ಬೆಂಗಳೂರು: ಬಿಜೆಪಿಗೆ ( BJP ) ಎಂದೂ ಜೋಡಿಸುವುದು, ಕಟ್ಟುವುದು ತಿಳಿದಿಲ್ಲ, ಅವರದ್ದೇನಿದ್ದರೂ ಒಡೆಯುವ, ಕೆಡವುವ ಸಂಸ್ಕೃತಿ. #BharatJodoYatra ಯ ಯಶಸ್ಸನ್ನು ಸಹಿಸದ ಬಿಜೆಪಿ ಹತಾಶ ಸ್ಥಿತಿಗೆ ತಲುಪಿ ತನ್ನೊಳಗಿನ ಸ್ಯಾಡಿಸ್ಟ್ ಮನಸ್ಥಿತಿಯನ್ನು ಬ್ಯಾನರ್ಗಳ ಮೇಲೆ ತೋರಿಸುತ್ತಿದೆ. ಕೈಲಾಗದವರು ಮೈ ಪರಚಿಕೊಳ್ಳುವುದು ಎಂದರೆ ಇದೇ ಅಲ್ಲವೇ ಬಿಜೆಪಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಶ್ನಿಸಿದೆ.
ಬಿಜೆಪಿಗೆ ಎಂದೂ ಜೋಡಿಸುವುದು, ಕಟ್ಟುವುದು ತಿಳಿದಿಲ್ಲ, ಅವರದ್ದೇನಿದ್ದರೂ ಒಡೆಯುವ, ಕೆಡವುವ ಸಂಸ್ಕೃತಿ.#BharatJodoYatra ಯ ಯಶಸ್ಸನ್ನು ಸಹಿಸದ ಬಿಜೆಪಿ ಹತಾಶ ಸ್ಥಿತಿಗೆ ತಲುಪಿ ತನ್ನೊಳಗಿನ ಸ್ಯಾಡಿಸ್ಟ್ ಮನಸ್ಥಿತಿಯನ್ನು ಬ್ಯಾನರ್ಗಳ ಮೇಲೆ ತೋರಿಸುತ್ತಿದೆ.
ಕೈಲಾಗದವರು ಮೈ ಪರಚಿಕೊಳ್ಳುವುದು ಎಂದರೆ ಇದೇ ಅಲ್ಲವೇ @BJP4Karnataka? pic.twitter.com/WOf4LoySNl
— Karnataka Congress (@INCKarnataka) September 29, 2022
ಈ ಕುರಿತು ಟ್ವಿಟ್ ( Twitter ) ಮಾಡಿರುವಂತ ಕಾಂಗ್ರೆಸ್, 40% ಕಮಿಷನ್ ಆರೋಪಕ್ಕೆ ದಾಖಲೆ ಕೊಡಿ ಎಂಬ ಪಾಲಾಯನವಾದಿ ಮಾತುಗಳನ್ನಾಡುವ #PayCM ಬಸವರಾಜ ಬೊಮ್ಮಾಯಿ ಅವರೇ, ಕಳೆದ ಜನವರಿಯಲ್ಲೇ ಲೋಕಾಯುಕ್ತ ವರದಿ ನೀಡಿದ್ದನ್ನು ಮರೆಮಾಚುತ್ತಿರುವುದೇಕೆ? #40percentsarkara ದ ಕಮಿಷನ್ ಕರ್ಮದ ಬಗೆಗಿನ ಆ ವರದಿ ಏನಾಯ್ತು? ಲೋಕಾಯುಕ್ತ ನೀಡಿದ ಆ ವರದಿಯನ್ನು ಬಹಿರಂಗಗೊಳಿಸಲು ಭಯವೇಕೆ? ಅದು ನಿಮಗೆ ದಾಖಲೆಯಲ್ಲವೇ? ಎಂದು ಹೇಳಿದೆ.
