ಬೆಂಗಳೂರು: ರೌಡಿ ಶೀಟರ್ ಸೈಲೆಂಟ್ ಸುನಿಲ್ ಆಯೋಜಿಸಿದ್ದಂತ ಕಾರ್ಯಕ್ರಮದಲ್ಲಿ ಬಿಜೆಪಿಯ ನಾಯಕರು ( BJP Leader ) ಭಾಗಿಯಾಗಿದ್ದರು. ಈಗ ಇದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ( Minister Dr CN Ashwathnarayana ) ಏನು ಹೇಳಿದರು ಅಂತ ಮುಂದೆ ಓದಿ.
ನಗರದಲ್ಲಿ ಇಂದು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾನೂನಿನ ಚೌಕಟ್ಟಿನಲ್ಲಿ ಬದುಕಲು ಅವರಿಗೂ ಅವಕಾಶ ಕೊಡೋಣ. ಕಾನೂನು ಎಲ್ಲರಿಗೂ ಅನ್ವಯ ಆಗುತ್ತದೆ. ಕಾನೂನು ಏನಾದರೂ ತಪ್ಪು ಮಾಡಿದ್ದರೇ ತಪ್ಪೇ ಎಂದರು.
ಸಮಾಜದಲ್ಲಿ ಎಲ್ಲರಿಗೂ ಒಳ್ಳೆಯ ರೀತಿಯಲ್ಲಿ ಬದುಕಲು ಅವಕಾಶವಿದೆ. ಅದಕ್ಕೆ ಯಾವುದೇ ರೀತಿಯ ನಾಮಕರಣ ಮಾಡುವುದು ತಪ್ಪು. ಬದುಕಲು ಅವಕಾಶ ಕೊಡದೇ ಬರಿ ನಿಂದಿಸುವ ಕೆಲಸ ಆಗಬಾರದು. ಚಾರ್ಜ್ ಶೀಟ್, ಶಿಕ್ಷೆ ಆಗಿದ್ದರೇ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ ಎಂದು ಹೇಳಿದರು. ಈ ಮೂಲಕ ರೌಡಿಶೀಟರ್ ಬಗ್ಗೆ ಸಚಿವರು ಸಾಫ್ಟ್ ಕಾರ್ನರ್ ತೊರಿಸಿದ್ದಾರೆ.
ಮತ್ತೊಂದೆಡೆ ಗೃಹ ಸಚಿವ ಅರಗ ಜ್ಞಾನೇಂದ್ರ ರೌಡಿ ಶೀಟರ್ ಸೈಲೆಂಟ್ ಸುನಿಲ್ ರಕ್ತ ದಾನ ಶಿಬಿರ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದರ ಬಗ್ಗೆ ಮಾತನಾಡಿ, ನನಗೆ ಆ ಬಗ್ಗೆ ಐಡಿಯಾ ಇಲ್ಲ. ನಾನು ನಿನ್ನೆ ಇಡೀ ದಿನ ಕ್ಷೇತ್ರದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆನು. ಸುನಿಲ್ ಕಾರ್ಯಕ್ರಮದ ಬಗ್ಗೆ ಮಾಹಿತಿ ಪಡೆದುಕೊಳ್ಳುವೆ ಎಂದರು.
BIGG NEWS: ಮೈಶುಗರ್ ಕಾರ್ಖಾನೆಯನ್ನು ಯಾವ ರೀತಿ ಮಾಡಿದರೆಂದು ಗೊತ್ತಿದೆ: ಅಶ್ವತ್ಥ್ ನಾರಾಯಣ
ಒಟ್ಟಾರೆ ರೌಡಿ ಶೀಟರ್ ಸೈಲೆಂಟ್ ಸುನಿಲ್ ರಕ್ತ ದಾನ ಶಿಬಿರ ಕಾರ್ಯಕ್ರಮಕ್ಕೆ ಬಿಜೆಪಿ ನಾಯಕರನ್ನು ಆಹ್ವಾನಿಸಿ, ಸೈಲೆಂಟ್ ಆಗಿ ರಾಜಕೀಯಕ್ಕೆ ಎಂಟ್ರಿ ಕೊಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ಎನ್ನಲಾಗುತ್ತಿದೆ. ಈ ಮೂಲಕ ರೌಡಿ ಶೀಟರ್ ರಾಜಕೀಯ ಸೇರುತ್ತಾರಾ ಎನ್ನುವಂತ ಹಲವು ಕುತೂಹಲವನ್ನು ಹುಟ್ಟು ಹಾಕಿದ್ದಾವೆ.