ಬೆಂಗಳೂರು: ನಿನ್ನೆಯಷ್ಟೇ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Minister BC Nagesh ) ಅವರು ತಿರಂಗ ಯಾತ್ರೆಯ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕಿಂತ ಎಬಿವಿಪಿ ಧ್ವಜ ಹಾರಿದ್ದರ ಪೋಟೋ ವೈರಲ್ ಆಗಿತ್ತು. ಇದೀಗ ಬಿಜೆಪಿಯ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವ ಬಿ.ಎ ಬಸವರಾಜ ಅವರು ತಮ್ಮ ಶರ್ಟ್ ನ ಜೇಬಿನ ಮೇಲೆ ತಲೆ ಕೆಳಗಾಗಿ ರಾಷ್ಟ್ರಧ್ವಜ ( National Flag ) ಧರಿಸಿರೋ ಪೋಟೋ ವೈರಲ್ ಆಗಿದೆ. ಆ ಪೋಟೋ ಟ್ವಿಟ್ ಮಾಡಿರುವಂತ ಕಾಂಗ್ರೆಸ್, ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದೆ.
ಹೀಗಿದೆ.. ಇಂದಿನ ‘ಸಿಎಂ ಬೊಮ್ಮಾಯಿ’ ನೇತೃತ್ವದ ‘ಸಚಿವ ಸಂಪುಟ ಸಭೆ’ಯಲ್ಲಿ ಕೈಗೊಂಡ ನಿರ್ಧಾರಗಳ ಹೈಲೈಟ್ಸ್
ಈ ಕುರಿತಂತೆ ಟ್ವಿಟ್ ಮಾಡಿರುವಂತ ಕರ್ನಾಟಕ ಕಾಂಗ್ರೆಸ್, ಬಿಜೆಪಿ ನಕಲಿ ದೇಶಭಕ್ತರಿಗೆ ರಾಷ್ಟ್ರಧ್ವಜದ ಘನತೆಯೂ ತಿಳಿದಿಲ್ಲ, ದೇಶದ ಗೌರವವೂ ತಿಳಿದಿಲ್ಲ. ಎಷ್ಟಾದರೂ ಗೋಡ್ಸೆ ಭಕ್ತರಲ್ಲವೇ, ಭಗವಾಧ್ವಜದ ಆರಾಧಕರಲ್ಲವೇ, ಸಂವಿಧಾನ ವಿರೋಧಿಗಳಲ್ಲವೇ, ಮನದೊಳಗೆ ಸಂಘದ ಪಾಠವಾದ ತಿರಂಗಾ ದ್ವೇಷ ಇಟ್ಟುಕೊಂಡಿರುವ ನಳೀನ್ ಕುಮಾರ್ ಕಟೀಲ್ ಅವರಿಗೆ ಧ್ವಜ ತಲೆಕೆಳಗಾಗಿಸುವುದೇ ಮೂಲ ಅಜೆಂಡಾ ಇರುವಂತಿದೆ ಎಂಬುದಾಗಿ ವಾಗ್ಧಾಳಿ ನಡೆಸಿದೆ.
ಬಿಜೆಪಿ ನಕಲಿ ದೇಶಭಕ್ತರಿಗೆ ರಾಷ್ಟ್ರಧ್ವಜದ ಘನತೆಯೂ ತಿಳಿದಿಲ್ಲ, ದೇಶದ ಗೌರವವೂ ತಿಳಿದಿಲ್ಲ.
ಎಷ್ಟಾದರೂ ಗೋಡ್ಸೆ ಭಕ್ತರಲ್ಲವೇ, ಭಗವಾಧ್ವಜದ ಆರಾಧಕರಲ್ಲವೇ,
ಸಂವಿಧಾನ ವಿರೋಧಿಗಳಲ್ಲವೇ,ಮನದೊಳಗೆ ಸಂಘದ ಪಾಠವಾದ ತಿರಂಗಾ ದ್ವೇಷ ಇಟ್ಟುಕೊಂಡಿರುವ @nalinkateel ಅವರಿಗೆ ಧ್ವಜ ತಲೆಕೆಳಗಾಗಿಸುವುದೇ ಮೂಲ ಅಜೆಂಡಾ ಇರುವಂತಿದೆ#NakliDeshBhakts pic.twitter.com/9OHByP18jH
— Karnataka Congress (@INCKarnataka) August 12, 2022
ರಾಷ್ಟ್ರಧ್ವಜ ಮಾರಾಟದ ಸರಕಾದಾಗ ಅದರ ಗುಣಮಟ್ಟ ಕಳೆದುಹೋಗುತ್ತವೆ, ವ್ಯಾಪಾರವೇ ಮುಖ್ಯವಾದಾಗ ಶ್ರದ್ಧೆ, ಭಕ್ತಿಗಳು ಕಳೆದುಹೋಗುತ್ತದೆ. ಮೊಟ್ಟೆಯಾಕಾರದ ಚಕ್ರ, ನಿಯಮವಿಲ್ಲದ ರಚನೆ, ಆಕಾರವಿಲ್ಲದ ಧ್ವಜ, ಹರಿದ, ಬಣ್ಣಗೆಟ್ಟ ರಾಷ್ಟ್ರಧ್ವಜ ಇವುಗಳಿಗೆ ಹೊಣೆ ಯಾರು, ಈ ಅಪಸಾವ್ಯಗಳಿಗೆ ಶಿಕ್ಷೆ ಯಾರಿಗೆ ಎಂದು ಪ್ರಶ್ನಿಸಿದೆ.
ರಾಷ್ಟ್ರಧ್ವಜ ಮಾರಾಟದ ಸರಕಾದಾಗ ಅದರ ಗುಣಮಟ್ಟ ಕಳೆದುಹೋಗುತ್ತವೆ, ವ್ಯಾಪಾರವೇ ಮುಖ್ಯವಾದಾಗ ಶ್ರದ್ಧೆ, ಭಕ್ತಿಗಳು ಕಳೆದುಹೋಗುತ್ತದೆ.
ಮೊಟ್ಟೆಯಾಕಾರದ ಚಕ್ರ, ನಿಯಮವಿಲ್ಲದ ರಚನೆ,
ಆಕಾರವಿಲ್ಲದ ಧ್ವಜ,
ಹರಿದ, ಬಣ್ಣಗೆಟ್ಟ ರಾಷ್ಟ್ರಧ್ವಜಇವುಗಳಿಗೆ ಹೊಣೆ ಯಾರು, ಈ ಅಪಸಾವ್ಯಗಳಿಗೆ ಶಿಕ್ಷೆ ಯಾರಿಗೆ @BJP4Karnataka?#NakliDeshBhakts pic.twitter.com/lvp1j5k694
— Karnataka Congress (@INCKarnataka) August 12, 2022