ಬೆಂಗಳೂರು: ಹಾಲಿನ ದರ ಏರಿಸಿದ ( Milk Price Hike ) ಸರ್ಕಾರ ಇತ್ತ ಗ್ರಾಹಕರಿಗೂ, ಅತ್ತ ರೈತರಿಗೂ ಬದುಕನ್ನು ಭಾರವಾಗಿಸಿದೆ. ರೈತರಿಗೆ ಹಾಲಿಗೆ ಸಿಗುವ ದರಕ್ಕಿಂತ ಪಶು ಆಹಾರದ ದರ ಮೂರು ಪಟ್ಟು ಹೆಚ್ಚಾಗಿದೆ, ರೈತರಿಗೆ ಒಂದು ರೂಪಾಯಿ ಕೊಟ್ಟು, ಮೂರು ರೂಪಾಯಿ ಕಿತ್ತುಕೊಳ್ಳುವ ಯೋಜನೆ ರೂಪಿಸಿ ಮೊಸಗೊಳಿಸುತ್ತಿದೆ ಬಿಜೆಪಿ. ಬಸವರಾಜ ಬೊಮ್ಮಾಯಿ ರೈತರನ್ನು ಮೂರ್ಖರೆಂದು ಭಾವಿಸಿದ್ದೀರಾ? ಎಂದು ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ.
ಹಾಲಿನ ದರ ಏರಿಸಿದ ಸರ್ಕಾರ ಇತ್ತ ಗ್ರಾಹಕರಿಗೂ, ಅತ್ತ ರೈತರಿಗೂ ಬದುಕನ್ನು ಭಾರವಾಗಿಸಿದೆ.
ರೈತರಿಗೆ ಹಾಲಿಗೆ ಸಿಗುವ ದರಕ್ಕಿಂತ ಪಶು ಆಹಾರದ ದರ ಮೂರು ಪಟ್ಟು ಹೆಚ್ಚಾಗಿದೆ,
ರೈತರಿಗೆ ಒಂದು ರೂಪಾಯಿ ಕೊಟ್ಟು, ಮೂರು ರೂಪಾಯಿ ಕಿತ್ತುಕೊಳ್ಳುವ ಯೋಜನೆ ರೂಪಿಸಿ ಮೊಸಗೊಳಿಸುತ್ತಿದೆ ಬಿಜೆಪಿ.@BSBommai ರೈತರನ್ನು ಮೂರ್ಖರೆಂದು ಭಾವಿಸಿದ್ದೀರಾ? pic.twitter.com/gnpdLu99S7
— Karnataka Congress (@INCKarnataka) December 13, 2022
ಈ ಕುರಿತಂತೆ ಟ್ವಿಟ್ ಮಾಡಿದ್ದು, ‘ಒಂದೇ ಮಳೆಗೆ ಮತ್ತೆ ಗುಂಡಿ ಬೀಳುವುದು ಖಚಿತ’ ಎಂದು ಯಾವ ದಾರಿಹೋಕರಿಗೆ ಕೇಳಿದರೂ ಮುಚ್ಚಿದ ಗುಂಡಿಯ ಗುಣಮಟ್ಟವನ್ನು ಹೇಳುತ್ತಾರೆ. ಇದು 40% ಕಮಿಷನ್ ಕಾಮಗಾರಿಯ ‘ಗುಣಮಟ್ಟ ಪರಿಶೀಲನೆ’ ಬಿಬಿಎಂಪಿಯ ಕಚೇರಿಯಲ್ಲೇ ನಡೆಯುವ ಪರಿಣಾಮ. ಇದಕ್ಕೆ ಹೊಣೆ ಯಾರು? ರೋಲ್ ಕಾಲ್ ಬಿಜೆಪಿ ಸರ್ಕಾರವೋ ಅಥವಾ ಬಿಬಿಎಂಪಿ ಅಧಿಕಾರಿಗಳೋ? ಎಂದು ಕೇಳಿದೆ.
'ಒಂದೇ ಮಳೆಗೆ ಮತ್ತೆ ಗುಂಡಿ ಬೀಳುವುದು ಖಚಿತ' ಎಂದು ಯಾವ ದಾರಿಹೋಕರಿಗೆ ಕೇಳಿದರೂ ಮುಚ್ಚಿದ ಗುಂಡಿಯ ಗುಣಮಟ್ಟವನ್ನು ಹೇಳುತ್ತಾರೆ. ಇದು 40% ಕಮಿಷನ್ ಕಾಮಗಾರಿಯ 'ಗುಣಮಟ್ಟ ಪರಿಶೀಲನೆ' ಬಿಬಿಎಂಪಿಯ ಕಚೇರಿಯಲ್ಲೇ ನಡೆಯುವ ಪರಿಣಾಮ.