40% ಕಮಿಷನ್ ಆರೋಪಕ್ಕೆ ದಾಖಲೆ ಕೊಡಿ ಎಂಬ ಪಾಲಾಯನವಾದಿ ಮಾತುಗಳನ್ನಾಡುವ #PayCM @BSBommai ಅವರೇ,
ಕಳೆದ ಜನವರಿಯಲ್ಲೇ ಲೋಕಾಯುಕ್ತ ವರದಿ ನೀಡಿದ್ದನ್ನು ಮರೆಮಾಚುತ್ತಿರುವುದೇಕೆ?#40percentsarkara ದ
ಕಮಿಷನ್ ಕರ್ಮದ ಬಗೆಗಿನ ಆ ವರದಿ ಏನಾಯ್ತು?ಲೋಕಾಯುಕ್ತ ನೀಡಿದ ಆ ವರದಿಯನ್ನು ಬಹಿರಂಗಗೊಳಿಸಲು ಭಯವೇಕೆ?
ಅದು ನಿಮಗೆ ದಾಖಲೆಯಲ್ಲವೇ?
— Karnataka Congress (@INCKarnataka) September 29, 2022
ದಸರಾ ಅನುದಾನದಲ್ಲೂ 40% ಕಮಿಷನ್ ಕರಾಮತ್ತು ನಡೆದಿದೆಯೇ ಎಂಬ ಅನುಮಾನ ಮೂಡುತ್ತಿದೆ! ಬಿಜೆಪಿ ಎಂಬ ಗಾಂಪರ ಗುಂಪಿನ ಸರ್ಕಾರದಲ್ಲಿ ಹೆಜ್ಜೆಹೆಜ್ಜೆಗೂ ಎಡವಟ್ಟುಗಳು, ವೈಫಲ್ಯಗಳು ಸಿಗುತ್ತಿವೆ. ದಸರಾ ಕವಿಗೋಷ್ಠಿಯ ಎಡವಟ್ಟಿನ ನಂತರ ಕ್ರೀಡಾಕೂಟದ ಕ್ರೀಡಾಪಟುಗಳಿಗೆ ವಸತಿ ನೀಡದೆ ಅವಮಾನ. ಕನಿಷ್ಠ ವಸತಿ ನೀಡಲೂ ಯೋಗ್ಯತೆ ಇಲ್ಲವೇ ಈ ಸರ್ಕಾರಕ್ಕೆ? ಎಂದು ಕಿಡಿಕಾರಿದೆ.
ದಸರಾ ಅನುದಾನದಲ್ಲೂ 40% ಕಮಿಷನ್ ಕರಾಮತ್ತು ನಡೆದಿದೆಯೇ ಎಂಬ ಅನುಮಾನ ಮೂಡುತ್ತಿದೆ!
ಬಿಜೆಪಿ ಎಂಬ ಗಾಂಪರ ಗುಂಪಿನ ಸರ್ಕಾರದಲ್ಲಿ ಹೆಜ್ಜೆಹೆಜ್ಜೆಗೂ ಎಡವಟ್ಟುಗಳು, ವೈಫಲ್ಯಗಳು ಸಿಗುತ್ತಿವೆ.
ದಸರಾ ಕವಿಗೋಷ್ಠಿಯ ಎಡವಟ್ಟಿನ ನಂತರ ಕ್ರೀಡಾಕೂಟದ ಕ್ರೀಡಾಪಟುಗಳಿಗೆ ವಸತಿ ನೀಡದೆ ಅವಮಾನ.
ಕನಿಷ್ಠ ವಸತಿ ನೀಡಲೂ ಯೋಗ್ಯತೆ ಇಲ್ಲವೇ ಈ ಸರ್ಕಾರಕ್ಕೆ? pic.twitter.com/JNOs2RoNPc
— Karnataka Congress (@INCKarnataka) September 29, 2022
40% ಬಿಜೆಪಿಗೆ, 60% ನೀರಿಗೆ, 0% ಜನರಿಗೆ! ಬಿಜೆಪಿಯ ಭ್ರಷ್ಟಾಚಾರಕ್ಕೆ, 40% ಕಮಿಷನ್ ಲೂಟಿಗೆ ಮತ್ತೊಂದು ಕಾಮಗಾರಿ ಕುಸಿಯುವ ಮೂಲಕ ಸಾಕ್ಷ್ಯ ಒದಗಿಸಿದೆ. ನಿರ್ಮಾಣ ಹಂತದಲ್ಲಿದ್ದ ಗಂಗೊಳ್ಳಿಯ ಮೀನುಗಾರಿಕಾ ಜೆಟ್ಟಿ ಕುಸಿತಗೊಂಡಿದ್ದು #40Percentsarkara ದ ಕಮಿಷನ್ ಕರ್ಮದ ಸಾಕ್ಷಿಯಲ್ಲವೇ #PayCM ಬಸವರಾಜ ಬೊಮ್ಮಾಯಿ ಅವರೇ? ಇದರ ತನಿಖೆಯಾಗಬೇಕಲ್ಲವೇ? ಎಂದು ಪ್ರಶ್ನಿಸಿದೆ.
