ಬೆಂಗಳೂರು: ಕೆಲ ದಿನಗಳ ಹಿಂದೆ ನಗರದ ಜಯನಗರದಲ್ಲಿರುವ ಕೆ ಎಸ್ ಆರ್ ಟಿ ಸಿ ಆಸ್ಪತ್ರೆಯನ್ನು ( KSRTC Hospital ) ಖಾಸಗಿ ಟ್ರಸ್ಟ್ ಗೆ ವರ್ಗಾಹಿಸೋ ಸಂಬಂಧ ತಾವು ಒತ್ತಡ ಹಾಕುತ್ತಿಲ್ಲ ಎಂಬುದಾಗಿ ಸಂಸದ ತೇಜಸ್ವಿ ಸೂರ್ಯ ( MP Tejasvi Surya ) ಸ್ಪಷ್ಟ ಪಡಿಸಿದ್ದರು. ಈ ಬೆನ್ನಲ್ಲೇ ಅವರು ಒತ್ತಡ ಹಾಕುತ್ತಿದ್ದಾರೆ. ಉಚಿತವಾಗಿ 7904.20 ಚದರಡಿ ಜಾಗವನ್ನು ಪಡೆಯೋ ಹುನ್ನಾರ ನಡೆಸಿದ್ದಾರೆ ಎಂಬುದಾಗಿ ಕೆ ಎಸ್ ಆರ್ ಟಿ ಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಗಂಭೀರ ಆರೋಪ ಮಾಡಿದೆ.
ನೆರೆ ಸಂತ್ರಸ್ತ ‘ರೈತ’ರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ‘ಬೆಳೆ ಪರಿಹಾರ’ಕ್ಕೆ 300 ಕೋಟಿ ರೂ ಬಿಡುಗಡೆ
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವಂತ ಕೆ ಎಸ್ ಆರ್ ಟಿ ಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ನ ಅಧ್ಯಕ್ಷ ಹೆಚ್ ವಿ ಅನಂತಸುಬ್ಬರಾವ್, ಹಲವಾರು ದಶಕಗಳಿಂದ ಬೆಂಗಳೂರು ಜಯನಗರದ 4ನೇ ಬ್ಲಾಕ್ ನಲ್ಲಿರುವ ಕೆ ಎಸ್ ಆರ್ ಟಿ ಸಿ ಆಸ್ಪತ್ರೆಯು ಸಾರಿಗೆ ನಿಗಮದ ಸಿಬ್ಬಂದಿಗಳಿಗೆ ಮತ್ತು ಕುಟುಂಬಸ್ಥರಿಗೆ ಸೇವೆ ಸಲ್ಲಿಸುತ್ತಿದೆ. ಈ ಆಸ್ಪತ್ರೆಯನ್ನು ಉನ್ನತ ದರ್ಜೆಗೆ ಏರಿಸಿ, ಅದರ ಸೇವೆಯನ್ನು ಹೆಚ್ಚಿಸಬೇಕೆಂದು ನಾವು ಕೆ ಎಸ್ ಆರ್ ಟಿ ಸಿ ಅಧಿಕಾರ ವರ್ಗಕ್ಕೆ ವಿನಂತಿಸಿದ್ದೆವು. ಇದಕ್ಕೆ ಸೊಪ್ಪು ಹಾಕದ ಆಡಳಿತ ವರ್ಗವು ಸಂಸದ ತೇಜಸ್ವಿ ಸೂರ್ಯ ಅವರ ಅನೈತಿಕ ಒತ್ತಡದ ಮೇರೆಗೆ ಶ್ರೀ ವಾಸವಿ ಚಾರಿಟೆಬಲ್ ಟ್ರಸ್ಟ್ ಗೆ ಈ ಆಸ್ಪತ್ರೆಯನ್ನು ಕೊಡಲು ತುದಿಗಾಲಲ್ಲಿ ನಿಂತಿದೆ ಎಂಬುದಾಗಿ ಗಂಭೀರ ಆರೋಪ ಮಾಡಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಒತ್ತಡದ ಮೇರೆಗೆ ದಿನಾಂಕ 25-07-2022ರಂದು ಟೆಂಡರ್ ಜಾಹೀರಾತನ್ನು ಕೊಟ್ಟಿದೆ. ಆದ್ರೇ ಯಾವುದೇ ಬಾಡಿಗೆಯಿಲ್ಲದೆ ಅಥವಾ ಲೀಸ್ ಹಣವಿಲ್ಲದೇ ಉಚಿತವಾಗಿ ಬೆಂಗಳೂರಿನ ಪ್ರಮುಖ ಪ್ರದೇಶದಲ್ಲಿರುವ 7904.20 ಚದರಡಿ ಜಾಗವನ್ನು ಕೊಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಇನ್ನೂ ಮಂಚ, ಹಾಸಿಗೆ, ಹೊದಿಕೆ ಮತ್ತು ತಲೆದಿಂಬುಗಳು, ಹಾಸಿಗೆ ಬದಿಯಲ್ಲಿರುವ ಮಾನಿಟರ್, ಲಾಕರ್, ಹೆಚ್ ಎಫ್ ಎನ್ ಸಿ, 48 ಹಾಸಿಗೆಗಳಿಗೂ ಆಮ್ಲಜನಕ ವ್ಯವಸ್ಥೆ ಇದೆ ಇಂತಹ ಆಸ್ಪತ್ರೆಯ ಸೌಲಭ್ಯವನ್ನೇ ಸಂಸದ ತೇಜಸ್ವಿ ಸೂರ್ಯ ಒತ್ತಡಕ್ಕೆ ಮಣಿದು ಖಾಸಗಿ ಚಾರಿಟಬಲ್ ಗೆ ಕೊಡೋದಕ್ಕೆ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಹೀಗೆ ನೀಡೋದರಿಂದ ಸಾರಿಗೆ ಸಂಸ್ಥೆಗೆ ಯಾವುದೇ ರೀತಿಯ ಉಪಯೋಗವಾಗಲ್ಲ. ಈ ಆಸ್ಪತ್ರೆ ಕೆ ಎಸ್ ಆರ್ ಟಿ ಸಿಯ ನೌಕರರು, ಅವರ ಕುಟುಂಬದ ವರ್ಗದವರಿಗೆ ಮಾತ್ರ ಇರುವ ಸಂಸ್ಥೆಯೇ ವಿನಗಾ ಖಾಸಗಿಯವರಿಗೋಸ್ಕರ ಕಟ್ಟಿರೋದಲ್ಲ. ನಾವು ಸಾರಿಗೆ ನಿಗಮದ ಈ ಕಾರ್ಮಿಕ ವಿರೋಧಿ ಕ್ರಮ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರ ಅನೈತಿಕ ಒತ್ತಡದ ವಿರುದ್ಧ ಪ್ರತಿಭಟನೆ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಸಿಎಂ ಬೊಮ್ಮಾಯಿ ಕೂಡಲೇ ಮಧ್ಯಪ್ರವೇಶಿಸಿ, ಆಸ್ಪತ್ರೆಯನ್ನು ಸಾರಿಗೆ ಸಂಸ್ಥೆಗೆ ಉಳಿಸಿ, ಸಂಸದ ತೇಜಸ್ವಿ ಸೂರ್ಯ ಹುಚ್ಚಾಟವನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.
ರಾಜ್ಯದ ಜನತೆಗೆ ಗುಡ್ ನ್ಯೂಸ್: ರಾಜ್ಯಾಧ್ಯಂತ ‘ನಮ್ಮ ಕ್ಲಿನಿಕ್’ ವಿಸ್ತರಣೆ | Namma Clinic