ಇದಕ್ಕೆ ಹೊಣೆ ಯಾರು? ರೋಲ್ ಕಾಲ್ ಬಿಜೆಪಿ ಸರ್ಕಾರವೋ ಅಥವಾ ಬಿಬಿಎಂಪಿ ಅಧಿಕಾರಿಗಳೋ?#40percentsarkara pic.twitter.com/TnIIWvOUXV
— Karnataka Congress (@INCKarnataka) December 13, 2022
ಬಿಜೆಪಿ ಅದೆಷ್ಟು ಸಂವಿಧಾನ, ಪ್ರಜಾಪ್ರಭುತ್ವದ ವಿರೋಧಿ ಎನ್ನಲು ಶಾಸಕ ಪ್ರೀತಮ್ ಗೌಡರ ಹೇಳಿಕೆಯೇ ನಿದರ್ಶನ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ನೀಡಿದವರು, ಮತ ನೀಡದವರು ಎಲ್ಲರೂ ಪ್ರಭುಗಳೇ ಆಗಿರುತ್ತಾರೆ. ಸಂವಿಧಾನಾತ್ಮಕ ಹುದ್ದೆಯಲ್ಲಿ ಕುಳಿತು ಪ್ರಜೆಗಳ ಹಕ್ಕನ್ನು ನಿರಾಕರಿಸುವ ಬಿಜೆಪಿ ಈ ದೇಶದ ಅಭಿವೃದ್ಧಿ ಮಾರಕವಾಗಿದೆ ಎಂದು ವಾಗ್ಧಾಳಿ ನಡೆಸಿದೆ.
ಬಿಜೆಪಿ ಅದೆಷ್ಟು ಸಂವಿಧಾನ, ಪ್ರಜಾಪ್ರಭುತ್ವದ ವಿರೋಧಿ ಎನ್ನಲು ಶಾಸಕ ಪ್ರೀತಮ್ ಗೌಡರ ಹೇಳಿಕೆಯೇ ನಿದರ್ಶನ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ನೀಡಿದವರು, ಮತ ನೀಡದವರು ಎಲ್ಲರೂ ಪ್ರಭುಗಳೇ ಆಗಿರುತ್ತಾರೆ.
ಸಂವಿಧಾನಾತ್ಮಕ ಹುದ್ದೆಯಲ್ಲಿ ಕುಳಿತು ಪ್ರಜೆಗಳ ಹಕ್ಕನ್ನು ನಿರಾಕರಿಸುವ @BJP4Karnataka ಈ ದೇಶದ ಅಭಿವೃದ್ಧಿ ಮಾರಕವಾಗಿದೆ. pic.twitter.com/nQ8LdOPw02
— Karnataka Congress (@INCKarnataka) December 13, 2022
ಕೋವಿಡ್ನಿಂದ ಯಾವುದೇ ಪಾಠ ಕಲಿಯದ ಸರ್ಕಾರ ಆರೋಗ್ಯ ಇಲಾಖೆಯನ್ನು ಇನ್ನಷ್ಟು ಹದಗೆಡಿಸಿದೆ, ಆಂಬುಲೆನ್ಸ್, ಚಿಕಿತ್ಸೆ ಕೊರತೆಗಳಿಂದ ಸಾವುಗಳಾಗುತ್ತಿವೆ. ಇದೇ ಹೊತ್ತಿನಲ್ಲಿ ಅಕಾಲಿಕ ಮಳೆಯಿಂದಾಗಿ ಝೀಕಾ, ಡೆಂಘ್ಯೂ, ಚಿಕನ್ ಗುನ್ಯಾದಂತಹ ರೋಗಗಳು ಹೆಚ್ಚುತ್ತಿರುವಾಗ ವೈದ್ಯಕೀಯ ಸೇವೆಯನ್ನು ಸನ್ನದ್ದಗೊಳಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ? ಎಂದು ಪ್ರಶ್ನಿಸಿದೆ.
ಕೋವಿಡ್ನಿಂದ ಯಾವುದೇ ಪಾಠ ಕಲಿಯದ ಸರ್ಕಾರ ಆರೋಗ್ಯ ಇಲಾಖೆಯನ್ನು ಇನ್ನಷ್ಟು ಹದಗೆಡಿಸಿದೆ,
ಆಂಬುಲೆನ್ಸ್, ಚಿಕಿತ್ಸೆ ಕೊರತೆಗಳಿಂದ ಸಾವುಗಳಾಗುತ್ತಿವೆ.ಇದೇ ಹೊತ್ತಿನಲ್ಲಿ ಅಕಾಲಿಕ ಮಳೆಯಿಂದಾಗಿ ಝೀಕಾ, ಡೆಂಘ್ಯೂ, ಚಿಕನ್ ಗುನ್ಯಾದಂತಹ ರೋಗಗಳು ಹೆಚ್ಚುತ್ತಿರುವಾಗ ವೈದ್ಯಕೀಯ ಸೇವೆಯನ್ನು ಸನ್ನದ್ದಗೊಳಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ? pic.twitter.com/3SLZppqNBE
— Karnataka Congress (@INCKarnataka) December 13, 2022