40% ಬಿಜೆಪಿಗೆ
60% ನೀರಿಗೆ
0% ಜನರಿಗೆ!
ಬಿಜೆಪಿಯ ಭ್ರಷ್ಟಾಚಾರಕ್ಕೆ, 40% ಕಮಿಷನ್ ಲೂಟಿಗೆ ಮತ್ತೊಂದು ಕಾಮಗಾರಿ ಕುಸಿಯುವ ಮೂಲಕ ಸಾಕ್ಷ್ಯ ಒದಗಿಸಿದೆ.ನಿರ್ಮಾಣ ಹಂತದಲ್ಲಿದ್ದ ಗಂಗೊಳ್ಳಿಯ
ಮೀನುಗಾರಿಕಾ ಜೆಟ್ಟಿ ಕುಸಿತಗೊಂಡಿದ್ದು #40Percentsarkara ದ ಕಮಿಷನ್ ಕರ್ಮದ ಸಾಕ್ಷಿಯಲ್ಲವೇ #PayCM @BSBommai ಅವರೇ?
ಇದರ ತನಿಖೆಯಾಗಬೇಕಲ್ಲವೇ? pic.twitter.com/89xmDZbtQv— Karnataka Congress (@INCKarnataka) September 29, 2022
ಅಭಿವೃದ್ದಿಶೂನ್ಯತೆಗೆ ಬೇಸತ್ತು ಪೀಣ್ಯ ಕೈಗಾರಿಕಾ ಪ್ರದೇಶದ ಮೂಲಸೌಕರ್ಯದ ಅಭಿವೃದ್ಧಿ ನಾವೇ ಮಾಡಿಕೊಳ್ತೇವೆ ಎಂದು ಉದ್ಯಮಿಗಳು ಪತ್ರ ಬರೆದಿದ್ದಾರೆ. #40Percentsarkara ದ ಭ್ರಷ್ಟಾಚಾರಕ್ಕೆ, ಬಿಬಿಎಂಪಿಯ ಅಸಾಮರ್ಥ್ಯಕ್ಕೆ ಇದು ಕಪಾಳಮೋಕ್ಷವಲ್ಲವೇ? ನಗರಾಭಿವೃದ್ಧಿ ಇಲಾಖೆಯ ಹೊಂದಿರುವ #PayCM ಅವರು ತಲೆತಗ್ಗಿಸಿ ನಿಲ್ಲುವ ಸಮಯವಿದು ಎಂದಿದೆ.
ಅಭಿವೃದ್ದಿಶೂನ್ಯತೆಗೆ ಬೇಸತ್ತು ಪೀಣ್ಯ ಕೈಗಾರಿಕಾ ಪ್ರದೇಶದ ಮೂಲಸೌಕರ್ಯದ ಅಭಿವೃದ್ಧಿ ನಾವೇ ಮಾಡಿಕೊಳ್ತೇವೆ ಎಂದು ಉದ್ಯಮಿಗಳು ಪತ್ರ ಬರೆದಿದ್ದಾರೆ.#40Percentsarkara ದ ಭ್ರಷ್ಟಾಚಾರಕ್ಕೆ, ಬಿಬಿಎಂಪಿಯ ಅಸಾಮರ್ಥ್ಯಕ್ಕೆ ಇದು ಕಪಾಳಮೋಕ್ಷವಲ್ಲವೇ?
ನಗರಾಭಿವೃದ್ಧಿ ಇಲಾಖೆಯ ಹೊಂದಿರುವ #PayCM ಅವರು ತಲೆತಗ್ಗಿಸಿ ನಿಲ್ಲುವ ಸಮಯವಿದು. pic.twitter.com/6Ox9JzPxjs
— Karnataka Congress (@INCKarnataka) September 29, 2022