ್ಯಕ್ರಮವನ್ನು ಶನಿವಾರ, ಸೆಪ್ಟೆಂಬರ್ 10, ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ಇಡೀ ರಾಜ್ಯ ಮುತ್ಸದ್ಧಿ ನಾಯಕರೊಬ್ಬರನ್ನು ಕಳೆದುಕೊಂಡ ಶೋಕದಲ್ಲಿರುವುದರಿಂದ ನಾಳಿನ 'ಜನ ಸ್ಪಂದನ (ಜನೋತ್ಸವ) – ಸಾರ್ಥಕ ಸೇವೆ ಹಾಗು ಸಬಲೀಕರಣ' ಕಾರ್ಯಕ್ರಮವನ್ನು ಶನಿವಾರ, ಸೆಪ್ಟೆಂಬರ್ 10, ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಗಿದೆ.
— Dr Sudhakar K (@mla_sudhakar) September 7, 2022
ಅಂದಹಾಗೇ ಸಚಿವ ಉಮೇಶ್ ಕತ್ತಿ ನಿಧನದಿಂದಾಗಿ ರಾಜ್ಯ ಸರ್ಕಾರದಿಂದ ರಾಜ್ಯಾಧ್ಯಂತ ಮೂರು ದಿನ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಹೀಗಾಗಿ ಅದು ಮುಗಿದ ಮರುದಿನವಾದ ಶನಿವಾರವೇ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.